ಹೊಸ ವರ್ಷಾ ಲೋಕ…

ಹೊಸ ವರ್ಷಾ ಲೋಕ…

ಕವನ

ಹೊಸ ವರ್ಷದ ಸೂರ್ಯನುದಯಿಸಲಿ ಇಂದು

ಝಗಮಗಿಸಲೀ  ವಿಶ್ವ ತಾ ಹೊಸ ಬೆಳಕಿನಲಿ॥

 

ಕಾಣದ ಸ್ವರ್ಗವದಳಿದು ಈ ನಿಸರ್ಗವದರಳಲಿ

ನವ ದೇವನೊಬ್ಬ ತಾ ಈ ವಿಶ್ವದೊಳವತರಿಸಲಿ

ನವೀನಧರ್ಮ, ಹೊಸ ನೀತಿ ಹೊರ ಹೊಮ್ಮಲಿ

ಹೊಸ ಮನ್ವಂತರಗಳು ಭವ್ಯ ಭವಿಷ್ಯ ನೀಡಲಿ॥

 

ನಮ್ಮ ಜಗಕೊಂದೇ ದೈವವದು ತಾನು ಹೊಮ್ಮಲಿ

ಬರಹಕೆ, ಮಾತಿಗೆ ಜಗ ಭಾಷೆಯ ಸದ್ದೊಂದಿರಲಿ

ಈ ಭೂಮಿಗೆ ಅನ್ಯಗ್ರಹ ನೆಂಟರಾಗಮನವಿರಲಿ

ಹೊಸ ಹೊಸತು ಒಳಿತು ತಾನದು ಚಿಮ್ಮಿ ಬರಲಿ॥

 

ವಿಶ್ವ ಭಾತೃತ್ವ ಸಂದೇಶವದು ತಾನದು ಮೊಳಗಲಿ

ಜಗ ಜಾತಿಗಳಳಿದು ಹೊಸ ಮನುಜನುದಯಿಸಲಿ

ಮಾನವ ತಾನೊಂದೇ ಎಂಬ ಮಂತ್ರ ಮೊಳಗಲಿ

ಬಡತನ ಶ್ರೀಮಂತಿಕೆ ತಾರತಮ್ಯ ತಾ ಬೆಸೆಯಲಿ॥

 

ಹೊಸ ಮನುಜ ಲೋಕವದೊಂದು ತಾನರಳಲಿ

ಸುಖ,ಸಂತೋಷ,ನೆಮ್ಮದಿಯ ಪ್ರಪಂಚವರಳಲಿ

ಭಯ,ಬೇಧ ಯುದ್ಧ ಸಂದೇಹಗಳು ತಾ ತೊಲಗಲಿ

ಹೊಸ ವಿಶ್ವ ಮಾನವ ತಾ ಪೂರ್ವದಲುದಯಿಸಲಿ॥

-ಕೆ. ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್