೬೫ ನೇ ಸ್ವಾತಂತ್ರೋತ್ಸವ : ೧೯೪೭-೨೦೧೧?
ಮೊದಲಿಗೆ,
ಸಂಪದಿಗರಿಗೆಲ್ಲ ೬೫ ನೆ ಸ್ವಾತಂತ್ರೋತ್ಸವದ ಹಾರ್ದಿಕ ಶುಭಾಶಯಗಳು.
ನಮಗೆ ಸ್ವಾತಂತ್ರ್ಯ ಬಂದು ನಾಡಿದ್ದಿಗೆ (೧೫-೦೮-೨೦೧೧) ೬೫ ವರ್ಷ ಈ ಸಂದರ್ಭದಲ್ಲಿ , ಒಮ್ಮೆ ಹಿನ್ನೋಟವರಿಸಿದರೆ ನಿರಾಸೆ ಮೂಡದೆ ಇರದು.ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಪೂಜ್ಯ ಪೂರ್ವಜರು ಅಂದುಕೊಂಡಿದ್ದೆ ಒಂದು -ಆಮೇಲೆ ಆದದ್ದೇ ಒಂದು. ನಮ್ಮ ಸ್ವಾತಂತ್ರ್ಯಕ್ಕಾಗಿ ತನು-ಮನ-ಧನ-ಪ್ರಾಣವನ್ನು ಅರ್ಪಿಸಿದ ಆ ಮಹಾನ್ ಚೇತನಗಳ ಸುಸ್ವಪ್ನ ಈಗ ಧುಸ್ವಪ್ನವಾಗಿದೆ .
ಸ್ವಾತಂತ್ರ್ಯ ಕೊಡುವ ಮೊದಲೇ ಈ ಭಾರತೀಯರು ಆಳಿಸಿಕೊಳ್ಳಲು ಮಾತ್ರ ಅರ್ಹರೆ ಹೊರತು ಆಳಲು ಅಲ್ಲ ಎಂದು ಒಲ್ಲದ ಮನಸ್ಸಿಂದಲೇ ಸ್ವಾತಂತ್ರ್ಯ ಕೊಟ್ಟ ಬ್ರಿಟಿಷರ ಹಂಗಿನ ನುಡಿ ಸ್ವಾತಂತ್ರ್ಯ ಬಂದ ಕೆಲವೇ ವರ್ಷಗಳಲ್ಲಿ ನಮ್ಮ ಮಹಾನ್ ನೇತಾರರು ಆಳಿದ ಪರಿ, ತೆಗೆದುಕೊಂಡ ನಿರ್ಧಾರಗಳು, ಸ್ವಜನ ಪಕ್ಷಪಾತ ನಿಸ್ಟಾವಂತರ ಕಡೆಗಣನೆ ಎಲ್ಲವೂ ಹೆಚ್ಚಾಗಿ ನಿಜವಾಯ್ತು.
ಈ ಮಧ್ಯೆ ಸ್ವಾತಂತ್ರವಾದ ಸಿಹಿ ಅನುಭವಿಸುವ ಮೊದಲೇ ಗಾಂಧೀಜಿ ಸಾವು, ನೆಹರೂ ಜೊತೆ ಭಿನಾಭಿಪ್ರಾಯ ಪಾಕಿಸ್ತಾನದ ಜನನ ,ಪಾಕಿಗಳೊಂದಿಗೆ- ಚೀನಿಗಳೊಂದಿಗೆ ಯುದ್ಧ, ಜಯ , ಆದರೂ ಕಾಶ್ಮೀರ ವಿಸ್ಯದಲ್ಲಿ ಅನ್ಯಾಯ , ಈಗಲೂ ಜೀವಂತವಾಗಿರು ಕಾಶ್ಮೀರ ಸಮಸ್ಯೆ , ಅದ್ಕ್ಕೊಟ್ಟ ವಿಶೇಷ ಸ್ಥಾನಮಾನ ಇದರಿಂದ ನಮಗೂ ಆ ವಿಶೇಷ ಸ್ತಾನಮಾನ ಬೇಕೆನ್ನೋ ಕೂಗು, ನಮೆಗೆ ಪ್ರತ್ಯೇಕ ರಾಜ್ಯ,ಜಿಲ್ಲೆ-ನಗರ-ಪಟ್ಟಣ ಬೇಕೂಂತ ಹಠ ಹಿಡಿದ ಜನ, ತಮ್ಮ ಬೇಳೇ ಬೇಯಿಸಿಕೊಳ್ಳಲು ಜನರನ್ನ ಎತ್ತಿ ಕಟ್ಟಿದ ನಾಯಕರು.ಈ ಮಧ್ಯೆ ಉಗ್ರವಾದ -ನಕ್ಸಲ್ ವಾದ ಆರಂಭ.
