ಹೋ ಮನುಜ ನಿನಗೇನು ಬೇಕು ?

ಹೋ ಮನುಜ ನಿನಗೇನು ಬೇಕು ?

     ಮನುಷ್ಯನ ಅಂತಿಮ ಗುರಿ ಯಾವುದು ಎಂದು ನಾನು ಪ್ರತಿದಿನ ಯೋಚಿಸುತ್ತಿರುತ್ತೇನೆ. ಇದಕ್ಕೆ ಉತ್ತರ ಸಿಗುವುದಿಲ್ಲ ಎಂದು ನನಗೂ ಗೊತ್ತು.  ನಾನು ಏಕೆ ಹಾಗೆ ಯೋಚಿಸುತ್ತೇನೆಂಬುದಕ್ಕೆ ಹಲವು ಕಾರಣಗಳಿವೆ.
ವೈಜ್ಞಾನಿಕ ಬೆಳವಣಿಗೆಗಳನ್ನು ಮೀರಿ ವಿಜ್ಞಾನಿಗಳು ಇನ್ನೂ ಮುಂದೆ ಹೋಗುವ ಯೋಚನೆ ಮಾಡುತ್ತಿರುವುದನ್ನು ನೋಡಿದರೆ ಈ ಭೂ ಗ್ರಹವನ್ನು ಅವರೇನು ಮಾಡುವರೋ ಎಂಬ ಆತಂಕ ನನಗಾಗುತ್ತಿರುತ್ತದೆ. ಈ ವಿಶ್ವದ ರಹಸ್ಯವನ್ನು ತಿಳಿಯಲು ಭೂಕೇಂದ್ರಕ್ಕೇ ರಂದ್ರ ಕೊರೆದು ಅವರೇನು ಸಾಧಿಸಿದರೆಂಬುದು ಯಾರಿಗೂ ಈ ವರೆವಿಗೂ ಸ್ಪಷ್ಟ ಅರಿವಿಗೆ ಬಂದಿಲ್ಲ. ವಿಜ್ಞಾನಿಗಳು ಖಗೋಳದಲ್ಲಿ ಚಂದ್ರಯಾನ, ಮಂಗಳಯಾನ ಮುಂತಾದ ಮಹಾಯಾನಗಳನ್ನು ಕೈಗೊಳ್ಳುವುದರಿಂದ ತಾವೂ ಸಹ ಬಾಹ್ಯಾಕಾಶ ಕ್ಷೇತ್ರದಲ್ಲಿ ಬಹಳಷ್ಟು ಸಾಧಿüಸಿದ್ದೇವೆ ಎಂದು ಜಗತ್ತಿಗೆ ಗೊತ್ತುಪಡಿಸುವುದನ್ನು ಹೊರತುಪಡಿಸಿದರೆ ಮತ್ತೇನನ್ನು ಈ ಮನುಕುಲ ಈ ವರೇಗೆ ಮಾಡಿಲ್ಲ. ಆದರೆ ಉಪಗ್ರಹಗಳ ಉಡಾವಣೆಯಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರಿ ಸಾಧನೆ ಮಾಡಿರುವುದು ನಿಜವಾದರೂ ಮನುಕುಲದ ಕ್ಷೇಮಕ್ಕೆ ಇದೆಷ್ಟು ಸಹಕಾರಿ ಎಂಬುದನ್ನು ಕಾಲವೇ ನಿರ್ಧರಿಸಬೇಕು. ನಮಗೆ ಇಷ್ಟು ಮಟ್ಟಿಗಿನ ಸಾಧನೆ ಸಾಕು, ಈ ಮಟ್ಟದಲ್ಲಿ ಸುಖವಾಗಿರೋಣ ಎಂದು ಮನುಷ್ಯ ಮಾತ್ರರಾದ ನಾವು ಯೋಚಿಸುವುದಕ್ಕೆ ಆಗುತ್ತಿಲ್ಲ. ನಮ್ಮ ದಾಹ ತಣಿಯುತ್ತಿಲ್ಲವಲ್ಲ.
