ಹೊಸ ವರುಷ- ಹೊಸ ಬಾಳು !

ಹೊಸ ವರುಷ- ಹೊಸ ಬಾಳು !

ಕವನ

ಕಾಲಚಕ್ರ ತಿರುಗುತಿದೆ , ಒಡನೆಯೇ ದಿನಗಳು,ವರ್ಷಗಳು
ಹಳೆಯ ವರ್ಷ ಅಸ್ತಯಿಸಲು
ಹೊಸ ವರ್ಷದ ಸೂರ್ಯ ಉದಯಿಸಿದೆ
ಕೋಟಿ, ಕೋಟಿ ಬಾಳ ಬೆಳಗಲು
ಮನವ ಮಾಡಲು ಹರುಷದ ಕಡಲು


ಕಳೆದ ನೋವು-ಚಿಂತೆಯ ಚಿತ್ರ
ಮನದಲಿ ಮಾಸಿದಂತೆ ಕಂಡಿದೆ
ಬಾಳಿನ ಹೊಸ ಬೆಳಕಿನ ಆಟಕ್ಕೆ
ಕಲುಷಿತ  ಮನವು ತಿಳಿಯಾಗಿದೆ


ಹೊಸತು,ಈಗ ಎಲ್ಲವೂ ಹೊಸತು
ಹೊಸವರ್ಷ, ಹೊಸ ಬಾಳು, ಹೊಸ ಜಗವು
ಈಗಾಗಿದೆ ಉಸಿರೂ ಹೊಸತು
ಬಾಳು ಈಗಿನ್ನೂ ಹೆಚ್ಚು
ವರ್ಣರಂಜಿತ ಪವಿತ್ರ ಹಾಗೂ ವೈವಿಧ್ಯಮಯ


ಹೊಸ ವರ್ಷ ಬಂದಿದೆ
ತನ್ನೆಲ್ಲಾ ಸಡಗರ ವಿಜ್ರುಂಭಣೆಯಲಿ
ಹೊಸ ಬಾಳ ಮಾಡಲು
ಜೇನ ಕಡಲು ರಸ ಹೊನಲು


ಹೊಸ ವರ್ಷ, ಹೊಸ ಬಾಳು ,ನೋವು-ನಲಿವು
ಅನುಭವಿಸಲು ಎದುರಿಸಲು  ಆನಂದಿಸಲು.


ಶ್ರೀ ನಾಗರಾಜ್.

Comments