ಹೋಲಿಕೆ...

ಹೋಲಿಕೆ...

ಬರಹ

ನಗುವ ಹೂವು ನಾಚಿದೆ ನಿನ್ನ ಚೆಲುವ ಕ೦ಡು...

ಸುರಿವ ಮಳೆಯು ಹನಿಯುತಿದೆ ನಿನ್ನ ನಗುವ ಕ೦ಡು...

ಹಸಿರು ಹುಲ್ಲಿನ ಹಾಸಿಗೆ ಕಾದಿದೆ ನಿನ್ನ ಪಾದದ ಸೊ೦ಕಿಗೆ...

ನಕ್ಷತ್ರಗಳು ಅಡಗಿವೆ ನಿನ್ನ ಕಣ್ಣ ಮಿ೦ಚಿಗೆ...

ಗಾಳಿಯು ಬೆರಗಾಗಿ ನಿ೦ತಿದೆ ನಿನ್ನ ಸೊ೦ಟ ಬಳುಕೋ ರೀತಿಗೆ...

ಆಗಸವು ತಲೆ ಬಾಗಿ ಬೇಡಿದೆ ನಿನ್ನ ಹೃದಯದಿ ತು೦ಬಿರೊ ಪ್ರೀತಿಗೆ...

ಈಗ ನೀನು ಹೇಳು ನನಗೆ...

ನಾ ಪ್ರಕೃತಿಯಲ್ಲಿ ನಿನ್ನ ಕಾಣುವೆನೆ ಇಲ್ಲಾ...

ನೀನೆ ಈ ಪ್ರಕೃತಿಯೇ...