     ದೇಶವಿದೇಶಗಳ ರಾಜಕಾರಣಿಗಳು ಹಣ, ಅಧಿಕಾರ, ಪ್ರತಿಷ್ಠೆ ಮುಂತಾದ ವ್ಯಾಮೋಹಗಳಿಗೆ ಬಲಿ ಬಿದ್ದು ಎಲ್ಲರನ್ನೂ ಸುಖವಾಗಿರುಲು ಬಿಡಲಾರರೇನೋ ಎಂಬ ಚಿಂತೆ ನನಗೆ ಕಾಡುತ್ತಿದೆ. ಅಧಿಕಾರದ ಅಮಲು, ಕೀರ್ತಿಯ ಹುಚ್ಚು ಮತ್ತು ಸಂಪತ್ತಿನ ದಾಹ ಬಹುತೇಕ ಪ್ರಪಂಚದ ಯಾವ ರಾಜಕಾರಣಿಯನ್ನು ಸಹ ಬಿಟ್ಟಿಲ್ಲವೆಂದೇ ತಿಳಿಯಬಹುದು. ಬಾಯಲ್ಲಿ ಶಾಂತಿಯ ಮಂತ್ರವನ್ನು ಜಪಿಸುವುದನ್ನು ಬಿಟ್ಟರೆ ಸಂಪೂರ್ಣ ಶಾಂತಿಪ್ರಿಯ ದೇಶ ಯಾವುದಿದೆ. ಕೊನೇ ಪಕ್ಷ ವಿದೇಶಗಳೊಂದಿಗಿನ ವ್ಯಾಪಾರದಲ್ಲಿ ತನ್ನ ಲಾಭಕ್ಕಾಗಿ ಎಲ್ಲಾ ರಾಷ್ಟ್ರಗಳೂ ಪರಿತಪಿಸುತ್ತಿರುತ್ತವೆ. ಇನ್ನು ಮಿಲಿಟರಿ ಉಪಕರಣಗಳನ್ನು ಹೊಂದುವುದರಲ್ಲಿ ನಾ ಮುಂದು ತಾ ಮುಂದು ಎನ್ನುವಂತೆ ಎಲ್ಲಾ ದೇಶಗಳೂ ತಮ್ಮ ತಮ್ಮ ಭಲಾಡ್ಯತೆಯನ್ನು ಪ್ರದರ್ಶಿಸುತ್ತಿರುವುದನ್ನು ನೋಡಿದರೆ ಸರ್ವನಾಶವಾಗುವುದೇನೋ ಎಂದು ನನಗೆ ಭಯವಾಗುತ್ತಿದೆ. ಅಣು ಶಕ್ತಿ ವರವೋ ಶಾಪವೋ ಕಾಲವೇ ತೀರ್ಮಾನಿಸಿಕೊಳ್ಳುತ್ತದೆ.
     ಮೇಲೆ ಹೇಳಿರುವುದು ಈ ಜಗತ್ತಿನ ದೈನಂದಿನ ವ್ಯವಹಾರ. ಇನ್ನು ನಮ್ಮ ಸುತ್ತ ಮುತ್ತ ಪ್ರತಿದಿನ ಏನೇನು ನಡುಯುತ್ತಿದೆ ಎಂದು ನಾವು ಗಮನಿಸುತ್ತಿರುತ್ತೇವೆಯಲ್ಲವೇ? ಅರಣ್ಯ ಸಂಪತ್ತು, ವನ್ಯ ಸಂಪತ್ತು, ಖನಿಜ ಸಂಪತ್ತು, ಜಲ ಸಂಪತ್ತು, ಇವನ್ನೆಲ್ಲ ಇನ್ನೂ ವೃದ್ಧಿಗೊಳಿಸುವುದರ ಬದಲಿಗೆ ಕಡಿಮೆ ಮಾಡಿಕೊಳ್ಳುತ್ತಿದ್ದೇವೆನ್ನುವ ವಿಚಾರ ಹೊಸದಾಗಿ ಹೇಳಬೇಕಿಲ್ಲ. ಆದರೆ ವರ್ಷವಿಡೀ ಶುದ್ಧ ಕುಡಿಯುವ ನೀರನ್ನು ನೀಡುವ ಜೀವನದಿಗಳಲ್ಲಿ ನದಿಯೊಡಲಿಗಿಳಿದು ನದಿಯೊಡಲು ಬಗೆದು ಮರಳು ತೆಗೆಯುವುದು ಸರಿಯೇ ? ಆ ಭತ್ತ ಬೆಳೆಯುವ ಗದ್ದೆಗಳು ನಮಗೇನು ಮಾಡಿದ್ದವು? ಅಂತಹ ಗದ್ದೆಗಳನ್ನು ರೂಪಿಸಲು ಮಾನವ ನೂರಾರು ವರ್ಷಗಳಿಂದ ದುಡಿದಿರುತ್ತಾನೆ. ಭತ್ತದ ಗದ್ದೆಯಲ್ಲಿ ನಾಟಿ ಮಾಡುವಾಗ ನಮ್ಮ ಕೈಗಳಿಗೆ ಸ್ವಲ್ಪವೂ ಕಿರಿಕಿರಿಯಾಗದಂತಹ ಮೆಕ್ಕಲು ಮಣ್ಣು ನಿರ್ಮಾಣವಾಗಲು ಅದೆಷ್ಟು ವರ್ಷ ಬೇಕಾಗಿದೆಯೋ? ಅಂತಹ ಗದ್ದೆಗೆ ದೂರದ ಗುಡ್ಡ ಕತ್ತರಿಸಿ ತಂದ ಮಣ್ಣು ಕಲ್ಲುಗಳನ್ನು ತುಂಬಿಸಿ ಮಟ್ಟ ಮಾಡಿ ಜೌಗು ನೆಲವನು ನಿವೇಶನವನ್ನಾಗಿಸಿ ಚದರಡಿ ಲೆಕ್ಕದಲ್ಲಿ ಮಾರಾಟ ಮಾಡುವಾಗ ನಮ್ಮ ಹೊಟ್ಟೆಗೇ ಆ ಮಣ್ಣು ಕಲ್ಲುಗಳನ್ನು ತುಂಬಿಸಿದಂತೆ ನಮಗಾಗುವುದಿಲ್ಲವೇ? ಗದ್ದೆಗೆ ಮಣ್ಣು ಕಲ್ಲುಗಳನ್ನು ತುಂಬಿಸಿ ಮತ್ತೆ ಬೇಕೆನಿಸಿದರೆ ಅದನ್ನು ಗದ್ದೆಯನ್ನಾಗಿಸಲು ನಮ್ಮಿಂದ ಸಾದ್ಯವೇ? ಕೃಷಿ ಕಷ್ಟವೆಂದು ಎಲ್ಲರಿಗೂ ಗೊತ್ತಿದ್ದರೂ ಜಮೀನು ಹಾಳು ಮಾಡಿದರೆ ಏರುತ್ತಿರುವ ಜನಸಂಖ್ಯೇ 2050ನೇ ಇಸವಿಯ ಹೊತ್ತಿಗೆ ಏನು ತಿನ್ನುವುದೆಂದು ನಾವಾದರೂ ಯೋಚಿಸಬೇಡವೆ? ನೀರು, ಗಾಳಿ ಮತ್ತು ಕೆನೆ ಮಣ್ಣು ಇವು ಮನುಷ್ಯನನ್ನು ಜಿವಂತವಾಗಿ ಈ ಭೂಮಿಯ ಮೇಲೆ ಇರಿಸಿವೆ.
