ಹೊಸ ಸಿನೆಮಾ ವಿಮರ್ಶೆಗಳು

ಹೊಸ ಸಿನೆಮಾ ವಿಮರ್ಶೆಗಳು

ಬರಹ

ಒಂದು ಹೊಸ ಸಿನೆಮಾ ಬಿಡುಗಡೆಯಾದ ತಕ್ಷಣ, ನೀವು ಯಾವುದೇ ಪತ್ರಿಕೆ ಓದಲು ತೆಗೆದುಕೊಳ್ಳಿ ಅಥವಾ ಟಿವಿಯಲ್ಲಿ ಯಾವುದೇ ಒಂದು ಛಾನೆಲ್ ಹಾಕಿ, ಬರೀ ಅದರದೇ ವಿಷಯ ಅದರದೇ ಮಾತು. ಕೆಲವೊಂದು ದಿನಪತ್ರಿಕೆಗಳ ಪತ್ರಕರ್ತರಂತೂ, ತಮ್ಮ ಕೈಯಲ್ಲಿ ಹಿಡಿದಿರುವುದು, ಪೆನ್ನಲ್ಲ, ಯುದ್ಧದ ಆಯುಧವೆಂಬತೆ, ಅದನ್ನು ತೀರಾ ವೈಯುಕ್ತಿಕವಾಗಿ ಬಳಸಿ, ಒಂದು ಒಳ್ಳೆಯ ಸಿನೆಮಾ ಕೊಟ್ಟ ನಿರ್ದೇಶಕರ ಮುಂದಿನ ಬದುಕನ್ನೂ ಹಾಳು ಮಾಡಿ ಮತ್ತು ಯಶಸ್ಸಿನ ಕಡೆಗೆ ಓಡಬೇಕಾಗಿದ್ದ ಸಿನೆಮಾದ ಬಗ್ಗೆ ಪ್ರೇಕ್ಷಕವರ್ಗದಲ್ಲಿ ವಿನಾಕಾರಣ ಗೊಂದಲವನ್ನು ಉಂಟುಮಾಡುತ್ತಾರೆ. ಇದು ಎಷ್ಟು ಸಮಂಜಸ? ಹಿಂದಿನ ದಶಕಗಳಲ್ಲಿ ಟಿವಿ, ಪತ್ರಿಕೆಗಳಲ್ಲಿ ವಿಮರ್ಶೆಗಳು ಬರದೆ ಇದ್ದ ಕಾಲದಲ್ಲಿ ಪ್ರೇಕ್ಷಕರ ಅಭಿಪ್ರಾಯದಿಂದಲೇ ಸಿನೆಮಾಗಳು ಗೆದ್ದಿವೆ, ಮತ್ತು ಸೋತಿವೆ. ಹಾಗಾಗಿ ಹೊಸ ಸಿನೆಮಾ ಅವರು ನೋಡುವ ಮೊದಲೇ, ಈ ಮೀಡಿಯಾದವರು ತಮ್ಮ ಅಭಿಪ್ರಾಯಗಳನ್ನು ಜನರ ಮೇಲೆ ಹೇರಿ, ತಾವು ಸರ್ವಾಧಿಕಾರಿಗಳ ಧೋರಣೆ ತೋರುವುದು ಸರಿಯೇ? ಮೊದಲು ಜನರು ನೋಡಲಿ, ಆಮೇಲೆ ಅವರ ಅಭಿಪ್ರಾಯಗಳನ್ನು ತೆಗೆದುಕೊಂಡು ಈ ಮೀಡಿಯಾದವರು ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳಲಿ, ಅಲ್ಲವೇ? ಏನಂತೀರಾ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet