೨೦೧೪ ರ ೩ ನೆಯ ತಾರೀಖಿನಂದು ಮುಂಬೈ ಆಕಾಶವಾಣಿಯಿಂದ ಪ್ರಸಾರವಾದ ಎರಡನೆಯ ಕಂತಿನ ಕಾರ್ಯಕ್ರಮ !

೨೦೧೪ ರ ೩ ನೆಯ ತಾರೀಖಿನಂದು ಮುಂಬೈ ಆಕಾಶವಾಣಿಯಿಂದ ಪ್ರಸಾರವಾದ ಎರಡನೆಯ ಕಂತಿನ ಕಾರ್ಯಕ್ರಮ !

೦೧೪ ರ ೩ ನೆಯ ತಾರೀಖಿನಂದು ಮುಂಬೈ ಆಕಾಶವಾಣಿಯಿಂದ ಪ್ರಸಾರವಾದ ಎರಡನೆಯ ಕಂತಿನ ಕಾರ್ಯಕ್ರಮ ! ಇದು ಸಮಯದ ಅಭಾವದಿಂದ ಮತ್ತೆ ಬಿತ್ತರವಾಹಿತೇ ವಿನಃ ಅದೇನೂ ಹೊಸದೇನಲ್ಲ ! ಪ್ರಸ್ತುತಿ ಅಹಲ್ಯಾಬಲ್ಲಾಳರದೇ. ಆದರೆ ಇಂದಿನ ಕವಿಗಳು ಮಾತ್ರ ಬೇರೆ ಬೇರೆಯವರು. 
ಸೋಮಾರಿಯಾದ ನಾನು ಏನೋಮಾಡುತ್ತಿರುವಾಗ ಒಮ್ಮೆಲೇ ಅಲಾರಂ ಘಂಟೆ ನನ್ನನ್ನು ಎಚ್ಚರಿಸಿತು. ನಾನು ರೇಡಿಯೋ ಹಚ್ಚುವ ಹೊತ್ತಿಗೆ ೧೦ ತಮಿಷ ತಡವಾಗಿತ್ತು. ನನ್ನ ಅಂದಾಜಿನ ಪ್ರಕಾರ ೩೦ ನಿಮಿಷಗಳಲ್ಲಿ ಚಿಕ್ಕ ೬ ಕವಿತೆಗಳು ಮತ್ತು ಸ್ವಲ್ಪ ಅದು ಇದು ನಿರೂಪಣೆ ಮಾಡಲು ಮಾತ್ರ ಸಾಧ್ಯ. ಒಟ್ಟಿನಲ್ಲಿ ಈಬಾರಿಯೂ ಕಾರ್ಯಕ್ರಮ ಕಳೆಕಟ್ಟಿತ್ತು. ಅದನ್ನು ಬರೆದುಕೊಳ್ಳುವಷ್ಟು  ವ್ಯವಧಾನ ನನಗೆ ಇರದೆ ಸುಮ್ಮನೆ ಒಂದು ಕಿರುನೋಟವನ್ನು ತಮ್ಮ ಮುಂದೆ ಹಂಚಿಕೊಳ್ಳಲು ಪ್ರಯತ್ನಿಸಿದ್ದೇನೆ. ಅಷ್ಟಕ್ಕೂ ನಾನೇನು ಕವಿಯಂತೂ ಮೊದಲೇ ಅಲ್ಲ. ವಿಶ್ಲೇಷಣೆ ಸುಲಭದಮಾತಲ್ಲ. ನನಗೆ ಮುಂಬೈ ಆಕಾಶವಾಣಿಯಲ್ಲಿ ಕನ್ನಡ ಕಾರ್ಯಕ್ರಮ ಶನಿವಾರ ಬರುತ್ತದೆ ತಪ್ಪದೆ ನನ್ನಂತೆ ನೀವೂ ಕೇಳಿ ಆನಂದಿಸಿ ಎಂದು ಹೇಳುವ ತವಕ ಅಷ್ಟೆ. ಕನ್ನಡ ಅಂದ್ರೆ ಸಾಕು ಏನಾದೃ ಹೇಳಿ ಕೇಳುತ್ತೇವೆ. ಹಾ. ನಾವು ೨೦೦೮ ರಲ್ಲಿ ಅಮೆರಿಕಕ್ಕೆ ಹೋದಾಗಲೂ ಹೀಗೆಯೇ ಆಯಿತು. ಕ್ಯಾಲಿಫೋರ್ನಿಯದಲ್ಲಿ (ಕಾಸ್ಟಾ ಮೆಸಾ ಎಂಬ ಚಿಕ್ಕ ಗ್ರಾಮದಲ್ಲಿ) ಕನ್ನಡ ಪತ್ರಿಕೆಗಳು ಎಲ್ಲಿ ಬರಬೇಕು ? ನಮ್ಮ ಬಳಿ ಇದ್ದ ಒಂದೇಮಯೂರ ಪತ್ರಿಕೆಯನ್ನು ೨-೩ ತಿಂಗಳು ಸಂಭಾಳಿಸಿಕೊಂಡು ಓದಿ, ಮರುಓದಿ ಮತ್ತೆ ಓದಿ ಕಳೆದ ದಿನಗಳನ್ನು ಮರೆಯುವಂತಿಲ್ಲ ! 
