೨೦೧೩ ರ ಆಫ್ರಿಕದ ಭೇಟಿ-ಒಬಾಮರ ಜೀವನದ ಕರುಳು ಕಿತ್ತುಹೋಗುವ ಕತೆಯ ನೆನಪನ್ನು ತರುತ್ತಿತ್ತು !

ಅಮೇರಿಕನ್ ಅಧ್ಯಕ್ಷ ಬರಾಕ್ ಒಬಾಮರ ಜೀವನದ ಮರೆಯಲಾರದ ಅನುಭವಗಳಲ್ಲೊಂದು !
ನೆಲ್ಸನ್ ಮಂಡೇಲಾರ ಜೊತೆ ಮಾತಾಡಲು ಉತ್ಸುಕರಾಗಿದ್ದ ಬರಾಕ್ ಒಬಾಮಾ, ಅನಾರೋಗ್ಯಪೀಡಿತರಾಗಿ ಯಾರ ಜೊತೆಗೂ ಪ್ರತಿಕ್ರಯಿಸದ ಮಟ್ಟಕ್ಕೆ ತಲುಪಿದ್ದಾರೆ. ಪ್ರಿಟೋರಿಯದಲ್ಲಿ ಒಬಾಮ ಪರಿವಾರ ಆಸ್ಪತ್ರೆಯ ಹತ್ತಿರದಲ್ಲಿದ್ದರೂ ಕಾಣಲು ಸಾಧ್ಯವಿಲ್ಲವಾಯಿತು. ಈ ಪರಿಸ್ಥಿತಿಯಿಂದ ಮಿಶಲ್ ಒಬಾಮ , ಮತ್ತು ಮಕ್ಕಳು ನೊಂದುಕೊಂಡಿದ್ದಾರೆ. ಬಾಲ್ಯದ ದಿನಗಳಿಂದಲೂ ಒಬಾಮ, ನೆಲ್ಸನ್ ಮಂಡೇಲಾ, ಮಹಾತ್ಮಾ ಗಾಂಧಿ, ಮಾರ್ಟಿನ್ ಲೂಥರ್ ಕಿಂಗ್ ಮೊದಲಾದ ಮಹಾನ್ ನಾಯಕರ ಮಾತಿನಿಂದ ಪ್ರಭಾವಿತರಾಗಿದ್ದರು. ಅವರ ಮಾತಿನ ಮೋಡಿಗೆ ಸಿಕ್ಕು ೧೯ನೆಯ ವಯಸ್ಸಿನಲ್ಲೇ ದೇಶಪ್ರೇಮದ ಮಾತಾಡಲು ಕಲಿತರು. ಹಾಗಾಗಿ ವಿಶ್ವದ ಯಾವ ಮೂಲೆಯಲ್ಲಿ ಜನರಿಗೆ ಅನ್ಯಾಯವಾದರೂ ಈ ನಾಯಕರು ನೆನಪಿಗೆ ಬರುತ್ತಾರೆ.
ಆಫ್ರಿಕಾದ ಸೆನೆಗಲ್ ದೇಶದ ಕಡೆ ಕಾಣಿಸುವ ಕಡಲಿನದಾರಿಯ ಗೋರೀ ದ್ವೀಪದ ಬಳಿಯ ಗುಲಾಮರನ್ನಾಗಿ ಹೊತ್ತು ತಂದು ಮಾರುತ್ತಿದ್ದ ಹರುಕು -ಮುರುಕು ಮನೆ, ಇತಿಹಾಸದ ಮೂಕ ಸಾಕ್ಷಿಯಾಗಿ ಇಂದಿಗೂ ಅಲ್ಲಿ ನಿಂತಿದೆ.
ಆಫ್ರಿಕಾದ ಕರಿಯರ ಇತಿಹಾಸದ ದುಖಃ ಭರಿತ ದಿನಗಳನ್ನು ನೆನೆಯುತ್ತಾ ಕಡಲಿನೆ ಮೊರೆತದ ಮಧ್ಯೆ ಅಂತಹ ಕೊಳಚೆ ಪ್ರದೇಶದಲ್ಲಿ ಬೆಳೆದ ವ್ಯಕ್ತಿಯೊಬ್ಬ ವಿಶ್ವದ ಅತಿ ಬಲಿಷ್ಠ ದೇಶವಾದ ಅಮೇರಿಕಾದ ಅಧ್ಯಕ್ಷನಾಗಳು ಸಾಗಿದ ಮುಳ್ಳಿನ ದುರಗಮ ದಾರಿಯನ್ನು ನೆನೆಯುತ್ತಿದ್ದಾಗ ಅವರ ಕಣ್ಣಿನ ಅಂಚಿನಲ್ಲಿ ಹನಿಗಳು ಉದುರಿದವು !