ನಮ್ಮ ಬೇಹುಗಾರಿಕ ವೈಫಾಲ್ಲ್ಯದಿಂದ ದೇಶದೊಳಕ್ಕೆ ನುಸುಳಿ , ಮುಗ್ಧ ಜನರನ್ನ ಒತ್ತೆ ಇಟ್ಟುಕೊಂಡು ಜನ ಸಾಮಾನ್ಯರನ್ನು ಮತ್ತು ಅತ್ಯುತ್ತಮ ಪೋಲಿಸ್ ಅಧಿಕಾರಿಗಳನ್ನು ಬಲಿ ತೆಗೆದುಕೊಳ್ಳೋ ಉಗ್ರವಾಧಿಗಳು, ಈ ವಿಸ್ಯದಲ್ಲೂ ಎಡಬಿಡಂಗಿಗಳಂತೆ ಆಡೋ 'ಜನ ನಾಯಕರು'. ಸಂಪೂರ್ಣ ಸಾಕ್ಷರತ ವಿಫಲತೆ ,ನಿರುದ್ಯೋಗ ಸಮಸ್ಯೆ, ಕಪ್ಪು ಹಣದ ಸಮಸ್ಯೆ,ಅದನ್ನು ವಾಪಾಸ್ ತರಲೆಂದು ಜನ ಸಾಮಾನ್ಯರೆಲ್ಲ ಅದೆಷ್ಟು ಸಾರಿ ಗೋಗರೆದರೂ ಜಾಣ ಕಿವುಡುತನ ಪ್ರದರ್ಶಿಸಿದ ಸರಕಾರಗಳು. ಈ ಮಧ್ಯೆ ಬಯಲಿಗೆ ಬಂದ ಮಹಾ ಮಹಾ ಹಗರಣಗಳು, ಆದರೆ ಹಗರಣದಲ್ಲಿ ಭಾಗಿಯಾದವರು ಮಾತ್ರ ರಾಜಾ ರೋಷವಾಗಿ ಹೊರಗೆ ಬಂದರು.
ನಮ್ಮ ದುರ್ಧೈವ ವೆಂದರೆ ನಮ್ಮ ದೇಶಕ್ಕೆ ಬಹು ಮುಖ್ಯವಾಗಿ ಬೇಕಾಗಿದ್ದ ಸರಳತೆ,ಸಾಮಾಜಿಕ ಪ್ರಜ್ಞೆ ,ನ್ಯಾಯ ನಿಸ್ಟುರತೆ,ಪ್ರಾಮಾಣಿಕತೆ ಉಳ್ಳ ಮಹಾನ್ ನಾಯಕರನ್ನು ಮುತ್ಸದ್ಧಿಗಳನ್ನು ಒಬ್ಬರಾದ ಮೇಲೆ ಒಬ್ಬರಂತೆ ಅತ್ಯಲ್ಪ ಕಾಲದಲ್ಲೇ ಕಳೆದುಕೊಂಡದ್ದು. ಇದರಲ್ಲಿ ನೇತಾಜಿ, ಗಾಂಧೀಜಿ,ಶಾಸ್ತ್ರಿ ,ಪಟೇಲರು, ಮುಂತಾದವರು , ಇವರೆಲ್ಲ ಇನ್ನಸ್ಟು ಕಾಲ ಬದುಕಿ ಬಾಳಿ ಸಲಹೆ ಸೂಚನೆ ಕೊಟ್ಟಿದ್ದರೆ ದೇಶದ ಚುಕ್ಕಾಣಿ ಇನ್ನಸ್ಟು ಕಾಲ ಹಿಡಿಡಿದ್ದರೆ ನಮ್ಮ ದೇಶದ ಸ್ಥಿತಿ ಬಹು ಮಟ್ಟಿಗೆ ಸುಧಾರಿಸುತ್ತಿತ್ತು.