     ಹೋಗಲಿ ಜಮೀನು, ನದಿ, ಕಾಡುಗಳ ಗೊಡವೆ ನಮಗೆ ಬೇಡವೆಂದು ಸುಮ್ಮನಿರೋಣ. ಆದರೆ ಯಾರಿಗೂ ತೊಂದರೆ ಮಾಡದೆ ಒಡಲೊಳವೆ ಖನಿಜಗಳನ್ನು ಅಡಗಿಸಿಟ್ಟುಕೊಂಡು ಬಿಮ್ಮನೆ ಮಲಗಿರುವ ಗುಡ್ಡಬೆಟ್ಟಗಳು ನಮಗೇನು ಮಾಡಿವೆ? ಅವನ್ನೆಲ್ಲಾ ಯದ್ವಾತದ್ವಾ ಕತ್ತರಿಸಿ ದೇಶ ವಿದೇಶಗಳಿಗೆ ಬೇಕಾಬಿಟ್ಟಿ ಮಾರಾಟ ಮಾಡಿ ನೆಮ್ಮದಿ ಪಡೆಯುತ್ತೇವೆನ್ನುವ ಪರಿಗೆ ನಮಗೇನೂ ಅನ್ನಿಸುತ್ತಿಲ್ಲವೇಕೆ? ಮುಂದೆ ಇಂತಹ ಖನಿಜಗಳು ನಮಗೆ ಬೆಕೆಂದಾಗ ನಾವೆಲ್ಲಿಂದ ತರುವುದೆಂದು ಯಾರು ಯೋಚಿಸುತ್ತಿಲ್ಲವೇಕೆ? 'ರತ್ನಗರ್ಭಾ ವಸುಂಧರಾ'ಎನ್ನುವಂತೆ ಭೂಮಿಯ ಒಡಲಿನಲ್ಲಿ ಎಷ್ಟೋ ಅಮೂಲ್ಯ ಸಂಪತ್ತು ಅಡಗಿರಬಹುದು, ಚಿನ್ನವೂ ಸಹ ಇರಬಹುದು. ಭೂ ಒಡಲಿನಲ್ಲಿರುವ ಸಂಪತ್ತಿನ ಬಗ್ಗೆ ಚಿಂತಿಸುವುದು ಸರಿಯಲ್ಲ. ಚಿನ್ನ ನಮ್ಮ ಸಾಮೂಹಿಕ ನೆಮ್ಮದಿಯನ್ನು ಯಾವತ್ತೂ ಹೆಚ್ಚಿಸುವುದಿಲ್ಲ. ದೇವರಿಗೆ ಭಾರೀ ಪ್ರಮಾಣದ ಚಿನ್ನ, ಬೆಳ್ಳಿ ಅರ್ಪಿಸಿ ಮನುಷ್ಯ ಖಂಡಿತವಾಗಿ ಪುಣ್ಯ ಸಂಪಾದಿಸಲಾರ. ಆದರೂ ಹುಚ್ಚು ಬ್ರಮೆ ಅನಾಧಿಕಾಲದಿಂದ ದೊಡ್ಡದೊಡ್ಡವರನ್ನೆಲ್ಲಾ ಆವರಿಸಿಕೊಂಡಿದೆ.
     ದೇಶದ ಹಸಿವು ನೀಗಿಸುವ ಆತುರದಲ್ಲಿ ಬಡವರಿಗೆ ಅತಿ ಕಡಿಮೆ ಬೆಲೆಗೆ ಆಹಾರ ಸಿಕ್ಕಾಗ ಅವರ ದುಡಿಮೆಯ ಹುಮ್ಮಸ್ಸು ನಾಶವಾಗಬಹುದೆಂದು ನಮಗೇಕೆ ಅನಿಸುವುದಿಲ್ಲ? ಬಡವರು ಯಾವಾಗಲೂ ಬಡವರಾಗೇ ಇರಬೇಕೆಂದು ಯಾರೂ ಬಯಸುವುದಿಲ್ಲವಾದರೂ, ಜನರನ್ನು ಸೋಮಾರಿಗಳನ್ನಾಗಿ ಮಾಡುವುದು ಸಾಮಾಜಿಕ ಕ್ಷೇಮಾಭಿವೃದ್ಧಿಯಾಗುತ್ತದೆಯೇ? ಹೋ ಮನುಜ ನಿನಗೇನು ಬೇಕು ?

