೨೦೨೧ರ ‘ಸಂಪದ’ ಟಾಪ್ ೧೦

೨೦೨೧ರ ‘ಸಂಪದ’ ಟಾಪ್ ೧೦

‘ಸಂಪದ’ ಜಾಲತಾಣದ ಹೊಸ ಓದುಗರಿಗೆ ಹಾಗೂ ಓದಲು ತಪ್ಪಿ ಹೋದವರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ‘ಸಂಪದ ನಿರ್ವಹಣಾ ತಂಡ'ವು ಪ್ರತೀ ವರ್ಷ ಹಿಂದಿನ ವರ್ಷದ ‘ಟಾಪ್ ೧೦’ ಲೇಖನಗಳನ್ನು ಆಯ್ದು ಪ್ರಕಟಿಸುತ್ತಿದ್ದೇವೆ. ಈ ವರ್ಷ ಲೇಖನಗಳ ಸಂಖ್ಯೆಯೂ ಅಧಿಕವಾಗಿದ್ದು, ಓದುಗರ ವೀಕ್ಷಣೆಯ ಸಂಖ್ಯೆಯೂ ಹೆಚ್ಚಿದೆ. ಆ ಕಾರಣದಿಂದ ಉತ್ತಮವಾದ ಹತ್ತು ಲೇಖನಗಳ ಆಯ್ಕೆ ಬಹಳ ಕಷ್ಟಕರವಾಗಿ ಪರಿಣಮಿಸಿತು. ಅದಕ್ಕಾಗಿ ಟಾಪ್ ೧೦ ಲೇಖನಗಳ ಜೊತೆ ಇನ್ನೂ ಐದು ಉತ್ತಮ ಲೇಖನಗಳನ್ನು ಆರಿಸಿದ್ದೇವೆ. ಇಲ್ಲಿರುವ ಲೇಖನಗಳನ್ನು ನೀವು ಈ ತನಕ ಓದದೇ ಇದ್ದಲ್ಲಿ ತಪ್ಪದೇ ಓದಿ. 

ಸಂಪದ ನಿರ್ವಹಣಾ ತಂಡವು ಲೇಖನಗಳನ್ನು ಆರಿಸುವಾಗ ಬಹುತೇಕ ಎಲ್ಲಾ ವಿಭಾಗಗಳನ್ನು ಪರಿಗಣಿಸಿದೆ. ಪ್ರಚಲಿತ ವಿದ್ಯಮಾನ, ಸಾಮಾಜಿಕ, ಪ್ರವಾಸ, ಪರಿಸರ, ಕಲೆ, ಪುಸ್ತಕ, ಪಾಕ, ಖಗೋಳ ವಿಜ್ಞಾನ ಹೀಗೆ ಹಲವಾರು ವಿಭಾಗಗಳನ್ನು ಪರಿಗಣಿಸಿ ಆಯ್ಕೆ ಮಾಡಿದ್ದೇವೆ. ಓದುಗರಾದ ನೀವೂ ನಿಮ್ಮ ಆಯ್ಕೆಯ ಟಾಪ್ ೧೦ ಲೇಖನಗಳನ್ನು ಆರಿಸಿ ನಮಗೆ ಪ್ರತಿಕ್ರಿಯೆ ರೂಪದಲ್ಲಿ ಕಳಿಸಬಹುದು.

೨೦೨೧ರ ಟಾಪ್ ೧೦ ಲೇಖನಗಳು:  

೧. ಚಿಪ್ಕೋ ಆಂದೋಲನದ ಹರಿಕಾರ ಸುಂದರ್ ಲಾಲ್ ಬಹುಗುಣ - ಅಡ್ಡೂರು -ಮೇ ೨೦೨೧

ಈ ಲೇಖನ ಖ್ಯಾತ ಪರಿಸರವಾದಿ ಸುಂದರಲಾಲ್ ಬಹುಗುಣ ಅವರ ‘ಚಿಪ್ಕೋ’ ಆಂದೋಲನದ ಹಿಂದಿನ ಮಹತ್ವವನ್ನು ವಿವರಿಸುತ್ತದೆ. 