ನಮ್ಮ ದೇಶದ ನ್ಯಾಯ ಬಡಬಗ್ಗರಿಗೆ ಒಂದು ಉಳ್ಳವರಿಗೆ ಮತ್ತೊಂದು ತರ ಅನಿಸಿದ್ದು ಇದೆ ಕಾಲದಲ್ಲಿ (೬೫ ವರ್ಷಗಳಲ್ಲಿ) ಇದಕ್ಕೆ ಭೋಪಾಲ್ ದುರಂತ , ಸುಟ್ಟ ಗಾಯಕ್ಕೆ ಬರೆ ಹಾಕುವ ರೀತಿಯ ಪರಿಹಾರ, ಅದೂ ಎಸ್ಟೋ ವರ್ಷ ಕೋರ್ಟಿಗೆ ಅಡ್ಡಾಡಿ! ಮತ್ತು ಅದಕ್ಕೆ ಕಾರಣವಾದವನನ್ನ ರಾತ್ರೋ ರಾತ್ರಿ ವಿದೇಶಕ್ಕೆ ಸೇಫ್ ಆಗಿ ಕಳಿಸಿದ ನಮ್ಮ ಮಹಾನ್ ನಾಯಕರು! ಕೊನೆಗೆ ಭೋಪಾಲ್ ದುರಂತಕ್ಕೆ ಕಾರಣವಾದವರೆಂದು ನಮ್ಮದೇ ದೇಶದ ಮೂರ್ ನಾಲ್ಕು ಮಂದಿಗೆ ಕೊಟ್ಟ ಕೋರ್ಟು ಶಿಕ್ಷೆ ಅತ್ಯಲ್ಪ ಮತ್ತು ಅವರಿಗೆ ಜಾಮೀನು ಪಡೆದುಕೊಳ್ಳಲು ಅವಕಾಶ!
ಇನ್ನು ಕೆಲವರನ್ನ ನೋಡಿ : ನಟನೊಬ್ಬ ಸಂರಕ್ಷಿತ ಪ್ರಾಣಿ ಹತ್ಯೆ (ಇದನ್ನು ಜನ ಸಾಮಾನ್ಯನೊಬ್ಬ ಮಾಡಿದ್ದರೆ ಅವನು ಜೀವನ ಪೂರ್ತಿ ಜೈಲ್ ನಲ್ಲೆ ಕೊಳೆತು ಜಾಮೀನು ಇಲ್ಲದೆ ಪರಲೋಕವಾಸಿಯಗಬೇಕಿತ್ತು) ಮಾಡಿ ಅದೂ ಸಾಲದೆಂಬಂತೆ ಫೂಟ್ ಪಾತ್ ಮೇಲೆಮಲಗಿದ್ದವರ ಮೇಲೆ ಕಾರ್ ಹರಿಸಿ ಪರೋಲೋಕಕ್ಕೆ ಕಳಿಸಿದ, ಸಾಕ್ಷಿಗಳನ್ನೇ ಕೊಂಡುಕೊಂಡು ಹೊರಗಡೆ ಆರಾಮಾಗಿ ಇದ್ದಾನೆ. ಇನ್ನೊಬ್ಬ ನಟ, ಮಹಾ ನಗರದ ಜನ ಭಯಭೀತರಾಗಿ ಓಡ್ದೊಗ್ತಿದ್ದರೆ ತೆರೆದ ಜೀಪಿನಲ್ಲಿ ಬಂದೂಕು ಹೆಗಲಿಗೆ ಹಾಕಿಕೊಂಡು ಅಟ್ಟಹಾಸ ತೋರಿಸಿದ, ಮಹಾನಗರದ ಮಹಾ ಮಾರಣಹೋಮಕ್ಕೆ ಕಾರಣವಾದ ಸ್ಪೋಟಕಗಳನ್ನ ತನ್ನ ಮನೆಯಲ್ಲೇ ಬಚ್ಚಿಟ್ಟುಕೊಂಡಿದ್ದ!
ಇದೆ ಸಾಲಿಗೆ ಇನ್ನದಸ್ಟೋ ನಾಯಕರ ಮಕ್ಕಳಿದ್ದರು , ಕೋರ್ಟಿಗೆ ಹೋದರು, ಸಾಕ್ಷಿ ಕೊಂಡುಕೊಂಡರು ಅರಾಮಾಗೆ ಬಯಲಿಗೆ ಬಂದು ಬದುಕುತ್ತಿದ್ದ್ದಾರೆ. ಇದನ್ನೇ ಒಬ್ಬ ಜನ ಸಾಮಾನ್ಯ ಮಾಡಿದ್ದರೇ?
Comments
ಉ: ೬೫ ನೇ ಸ್ವಾತಂತ್ರೋತ್ಸವ : ಒಂದು ಹಿನ್ನೋಟ-ಮುನ್ನೋಟ ...
ಉ: ೬೫ ನೇ ಸ್ವಾತಂತ್ರೋತ್ಸವ : ೧೯೪೭-೨೦೧೧?
ಉ: ೬೫ ನೇ ಸ್ವಾತಂತ್ರೋತ್ಸವ : ೧೯೪೭-೨೦೧೧?
ಉ: ೬೫ ನೇ ಸ್ವಾತಂತ್ರೋತ್ಸವ : ೧೯೪೭-೨೦೧೧?
ಉ: ೬೫ ನೇ ಸ್ವಾತಂತ್ರೋತ್ಸವ : ೧೯೪೭-೨೦೧೧?