     ದೇಶದ ಹಸಿವು ನೀಗಿಸುವ ಆತುರದಲ್ಲಿ ಬಡವರಿಗೆ ಅತಿ ಕಡಿಮೆ ಬೆಲೆಗೆ ಆಹಾರ ಸಿಕ್ಕಾಗ ಅವರ ದುಡಿಮೆಯ ಹುಮ್ಮಸ್ಸು ನಾಶವಾಗಬಹುದೆಂದು ನಮಗೇಕೆ ಅನಿಸುವುದಿಲ್ಲ? ಬಡವರು ಯಾವಾಗಲೂ ಬಡವರಾಗೇ ಇರಬೇಕೆಂದು ಯಾರೂ ಬಯಸುವುದಿಲ್ಲವಾದರೂ, ಜನರನ್ನು ಸೋಮಾರಿಗಳನ್ನಾಗಿ ಮಾಡುವುದು ಸಾಮಾಜಿಕ ಕ್ಷೇಮಾಭಿವೃದ್ಧಿಯಾಗುತ್ತದೆಯೇ?
'ಉದ್ಯೋಗಂ ಪುರುಷ ಲಕ್ಷಣಂ' ಎನ್ನುವಂತೆ ದುಡಿಮೆಯ ಶಕ್ತಿಯಿರುವ ಪ್ರತಿಯೊಬ್ಬ ಪ್ರಜೆಯೂ ಉದ್ಯೋಗಸ್ಥನಾಗಿರಬೇಕು. ಆದರೆ ನಮ್ಮಲ್ಲಿರುವ ಕ್ಷೇಮಾಭಿವೃದ್ಧಿ ಯೋಜನೆಗಳಲ್ಲಿ ಹೆಚ್ಚಿನವು ಜನಸಾಮಾನ್ಯರಲ್ಲಿ ಮನ್ನವಾಗುವ ಸಾಲ, ಪುಕ್ಕಟೆ ಊಟ, ಕೆಲಸವಿಲ್ಲದೇ ಸಂಬಳ, ಮುಂತಾದವುಗಳು ನಮಗೂ ಸಿಗಲಿ ಎಂಬ ಬೀಜ ಬಿತ್ತುತ್ತಿವೆಯಲ್ಲವೇ? ಎಲ್ಲರೂ ಸರಕಾರದಿಂದ ನಮಗೂ ಉಚಿತ ಸಹಾಯ ಸಿಗಲಿ ಎಂದು ಬಯಸಿದರೆ ದೇಶ ಕಟ್ಟುವವರಾರು? ಇವೆಲ್ಲಾ ಎಷ್ಟು ದಿನ ನಡೆದೀತು? ಅತ್ಯಂತ ಕಡಿಮೆ ನೈಸರ್ಗಿಕ ಸಂಪತ್ತನ್ನು ಬಳಸಿ, ಅತಿ ಹೆಚ್ಚು ನೆಮ್ಮದಿಯು  ಸಾಮೂಹಿಕವಾಗಿ ಸಮಾಜದ ಎಲ್ಲ ಜನರಿಗೂ ಸಿಗುವಂತೆ ಮಾಡುವುದೇ ನಿಜವಾದ ಕ್ಷೇಮಾಭಿವೃದ್ಧಿಯಲ್ಲವೇ? 
     ಲಂಚ ಕೊಡುವವರಿದ್ದಾರೆ, ತಿನ್ನುವವರಿದ್ದಾರೆ, ನಮಗೇಕೆ ಅದರ ಗೊಡವೆ ಎಂದು 
ಸುಮ್ಮನಿರೋಣವೆಂದರೆ ತಿಂದ ಲಂಚದಿಂದಲೇ ದೇಣಿಗೆ ನೀಡಿ ದೇವಸ್ಥಾನ ಕಟ್ಟಿ, ಬಂಗಾರವನ್ನೂ ಅರ್ಪಿಸಿ ಕೃತಾರ್ಥರಾದೆವೆನುವವರಿಗೆ ನಾವೇನೆನ್ನೋಣ? ಅಂತಹ ದೊಡ್ಡ ಮನುಷ್ಯರನ್ನು ಸಭೆಗಳಲ್ಲಿ ಗುರುತಿಸುವುದು, ವೇದಿಕೆಯಲ್ಲಿ ಕೂರಿಸುವುದು, ಸನ್ಮಾನಿಸುವುದು ಎಲ್ಲಾ ನೋಡಿದಾಗ ಸತ್ಯವಂತರಿಗಿದು ಕಾಲವಲ್ಲವೆನಿಸುವುದಿಲ್ಲವೇ? ಅದೂ ಹೋಗಲಿ, ಲಂಚ ನೀಡಿ ಅಕ್ರಮ ಆಸ್ತಿ ಗಳಿಸಿ, ವೇದಿಕೆಯನ್ನೇರಿ ಕಿರಿಯರಿಗೆ ಪರಿಸರ ನಾಶ, ಸಾಮಾಜಿಕ ಅಸಮಾನತೆ, ನೈತಿಕ ಶಿಕ್ಷಣದ ಕೊರತೆ ಮುಂತಾದ ವಿಚಾರಗಳ ಬಗ್ಗೆ ಮೇಜು ಕುಟ್ಟಿ ಮಾತಾಡುವವರನ್ನು ನೋಡುವಾಗ ಇವರೆಂತಹ ಮುಖವಾಡದಾರಿಗಳೆನಿಸದಿರದು ಅಲ್ಲವೇ?