ಗೋರಿದ್ವೀಪ- ಗುಲಾಮರ ಮಾರುಕಟ್ಟೆ !
- ೧೬-೧೯ ನೆಯ ಶತಮಾನದಲ್ಲಿ ಇದೇ ಗೋರೀ ದ್ವೀಪದಿಂದ ಗುಲಾಮರು ಹಡಗಿನಲ್ಲಿ ಅಮೆರಿಕಕ್ಕೆ ಸಾಗಿಸಲ್ಪಟ್ಟರು.
- ೧೭೭೬: ‘ಸ್ಲೇವ್ ಹೌಸ್ ಕಟ್ಟಿದ ವರ್ಷ’
- ೧೯೭೮ : ‘ವಿಶ್ವ ಹೆರಿಟೇಜ್ ತಾಣ’ ವೆಂದು ಗುರುತಿಸಲ್ಪತ್ತಿತು.
- ಈ ದ್ವೀಪಕ್ಕೆ ಭೆಟ್ಟಿ ನೀಡಿದ ವಿಶ್ವದ ಪ್ರಮುಖ ವ್ಯಕ್ತಿಗಳು : ಪಾಪ್ ಜಾನ್ ಪಾಲ್ ೨ , ನೆಲ್ಸನ್ ಮಂಡೇಲಾ, ಬಿಲ್ ಕ್ಲಿಂಟನ್ , ಜಾರ್ಜ್ ಡಬ್ಲ್ಯು ಬುಶ್,
- ಅಮೇರಿಕಾದಲ್ಲಿ ಒಬ್ಬ ಕಪ್ಪು ಆಫ್ರೋ-ಅಮೇರಿಕನ್ ನಾಗರಿಕನಾಗಿ ಒಬಾಮಗಳಿಸಿದ ಜನಪ್ರಿಯತೆಗೆ ಸರಿಸಾಟಿಯಿಲ್ಲ.
ಅಮೇರಿಕ ಸಂಯುಕ್ತ ಸಂಸ್ಥಾನ ಮತ್ತು ಅಫ್ರಿಕದ ಮಧ್ಯೆ ಸೇತುವೆಯಂತೆ ಬೆಳೆದಿರುವ ಬೆರಾಕ್ ಒಬಾಮರ ವ್ಯಕ್ತಿತ್ವಕ್ಕೆ ಸರಿಸಾಟಿಯಿಲ್ಲ.
ಆದರೆ, ಬಹಳ ಜನ ಆಪ್ಹ್ರಿಕನ್ನರಿಗೆ ಒಬಾಮ ಮೊದಲ ಬಾರಿ ಅಮೆರಿಕದ ಅಧ್ಯಕ್ಷರಾದಾಗ ಅವರ ತವರು ಭೂಮಿಯಬಗ್ಗೆ ಹೆಚ್ಚು ಕೆಲಸಮಾಡಬಹುದಿತ್ತು ಎನ್ನುವ ಬೇಸರವಿದೆ. ಈಗ ಒಬಾಮರವರು ಮಾಡಿದ ಭೆಟ್ಟಿ ಮನಸ್ಸಿಗೆ ಸ್ವಲ್ಪ ಸಮಾಧಾನ ತಂದಿದೆ.
ಆಫ್ರಿಕಕ್ಕೆ ಹೋಲಿಸಿದರೆ ಅಮೇರಿಕ ಚೀನ ದೇಶದ ಜೊತೆಗೆ ವ್ಯಾಪಾರ ಸಂಬಂಧಗಳನ್ನೂ ಹೆಚ್ಚು ಹೆಚ್ಚು ಮುಂದುವರೆಸುತ್ತಿದೆ. ರಾಜಕೀಯ ವಲಯದಲ್ಲಿ ಇದು ಅನಿವಾರ್ಯ ಸಹಿತ
Comments
ಬರವಣಿಗೆಯಲ್ಲಿ ಅರ್ಥ ಹೀಗಿರಬೇಕು.
In reply to ಬರವಣಿಗೆಯಲ್ಲಿ ಅರ್ಥ ಹೀಗಿರಬೇಕು. by venkatesh
ಬರಹ ಅರ್ಥವಾಗುತ್ತೆ ಬಿಡಿ, ನೀವು