೨. ಎರಡು ಬೌಲ್ ಹಲ್ವ - ಅಶ್ವಿನ್ ರಾವ್- ಜೂನ್ ೨೦೨೧

ಅಂತರ್ಜಾಲದಲ್ಲಿ ದೊರೆತ ಅಪ್ಪ-ಮಗನ ಭಾವನಾತ್ಮಕ ಸಂಬಂಧದ ವಿಷಯವನ್ನು ಬಹಳ ಸೊಗಸಾಗಿ ನಿರೂಪಿಸಿದ್ದಾರೆ

೩. ವರದಕ್ಷಿಣೆ ಎಂಬ ಭೂತ ಕಾಣೆಯಾಗುತ್ತಿದೆಯೇ? - ವಿವೇಕಾನಂದ ಹೆಚ್ ಕೆ- ಫೆಬ್ರವರಿ ೨೦೨೧

ಜನರಲ್ಲಿ ನಿಧಾನವಾಗಿ ಸಾಮಾಜಿಕ ಪ್ರಜ್ಞೆ ಮೂಡುತ್ತಿದೆಯೇ? ಎನ್ನುವ ಬಗ್ಗೆ ಒಂದು ಮಾಹಿತಿಪೂರ್ಣ ಲೇಖನ.

೪. ವರಂಗದ ಕೆರೆಬಸದಿ - ಅಶ್ವಿನ್ ರಾವ್ - ಜನವರಿ ೨೦೨೧

ಕಾರ್ಕಳ ತಾಲೂಕಿನ ವರಂಗದಲ್ಲಿರುವ ಸುಂದರ ಪ್ರವಾಸೀ ತಾಣ ಇದು. ಕೆರೆಯೊಂದರ ನಡುವೆ ಇರುವ ಬಸದಿಗೆ ನೀವು ಹೋಗಬೇಕಾದಲ್ಲಿ ದೋಣಿ ಮುಖಾಂತರವೇ ಹೋಗಬೇಕು.  

೫. ನೆನಪಿನ ದೋಣಿಯಲ್ಲಿ ಒಂದಷ್ಟು ಪ್ರಯಾಣ...- ವಿವೇಕಾನಂದ ಹೆಚ್ ಕೆ - ಅಕ್ಟೋಬರ್ ೨೦೨೧

ಲೇಖಕರು ತಮ್ಮ ನೆನಪಿನ ದೋಣಿಯಲ್ಲಿ ಸಾಗುತ್ತಾ ಬಹಳ ಪ್ರಮುಖ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ.

೬. ಪ್ಲಾಸ್ಟಿಕ್ ಕಸ ತಂದರೆ ಶಾಲಾ ಶುಲ್ಕ ಮನ್ನಾ - ಅಶ್ವಿನ್ ರಾವ್ - ಮಾರ್ಚ್ ೨೦೨೧

ಈ ಶಾಲೆಗೆ ನೀವು ಬರುವಾಗ ಪ್ಲಾಸ್ಟಿಕ್ ಕಸವನ್ನು ತಂದರೆ ನಿಮ್ಮ ಬೋಧನಾ ಶುಲ್ಕದಲ್ಲಿ ರಿಯಾಯತಿ ನೀಡುತ್ತಾರಂತೆ. ಎಲ್ಲಿದೆ ಈ ಶಾಲೆ...?

೭. ಚಿತ್ರಕಲೆಯೇ ಉಸಿರಾಗಿರುವ ಗಣೇಶ್ ಸೋಮಯಾಜಿ - ಅಡ್ಡೂರು- ಜೂನ್ ೨೦೨೧

ಉತ್ತಮ ಚಿತ್ರಕಾರರಾಗಿರುವ ಗಣೇಶ್ ಸೋಮಯಾಜಿಯವರ ಬಗ್ಗೆ ಒಂದು ಪರಿಚಯ ಲೇಖನ.

೮. ಹಾಕಿಂಗ್ ವಿಕಿರಣ - ಶಿಕ್ರಾನ್ ಸೈಫುದ್ದೀನ್ - ಜುಲೈ ೨೦೨೧

ಸ್ಟೀಫನ್ ಹಾಕಿಂಗ್ ಅವರ ಅನ್ವೇಷಣೆಯ ಬಗ್ಗೆ ಒಂದಿಷ್ಟು ಮಾಹಿತಿ.

೯. ಕಮರಿದ ಸತ್ಯಗಳು-ಚಿಗುರಿದ ಸುದ್ದಿಗಳು (ಪುಸ್ತಕ ಪರಿಚಯ) - ಶ್ರೀರಾಮ ದಿವಾಣ - ಫೆಬ್ರವರಿ ೨೦೨೧

ಪರಿಸರ ಪ್ರೇಮಿ, ಉರಗ ತಜ್ಞ ಗುರುರಾಜ್ ಸನಿಲ್ ಅವರ ಒಂದು ಮಾಹಿತಿ ಪೂರ್ಣ ಪುಸ್ತಕ.

೧೦. ನೆಲಗಡಲೆ ೬೫ (ಪಾಕ) - ವಾಣಿಶ್ರೀ ವಿನೋದ್ - ಸೆಪ್ಟೆಂಬರ್ ೨೦೨೧

ಪ್ರತೀ ದಿನ ಒಂದೇ ರೀತಿಯ ತಿಂಡಿಗಳನ್ನು ತಿಂದು ಬೋರಾಗಿದ್ದಲ್ಲಿ ನೀವು ಮಾಡಬಹುದಾದ ಹೊಸ ತಿಂಡಿಯ ಪಾಕ ವಿಧಾನ.