     ಇನ್ನು ಶಿಕ್ಷಣ ಕ್ಷೇತ್ರದ ಕಡೆ ಯೋಚಿಸಿದರೆ ಮತ್ತೆ ತಲೆಬಿಸಿಯಾಗುವುದು ಗ್ಯಾರೆಂಟಿ.  ಇಂದಿನ ಜನಾಂಗದ ಎಲ್ಲಾ ಕೊರತೆಗಳನ್ನೂ ಮೆಟ್ಟಿ ನಿಂತು ಮುಂದೊಂದು ದಿನ ಹೊಸ ತಲೆಮಾರಿನವರು ಸರಿದಾರಿಯಲ್ಲಿ ದೇಶವನ್ನು ನಡೆಸಿಯಾರು ಎಂದು ಆಶಾವಾದಿಗಳಾಗೋಣವೆಂದರೆ ಅಲ್ಲಿಯೂ ಭರವಸೆ ಸಿಗುತ್ತಿಲ್ಲ. ಶಿಕ್ಷಣದಲ್ಲಿ ಸುದಾರಣೆ ಮಾಡಲು ಹೊರಟು ಶಾಲೆಗಳಲ್ಲಿ ಮೂಲ ಸೌಕರ್ಯಗಳನ್ನು ಉತ್ತಮ ಪಡಿಸುವಲ್ಲಿ ತೋರಿಸುವ ಆಸಕ್ತಿಯನ್ನು ಶಿಕ್ಷಣದಲ್ಲಿ ಗುಣಮಟ್ಟ ಸುದಾರಣೆಯ ಬಗ್ಗೆ ಸರಿಯಾಗಿ ತಲೆಕೆಡಿಸಿಕೊಳ್ಳುವವರಿಲ್ಲವೆಂದು ಎಲ್ಲರಿಗೂ ಅನಿಸುತ್ತಿದೆಯಲ್ಲವೇ? ಶ್ರೇಷ್ಠವಾಗಿ ಬದುಕುವ ಕಲೆಯನ್ನು ಮಗುವಿಗೆ ಕಲಿಸುವುದೇ ಶಿಕ್ಷಣದ ಗುರಿಯಾಗಿರಬೇಕು.
ಇಂದಿನ ಮನುಕುಲ ಏನೆಲ್ಲ ತಪ್ಪು ಹೆಜ್ಜೆಗಳನ್ನಿಡುತ್ತಿದೆ, ಅದನ್ನೆಲ್ಲಾ ಭವಿಷ್ಯತ್ತಿನಲ್ಲಿ ಸರಿದಾರಿಗೆ ತರಬಹುದಾದ ಶಕ್ತಿಯಿರುವುದು ಶಿಕ್ಷಣಕ್ಕೆ ಮಾತ್ರ.  ಇತಿಹಾಸದಿಂದ ಪಾಠ ಕಲಿಯಬೇಕು
ಮತ್ತು ಶಿಕ್ಷಣದಿಂದ ಮನುಕುಲ ಉದ್ಧಾರವಾಗಬೇಕು.
