ಹ-ಕಾರದ ಗೆರೆ
ಏನ್ ಗುರು ಬ್ಲಾಗಿನಲ್ಲಿ ’ಆವೂ ಸರಿ ಹಾವೂ ಸರಿ’ ಓದಿದೆ. ಅದರಲ್ಲಿ ಹ ಕಾರದ ಗೆರೆ ಬಗ್ಗೆ ಹೇಳುತ್ತ, ಗುಲ್ಬರ್ಗ ಮತ್ತು ಶಾಬಾದುಗಳ ಮಧ್ಯೆಯೂ ಹ ಕಾರದ ಗೆರೆ ಇದೆ ಎಂದದ್ದು ನನ್ನ ಕುತೂಹಲ ಕೆರಳಿಸಿತು. ನಾನು ಬೆಳೆದದ್ದು ಗುಲ್ಬರ್ಗದಲ್ಲಿ. ಹಾನ, ಹಾರ, ಹಾಳ, ಹಿಂದಾಗ, ಹನ(ಣ)ಮಪ್ಪ, ಹಿಂಗ, ಮುಂತಾದ ಶಬ್ದಗಳನ್ನ ಹ-ಕಾರ ಸಹಿತವಾಗೇ ಹೇಳುವದನ್ನು ಕೇಳಿದ್ದೇನೆ. ಶಾಬಾದಿನಲ್ಲಿ ಇವನ್ನು ಅಥವ ಇನ್ನಿತರ ಹ-ಕಾರದಿಂದ ಶುರುವಾಗುವ ಶಬ್ದಗಳನ್ನು ಹ-ಕಾರ ಬಿಟ್ಟು ಹೇಳುತ್ತಾರೆಯೇ? ಗುಲ್ಬರ್ಗ ಶಾಬಾದುಗಳೆರಡರ ಪರಿಚಯವಿದ್ದ ಸಂಪದಿಗರು ಇದ್ದರೆ ಇದರ ಬಗ್ಗೆ ಬರೆಯುವಿರಾ ?
ಹಿಂದೆ ಕೆಲವು ಬಾರಿ ಹ-ಕಾರ ಬಿದ್ದು ಹೋಗುವ ಉದಾಹರಣೆಗಳಲ್ಲಿ ಎರಡು ಶಬ್ದಗಳು ಸೇರಿದಾಗ ಎರಡನೇ ಶಬ್ದದ ಮೊದಲಕ್ಷರ ಹ ಕಾರವಾಗಿದ್ದರೆ ಅದು ಬಿದ್ದು ಹೋಗುವದು ಸಾಮಾನ್ಯ ಎಂದು (ಸಂಪದದಲ್ಲೇ ?) ಓದಿದ್ದೆ ಅನಿಸುತ್ತದೆ. ಶಹಾಬಾದ್ ಎನ್ನುವದು ಶಾಬಾದ್ ಆಗುವದು ಅದೇ ರೀತಿ ಇರಬೇಕು (ಅದರಂತೆ ಶಹಪೂರ್ ಶಾಪೂರ್ ಆಗುತ್ತದೆ). ಗುಲ್ಬರ್ಗ ಶಾಬಾದುಗಳ ನಡುವಿನ ಹ-ಕಾರದ ಗೆರೆ ಎಂದು ಹೇಳಿರುವದು ಈ ತರಹದ ಶಬ್ದಗಳು ಸೇರುವಾಗಿನ ಬಿದ್ದು ಹೋಗುವಿಕೆಯೋ ಅಥವಾ ಒಂಟಿ ಶಬ್ದಗಳ ಹಕಾರವೂ ಬಿದ್ದು ಹೋಗುವದೊ?
(ಶಬ್ದದ ಕೊನೆಗೆ ಹ-ಕಾರ ಬಂದರೆ ಅದೂ ಬಿದ್ದು ಹೋಗುವದನ್ನು ಕೇಳಿದ್ದೇನೆ, ಉದಾಹರಣೆಗೆ ಗುಲ್ಬರ್ಗದ ಐವಾನ್ ಶಾಹಿ ಮಾತಿನಲ್ಲಿ ಐವಾನ್ ಶಾಯಿ/ಶಾಇ ಆಗುತ್ತದೆ.)
Comments
ಉ: ಹ-ಕಾರದ ಗೆರೆ
In reply to ಉ: ಹ-ಕಾರದ ಗೆರೆ by kannadakanda
ಉ: ಹ-ಕಾರದ ಗೆರೆ