ಬಿ.ಎ.ಸನದಿಯವರ ಕವಿತೆ ಒಮ್ಮೆಲೇ ನೆನಪಿಗೆ ಬರುತ್ತದೆ. ’ಸುಮ್ಮ ಸುಮ್ಮನೆ ನಾ ಯಾರನ್ನೂ ದ್ವೇಶಿಸೋಲ್ಲ’
ಮನೆಮನೆಗೆ ಬೇಲಿ, ಒಂದು ಕನಸನ್ನು ಸಾಕಾರಗೊಳಿಸಲು ಕೋಟಿಮನಸ್ಸುಗಳು ಹೊಂದಾಣಿಕೆಯನ್ನು ಹೊಂದಬೇಕು ಎನ್ನುವ ಸುಂದರ ಕಲ್ಪನೆಯನ್ನು ಆಧಾರವಾಗಿಟ್ಟುಕೊಂಡು ಬರೆದಿರಬಹುದು.
೩. ಸ.ದಯ ಎನ್ನುವ ಕವಿ, ತೀರಾ ಸಂಕೋಚ ಪ್ರಕೃತಿಯ ತುಳು-ಕನ್ನಡ ಭಾಷೆಯ ಕವಿ. ನಾಟಕ ರಚನೆ, ನಿರ್ದೇಶನ ಮತ್ತು ಅಭಿನಯದಲ್ಲೂ ಆಸಕ್ತರು.
a. ಎಲ್ಲಿ ನನ್ನ ಕವಿತೆ ಕಳೆದುಹೋಗಿದೆ. ಈ ಮೆನೆಯೊಳಗೆ ಬೆಚ್ಚನೆಯ ಕಪಾಟಿನೊಳಗೆ,
b. ಆಕಡೆಯ ದಂಡೆಯಮೇಲೆ ಸೂರ್ಯ, ನಿಂತಿದ್ದಾನೆ
c. ಬಾರೋ ಚಂದಿರ ಬಾರೋ, ಬಾ ಬಾರೋ, ಆಡುವ ಬಾರೋ
d. ಪೋಸ್ಟರಿನ ಕೆಳಗೆ ಸಂಜೆ ಮಬ್ಬಿನಲಿ ದಾರಿದೀಪದ ಕೆಳಗೆ ಕತ್ತಲು ಮೈಚಾಚಿ ಮಲಗಿರಲು..
ಮಂಜುನಾಥ ಎನ್ನುವ ಯುವಕವಿಯನ್ನು ಸ್ಮರಿಸಿಕೊಳ್ಳುತ್ತಾ ಅಹಲ್ಯಾರವರು ನುಡಿದ ಮಾತುಗಳು. ಹೊಸತರಹದ ವಿಚಾರಗಳನ್ನು ಸ್ಪಂದಿಸುವ ತಕ್ಷಣ ತಲೆಗೆ ಸಿಲುಕದ ಹೊಸ ಕಲ್ಪನೆಗಳನ್ನು ಹೆಣೆಯಲು ತೊಡಗಿರುವ ಕವಿ
ಹೂಮನಸ್ಸಿನ ಹುಡುಗಿ, ಶ್ರೀಮತಿ, ಅನಿತಾ ಪೂಜಾರಿ ಕಾಕೋಡೆ
a. ’ಹಂಬಲ’- ದೇವರನ್ನು ನೋಡುವ ಹಂಬಲ. ಆಸೃಷ್ಟಿಕರ್ತ, ಚೈತನ್ಯಮೂರ್ತಿ ಜಗದ ಎಲ್ಲಾ ವ್ಯಾಪಾರಗಳಿಗೂ ಕಾರಣಕರ್ತ,
ಬ. ಕಾಣದ ದೇವರ ಹುಡುಕುವ ತನಕ, ಎಲ್ಲೆಲ್ಲೋ ಅರಸುತ್ತಾ ಮನೆಯಲ್ಲೇ ಇರುವ ಪ್ರೀತಿನೆಮ್ಮದಿಗಳ ಅಧಿದೇವತೆ ತಾಯಿಯನ್ನು ಗುರುತಿಸದಾಗುತ್ತೇವೆ. ಇದನ್ನೇ ಜಿಎಸೆಸ್ ತಮ್ಮ ಕವಿತೆಯಲ್ಲಿ ಹೃದಯಂಗಮವಾಗಿ ವರ್ಣಿಸಿದ್ದಾರೆ. ಎಲ್ಲೋ ಹುಡಿಕಿದೆ ಕಾಣದ ದೇವರ ಕಲ್ಲುಮುಳ್ಳುಗಳ ಗುಹೆಯೊಳಗೆ...
c. ಈ ನೆನಪುಗಳೇ ಹೀಗೆ; ಸದ್ದುಮಾಡದೆ ಮತ್ತೆ ಮತ್ತೆ ಕಾಡುತ್ತವೆ.
d. ಮರುಗದಿರು ಮನವೇ, ಎಂದು ಹೇಳುವ ಸಾಲಿನಲ್ಲಿ ಅಪಾರ ಭಾವನಾ ಲಹರಿಗಳು ಓಡಾಡುತ್ತವೆ. ದಡಕ್ಕೆ ಅಪ್ಪಳಿಸುತ್ತವೆ.
Link :  
http://sampada.net/blog/%E0%B2%85%E0%B2%AE%E0%B3%86%E0%B2%B0%E0%B2%BF%E0...