೧೮ ನೇ ವಿಶ್ವ ಫುಟ್ ಬಾಲ್ ಕಪ್- ಜರ್ಮನಿಯಲ್ಲಿ, ಇಂದು ರಾತ್ರಿ ೯-೩೦ ಕ್ಕೆ ! !
ವಿಶ್ವದ ಮಿಲಿಯಗಟ್ಟಲೆ ಕ್ರೀಡಾಪ್ರೇಮಿಗಳು ಕ್ಷಣಗಣತಿ ಮಾಡಿ ಕಾಯುತ್ತಿರುವ, "೧೮ ನೆ ವಿಶ್ವಫುಟ್ ಬಾಲ್ ಕಪ್ ಸಮರ" ಇಂದು ಭಾರತೀಯ ಕಾಲಮಾನದ ಪ್ರಕಾರ ರಾತ್ರಿ ೯-೩೦ ಕ್ಕೆ ಸರಿಯಾಗಿ ತೆರೆ ಸರಿದು ಪ್ರದರ್ಶನ ಕಾಣಲಿದೆ ! ಮೊಟ್ಟಮೊದಲನೆಯದಾಗಿ 'ಎ' ಗ್ರೂಪಿನ ತಂಡಗಳು ಸೆಣಸಾಟಕ್ಕೆ ತಯಾರಿ ನಡೆಸಿವೆ.ಅತಿಥೇಯ ಜರ್ಮನಿ ವಿರುದ್ಧ ಕೋಸ್ಟರಿಕ ತಂಡ ಆಡುತ್ತಿದೆ.ಇದು ಮ್ಯುನಿಕ್ ನಲ್ಲಿ ನಡೆಯುತ್ತದೆ.'ಎ" ಗ್ರೂಪಿನ ಇನ್ನೊಂದು ತಂಡ ರಾತ್ರಿ ೧೨-೨೦ ಕ್ಕೆ ಪೋಲೆಂಡ್ ವಿರುದ್ಧ ಇಕ್ವೆಡಾರ್ ದೇಶದ ತಂಡ ಸೆಣೆಸಲಿದೆ.ಈ ಸಂದರ್ಭದಲ್ಲಿ ಜರ್ಮನಿಯ 'ಸಾಂಸ್ಕೃತಲೋಕದ' ದರ್ಶನವನ್ನು ಮಾಡಿಸುವ ವ್ಯವಸ್ಥೆ ಇದೆ. ಈ ವರೆಗೆ ವಿಶ್ವ ಫುಟ್ ಬಾಲ್ ಟೋರ್ನಿಯಲ್ಲಿ ಜಯಗಳಿಸಿದ ವಿವಿಧ ರಾಶ್ಟ್ರಗಳ ೧೭೦ ಮಂದಿ ಕ್ರೀಡಾಳುಗಳು ಉದ್ಘಾಟನಾ ಸಮಾರಂಭ ದಲ್ಲಿ ಜಗತ್ತಿನ ಶ್ರೇಷ್ಟ ಫುಟ್ ಬಾಲ್ ತಾರೆ,'ಪಿಲೆ'ಯವರೊಂದಿಗೆ "ಪಥಸಂಚಲನ" ದಲ್ಲಿ ತಮ್ಮ ಬಾವುಟಗಳನ್ನು ಹಿಡಿದು ಹೆಜ್ಜೆ ಹಾಕುವರು. ಜರ್ಮನಿಯಲ್ಲಿ ಈಗ ತಾನೆ ಚಳಿಗಾಲ ಕಳೆದು ಸೂರ್ಯನ ಎಳೆಬಿಸಿಲಿಗೆ ಮೈಯೊಡ್ಡಲು ಹಾತೊರೆಯುವ ಜನರಿಗೆ ಮುದನೀಡುವ ಸಮಯ ದಲ್ಲಿ 'ಸಾಕರ್ ಕಪ್' ನಡೆಯುತ್ತಿರುವುದು ಸರಿಯಾಗಿದೆ ! ಸುರಕ್ಷೆಯ ಬಗ್ಯೆ ಎಲ್ಲ ಎಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ.ಸುಮಾರು ೨,೮೦,೦೦೦ ಪೋಲೀಸರು ಪರಿಸ್ತಿತಿಯನ್ನು ನಿಯಂತ್ರಿಸಲು ನೇಮಿಸಲ್ಪಟ್ಟಿದ್ದಾರೆ.ವಿಶ್ವಕಪ್ಪಿನ ಅನೇಕ ವಿಶೇಷತೆಗಳಲ್ಲಿ ಒಂದು ಎಂದರೆ, 'ಫುಟ್ಬಾಲ್ ನ ವಿನ್ಯಾಸ'! ಪ್ರಖ್ಯಾತ ಆಟದ ಸಾಮಗ್ರಿಗಳ ತಯಾರಕರಾದ, ಮೆ.ಆಡಿಡಾಸ್ ಅವರ ಚಿಂಡಿಗೆ ' ಟೀಮ್ ಗೆಸ್ಟ್' ಎಂದು ಹೆಸರಿಟ್ಟಿದ್ದಾರೆ. ಇದರ ಅರ್ಥ 'ಟೀಮ್ ಸ್ಪಿರಿಟ್' ಎಂದು, ಹಳೆಯ ಬಾಲಿನಂತೆ ಇದರಲ್ಲಿ ೩೨ ಪದರಗಳಿಲ್ಲದೆ ಕೇವಲ ೧೪ ಮಾತ್ರ ಇದೆ.ಚೆಂಡಿನ ಹೊರಮೈ ಪೂರ್ತಿ ಗೋಳಾಕಾರ ವಾಗಿದ್ದು ಸರಿಸಮಾನವಾಗಿರುವುದರಿಂದ ಹೊಡೆತದ ಸಮಯದಲ್ಲೇ ಆಟಗಾರನಿಗೆ ಅದರ ಜಾಡನ್ನು ನಿಖರವಾಗಿ ಹಿಡಿಯಲು ಸಹಾಯ ವಾಗುತ್ತದೆ.ಒದ್ದೆಯಾದ ಬಾಲಿನಲ್ಲು ಆಡಬಹುದು.ಬಾಲಿನ ವೇಗ ಹಿಂದೆ ೮೦ ಮೈಲಿ /ಪ್ರತಿ ಘಂಟೆಗೆ ಇದ್ದು, ಈಗಿನ ವೇಗಿಗಳಾದ 'ಬೆಕ್ ಹ್ಯಾಂ' ನಂಥವರು ಹೊಡೆದ ಬಾಲು ೧೧೫ ಮೈಲಿ/ಘಂಟೆಗೆ ಇದ್ದು ಸುಮಾರು ೧೨ ಅಡಿ ಎತ್ತರಕ್ಕೆ ಹೊಡೆದಾಗಲೂ ಯಾವ ತೊಂದರೆಯೂ ಆಗುವುದಿಲ್ಲ. ಬಾಲಿನ ಒಳ ಭಾಗದಲ್ಲಿ "ಕಂಪ್ಯೂಟರ್ ಚಿಪ್" ಅಳವಡಿಸಲಾಗಿದ್ದು ಬಾಲ್, ಗೋಲ್ ಲೈನಿನಿಂದ ದಾಟಿ ಎಷ್ಟು ಸಮಯ ಹೋಯಿತು, ಬೌಂಡರಿ ಲೈನಿನಿಂದ ಹೊರಗೆ ಹೋದ ವಿವಿರಗಳನ್ನು ಮತ್ತು ಅನೇಕ ಉಪಯುಕ್ತ ಮಾಹಿತಿಗಳನ್ನು 'ರೆಫರಿ' ಗಳಿಗೆ ಒದಗಿಸುತ್ತದೆ.ಇಲ್ಲಿಂದ ಪ್ರಸಾರವಾಗುವ ರೇಡಿಯೋ ತರಂಗಗಳನ್ನು ಲಿನಕ್ಸ್ ಸರ್ವ್ ರ್ ಗಳು ಸೆರೆಹಿಡಿದು, ಆ 'ಡಾಟಾ' ಗಳು, ಗಣಕ ಯಂತ್ರದ ಮುಖಾಂತರ ವಿಶ್ಲೇಷಿಸಲ್ಪಟ್ಟು, ವಿವಿಧ ಮಾಹಿತಿಗಳು ಲಭ್ಯವಾಗುತ್ತವೆ.