     ಆಧ್ಯಾತ್ಮ ನಮ್ಮ ಜಿವನದಿಂದ ದೂರ ಸರಿಯುತ್ತಿದೆಯೇ ಎನಿಸುತ್ತಿದೆಯಲ್ಲವೇ? ಆತ್ಮ ಮತ್ತು ಪರಮಾತ್ಮ ಪರಿಕಲ್ಪನೆಗಳನ್ನು ಮೀರಿ ವಾಸ್ತು, ಜಾತಕ, ಹರಕೆ, ಶಾಂತಿ, ಮುಂತಾದ ವಿಚಾರಗಳಿಗೇ ಬಹಳ ಮಾನ್ಯತೆ ದೊರೆಯುತ್ತಿರುವ ಈ ಸಮಯದಲ್ಲಿ ಪರಮಾತ್ಮನ ಒಂದು ಅಂಶ ನಾವಾಗಿರುವೆವೆನ್ನುವ ಸತ್ಯ ಯಾರಿಗೂ ಬೇಕಿಲ್ಲವಾಗಿದೆ. ಯಾರಿಗೂ ತೊಂದರೆ ನೀಡದೆ ನಮ್ಮ ಪಾಡಿಗೆ ಸರಳವಾಗಿ ಬದುಕುವ ಕಲೆ ಮರೆಯಾಗುತ್ತಿದೆ. ಡಂಬಾಚಾರಗಳಿಗೇ ಹೆಚ್ಚು ಮಹತ್ವ ಸಿಗುತ್ತಿರುವಾಗ ಸಾತ್ವಿಕ ತತ್ವಜ್ಞಾನಿಗಳನ್ನು ಕೇಳುವವರಾರು? ಮೌಢ್ಯ ಆಧ್ಯಾತ್ಮವನ್ನು ಅತಿಕ್ರಮಿಸಿಬಿಟ್ಟಿದೆ. ಶಿಕ್ಷಣದಿಂದ ಆಧ್ಯಾತ್ಮ ಚಿಂತನೆ ಮತ್ತು ನೀತಿ ಶಾಸ್ತ್ರ ಗಳನ್ನು ದೂರ 
ಇಡಲಾಗುತ್ತಿದೆ. ಇದು ಮನುಕುಲದ ವಿನಾಶದೆಡೆಗೆ ಇರಿಸಿದ ಹೆಜ್ಜೆ ಎಂದು ಅನಿಸುತ್ತಿದೆಯಲ್ಲವೇ?
     ಈ ರೀತಿಯಾಗಿ ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದ ಎಲ್ಲೆಡೆಯೂ ಮಾನವನು ವಿನಾಶದೆಡೆಗೆ ಹೆಜ್ಜೆಯಿಡುತ್ತಿದ್ದಾನೆ ಎನಿಸುವುದು ಕೇವಲ ಋಣಾತ್ಮಕ ಚಿಂತನೆ ಎನ್ನುವಂತಿಲ್ಲ. 
ಈ ಭೂಮಂಡಲವನ್ನು ಸುಸ್ಥಿತಿಯಲ್ಲಿರಿಸಿಕೊಂಡು ಪ್ರತಿಯೊಬ್ಬನೂ ನೆಮ್ಮದಿಯಿಂದ ಶ್ರೇಷ್ಠ
ಮಾನವನಾಗಿ ಉನ್ನತ ಸಮಾಜ ರಚನೆಯಾಗುವುದಕ್ಕೆ ಬೇಕಾಗುವ ಜ್ಞಾನವೇ ಅತಿ ದೊಡ್ಡ ವಿಜ್ಞಾನ, ಅತಿ ದೊಡ್ಡ ಕಲೆ. ಆದರೆ ಹೀಗಾಗಲು ನಾವು ಮಾನವರೇ ಬಿಡುತ್ತಿಲ್ಲವಾದ್ದರಿಂದ ಕೊನೆಗೂ ಉಳಿಯುವುದು ಒಂದೇ ಪ್ರಶ್ನೇ :'ಹೋ ಮನುಜ ನಿನಗೇನು ಬೇಕು?' 
                                   _  ಮಂಜುನಾಥ ಡಿ.ಜಿ., ತೀರ್ಥಹಳ್ಳಿ.