ಪಟ್ಟಿಯಿಂದ ಬಿಡಲಾಗದೆ ಉಳಿದ ಆಯ್ದ ಐದು ಲೇಖನಗಳು:

೧೧. ವೃಕ್ಷ ದೇವತೆ ತುಳಸಿ ಗೌಡ - ಅಶ್ವಿನ್ ರಾವ್ - ಜನವರಿ ೨೦೨೧

ಪದ್ಮಶ್ರೀ ಪುರಸ್ಕೃತೆ ಪರಿಸರ ಪ್ರೇಮಿ, ವೃಕ್ಷ ಮಾತೆ ತುಳಸಿ ಗೌಡ ಬಗ್ಗೆ ಮಾಹಿತಿ ನೀಡುವ ಲೇಖನ

೧೩. ಯುವಕರಿಬ್ಬರ ಸಾಧನೆ - ಪರಿಸರ ಸ್ನೇಹಿ ಟೀ ಬ್ಯಾಗ್ - ಅಶ್ವಿನ್ ರಾವ್ - ಮಾರ್ಚ್ ೨೦೨೧

ಟೀ ಬ್ಯಾಗ್ ನಲ್ಲಿ ನೂತನ ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಅಳವಡಿಸಿದ ಇಬ್ಬರು ಯುವಕರ ಸಾಧನೆ ಬಗ್ಗೆ ಒಂದು ನೋಟ.

೧೪. ಸಿಯಾಚಿನ್ (ಪುಸ್ತಕ ಪರಿಚಯ) ಅಶ್ವಿನ್ ರಾವ್ - ಡಿಸೆಂಬರ್ ೨೦೨೧

ಖ್ಯಾತ ಲೇಖನ ಎಸ್. ಉಮೇಶ್ ಅವರ ಪ್ರಪಂಚದ ಅತ್ಯಂತ ಎತ್ತರದ ಯುದ್ಧ ಭೂಮಿ ‘ಸಿಯಾಚಿನ್' ಇದರ ಪ್ರವಾಸ ಕಥನ ಹಾಗೂ ಹಿನ್ನಲೆ.

೧೫. ನಾನು ಉಷಾ ಸೋಮನ್... -ಅಶ್ವಿನ್ ರಾವ್ - ಜೂನ್ ೨೦೨೧

ಉಷಾ ಸೋಮನ್ ಎಂಬ ಮಹಿಳೆಯ ಬಗ್ಗೆ ನಿಮಗೆ ತಿಳಿದಿರುವುದು ಬಹಳ ಕಡಿಮೆ ಇರಬಹುದು. ಆದರೆ ಅವರ ಸಾಧನೆ ಕಡಿಮೆಯೇನಲ್ಲ. ಏನವರ ಸಾಧನೆ. ತಿಳಿಯಲು ಈ ಲೇಖನ ಓದಿ.

೧೭. ನೆನಪಿನಿಂದ ಮರೆಯಾಗದ ‘ಪತ್ತೇದಾರ' - ಎನ್ ನರಸಿಂಹಯ್ಯ- ಅಶ್ವಿನ್ ರಾವ್- ಮೇ ೨೦೨೧

ಸುಮಾರು ೨-೩ ದಶಕಗಳ ಹಿಂದಿನ ತಲೆಮಾರಿನ ಸಾಹಿತ್ಯ ಪ್ರೇಮಿಗಳಿಗೆ ಪತ್ತೇದಾರಿ ಕಾದಂಬರಿಯತ್ತ ಆಕರ್ಷಿಸಿದ ವ್ಯಕ್ತಿ ಎನ್. ನರಸಿಂಹಯ್ಯ. ಇವರ ಬಗ್ಗೆ ಮಾಹಿತಿ.

***

ಮೇಲಿನ ಹದಿನೈದು ಲೇಖನಗಳಲ್ಲದೇ ಇನ್ನೂ ಹಲವಾರು ಪ್ರಮುಖ, ಮಾಹಿತಿಪೂರ್ಣ ಲೇಖನಗಳು ೨೦೨೧ರಲ್ಲಿ ‘ಸಂಪದ' ಜಾಲತಾಣದಲ್ಲಿ ಪ್ರಕಟವಾಗಿವೆ. ಓದದೇ ಇದ್ದವರು ಬಿಡುವು ಮಾಡಿಕೊಂಡು ಓದಿ. 

-'ಸಂಪದ' ನಿರ್ವಹಣಾ ತಂಡ