ಹೊಸ ವರ್ಷ - ಹಳೇ ಮನಸ್ಸು !

ಹೊಸ ವರ್ಷ - ಹಳೇ ಮನಸ್ಸು !

ಕವನ

ಹೊಸ  ವರ್ಷ  ಹೊಸ  ಬೆಳಕು
ಹoಬಲಿಸಿದೆ  ಈ  ಮನ
ನವೋದಯದ ಆಶಾಕಿರಣ
ಬಾಳಿಗೊoದು ನವಾಭರಣ
 
ವಾಸ್ತವ ಸoಗತಿಯ ಅರಿವು
ಅದೇ ಹಳೇ  ಮನಸ್ಸು
ರಾಗ-ದ್ವೇಷ  ಲೋಭ ಕ್ರೋಧ
ಸಿಡಿದೆದ್ದಿವೆ ಹಳೇ ನೆನಪು
ಕಹಿ ನಿರಾಸೆಯ ಛಾಯೆ
 
ಹೊಸ ವರುಷದ  ಅರ್ಥ  ಅನಿಸಿಕೆ
ಆಗದಿರಲಿ ಗೋಡೆ ಮೇಲಿನ ಕಾಲಚಕ್ರ ಕಾಗದ
ಅಳಿಯಲಿ ಹಳೇ ಮನಸ್ಸು- ಕಲ್ಮಶ
ಉದಯಸಲಿ  ಹೊಸ ಮನಸ್ಸು- ಉಲ್ಲಾಸ
ಸಾತ್ವಿಕತೆಯ ತoಗಾಳಿಯಲಿ
ಪ್ರೀತಿ ಶಾoತಿಯ ಹೂ ಬನದಲಿ
ನಿತ್ಯ ನೂತನ  ಚೇತನದಲಿ !
 
 
ಶ್ರೀ  ನಾಗರಾಜ.     10/1/17