ಒಟ್ಟು ೧೯೭ ರಾಶ್ಟ್ರಗಳು ಅರ್ಹತೆ ಪಡೆಯಲು ಸೆಣಸಿದವು. ೬೪ ಮ್ಯಾಚುಗಳನ್ನು ಆಡಲಿದ್ದು ೩೨ ರಾಷ್ಟ್ರಗಳು ಫೈನಲ್ ನಲ್ಲಿ ಭಾಗಿಗಳಾಗುತ್ತವೆ. ೧೨ ಜಾಗಗಳಲ್ಲಿ ಮ್ಯಾಚ್ ಗಳು ನಡೆಯುತ್ತವೆ. ಒಟ್ಟು ೨೩ ರೆಫ್ರಿಗಳು ಎಲ್ಲಾ ಆಟಗಳನ್ನು ೩೦ ದಿನಗಳವರೆಗೆ ನಿಯಂತ್ರಿಸುತ್ತಾರೆ.
ವಿಶ್ವಕಪ್ ಫುಟ್ ಬಾಲಿನ ಈಬಾರಿಯ ಲಾಂಛನ "ಗೋಲಿಯೋ "ಎಂಬ ಮನುಷ್ಯಗಾತ್ರದ ಸಿಂಹ, ಮತ್ತು "ಪಿಲೆ" ಅನ್ನುವ ವಿಚಿತ್ರ ಚೆಂಡು ! ( ಅಂತಿಂಥ ಚೆಂಡು ಇದಲ್ಲ !!)ಇದು ಮಾತಾಡುವುದರ ಜೊತೆಗೆ 'ವಿಶ್ವಕೋಶ' ದಂತೆ ಪಾಂಡಿತ್ಯ ಹೊಂದಿದೆ.ಫುಟ್ ಬಾಲ್ ಆಟದ ಅತಿ ಸೂಕ್ಷ್ಮ ವಿಚಾರಗಳು ಇದಕ್ಕೆ ತಿಳಿದಿದೆ !
"ವಿಶ್ವ ಕಪ್ ಫುಟ್ ಬಾಲ್" ಆಟ ದ ಟಿಕೆಟ್ ಗಳ ದರನೋಡಿ : *ಡಾ.೪೫ (ಯೂ.೩೫) ನಿಂದ *ಡಾ. ೭೭೫(ಯೂ.೬೦೦)
ವಿಶ್ವದಾದ್ಯಂತ ಇಂದು ವೀಕ್ಷಿಸುವ ಫುಟ್ ಬಾಲ್ ರಸಿಕರ ಸಂಖ್ಯೆ ಸುಮಾರು ೧.೫ ಬಿಲಿಯನ್ . ಜರ್ಮನಿಯಲ್ಲೇ ೪.೨ ಮಿ.ಸಾಕರ್ ಪ್ರೇಮಿಗಳಿದ್ದಾರೆ.೩.೨ ಮಿ.ಜನ ಸ್ಟೇಡಿಯಂ ನೊಳಗೆ ಕುಳಿತು ಆನಂದಿಸುತ್ತಾರೆ.ಕಡಿಮೆ ಎಂದರೆ ೧ ಮಿ.ಜನ ಅತಿಥಿಗಳಾಗಿ ಜೊತೆಗೂಡುತ್ತಾರೆ.
ಹಾಗಾದರೆ ಬನ್ನಿ ಇನ್ನು ಕೇವಲ ೬ಘಂಟೆ ೩೦ ನಿಮಿಷ ಗಳಲ್ಲಿ ಮೈನವಿರೇಳಿಸುವ ಭವ್ಯ 'ಸಾಕರ್ ' ನೋಡಲು ಸಿದ್ಧರಾಗೋಣ !!
*ಅಮೆರಿಕನ್ ಡಾಲರ್.