೨೦೧೧ಱ ಗ್ರಹಯುತಿಗಳು

೨೦೧೧ಱ ಗ್ರಹಯುತಿಗಳು

ಮಾರ್ಚ್ ೧೫/೧೬ಱ ಸಂಜೆ ೭.೧೦ಕ್ಕೆ ಸ್ಪಷ್ಟವಾಗಿ ಕಾಣುವ ಬುಧಗುರುಯುತಿ.

ಏಪ್ರಿಲ್ ೧೯/೨೦ಱ ಬೆಳಿಗ್ಗೆ ೫.೪೦ಕ್ಕೆ ಸ್ಪಷ್ಟವಾಗಿ ಕಾಣುವ ಮಂಗಳಬುಧಯುತಿ.

ಮೇ ೧ಱ ಬೆಳಿಗ್ಗೆ ೫.೪೫ಱ ಹೊತ್ತಿಗೆ ಏಪ್ರಿಲ್ ೨೮ಱಿಂದಲೆ ಸನಿಹಕ್ಕೆ ಬರುತ್ತಿರುವ ಮಂಗಳಗುರುಯುತಿ.

ಮೇ ೧೦ಱ ಬೆಳಿಗ್ಗೆ ೫.೧೮ಱ ಸುಮಾರಿಗೆ ಸ್ಪಷ್ಟವಾಗಿ ಗೋಚರಿಸುವ ಬುಧಗುರುಯುತಿ.

ಮೇ ೧೧ಱ ಬೆಳಿಗ್ಗೆ ಗುರು ೫.೦೮ಱ ಸುಮಾರಿಗೇ ಸ್ಪಷ್ಟವಾಗಿ ಕಾಣುವ ಗುರುಶುಕ್ರಯುತಿ.

ಮೇ ೨೦/೨೧ಱ ಬೆಳಿಗ್ಗೆ ೫.೦೮ಱ ಸುಮಾರಿಗೇ ಸ್ಪಷ್ಟವಾಗಿ ಗೋಚರಿಸುವ ಮಂಗಳಬುಧಶುಕ್ರಯುತಿ. ಸ್ವಲ್ಪ ದೂರದಲ್ಲೆ ಈ ಗ್ರಹಗಳಿಗೆ ಪಶ್ಚಿಮಕ್ಕೆ ಗೋಚರಿಸುವ ಗುರು ಇವು ಪೂರ್ವದಿಕ್ಕಿನಲ್ಲಿ ಕಾಣುವ ಗ್ರಹಗಳು. ಮೇ ೮ಱಿಂದಲೇ ಪೂರ್ವ ದಿಕ್ಕಿನಲ್ಲಿ ಮಂಗಳ, ಬುಧ, ಗುರು ಹಾಗೂ ಶುಕ್ರರು ಸನಿಹದಲ್ಲಿರುವುದನ್ನು ಬೆಳಿಗ್ಗೆ ೫.೨೦ಱ ಸುಮಾರಿಗೇ ವೀಕ್ಷಿಸಬಹುದು.