೯೮೯ ಜನರು ಓದಿದ್ದು,೫ ಜನರು ಪ್ರತಿಕ್ರಿಯೆ,ನಿಮಗೇನನ್ನಿಸುತ್ತೆ?

೯೮೯ ಜನರು ಓದಿದ್ದು,೫ ಜನರು ಪ್ರತಿಕ್ರಿಯೆ,ನಿಮಗೇನನ್ನಿಸುತ್ತೆ?

ಬರಹ

(ನನಗೆನನ್ನಿಸುತ್ತೆ ಗೊತ್ತ?)
ಕೇವಲ ೫ ಜನ(ನಾನು ಸೇರಿ ೬ ಜನ) ಮಾತ್ರ ಇದಕ್ಕೆ ಉತ್ತರಿಸುವ ತೊಂದರೆ ತೆಗೆದುಕೊಂಡಿದ್ದಾರೆ.
ನಿಮ್ಮ ಈ ಬರಹ ಅಕ್ಕ ಪಕ್ಕದ ರಾಜ್ಯದವರು ಹೀಯಾಳಿಸಿ ಬರೆದಂತಿದೆ. ನಿಮ್ಮ ಊಹೆ ಖಂಡಿತ ತಪ್ಪು, ನಾನೂ ಸಹಾ ಅಣ್ಣಾವ್ರ ಅಭಿಮಾನಿ, ಎಲ್ಲದಕ್ಕೂ ಹೆಚ್ಚಾಗಿ ಚೆನ್ನಾಗಿ ನಟಿಸಿದ, ನಟಿಸುವ ಎಲ್ಲ ಕನ್ನಡ ನಟರ ನಟಿಯರ ಅಭಿಮಾನಿ.
ಕನ್ನಡ, ಕರ್ನಾಟಕ , ಕನ್ನಡ ಚಿತ್ರರಂಗ ಎಂದರೆ ಈಗಲೂ ಸಹ ನೆನಪಾಗುವ ಇನ್ನೊದು ಹೆಸರು ಕೇವಲ 'ಅಣ್ಣಾವ್ರು' ಮಾತ್ರ.
ಶಿವಣ್ಣ, ಅಪ್ಪು, ರಾಘಣ್ಣ ಅವರನ್ನ ಜನ ಒಪ್ಪಿದ್ದು, ನೀವೆಲಿದಂತೆ, ಕೇವಲ 'ಅಣ್ಣಾವ್ರ' ಮಕ್ಕಳು ಅಂತಲ್ಲ.
ಅವರ ಅಭಿನಯ ನೋಡಿ, ಇನ್ನು ನೀವು ಹೀಗೆ ಹೇಳುವ ಮೂಲಕ, ಅವರನ್ನು ಮೆಚ್ಚಿದ ನನ್ನಂತ ಎಸ್ಟೋ ಜನರ ಮನಸ್ಸಿಗೆ ನೋವು ಮಾಡಿದ್ದೀರ. ನಾನು ಇವರನ್ನು ಮೆಚ್ಚಿದ ಹಾಗೇ, ಅಂಬಿ, ವಿಷ್ಣು, ರವಿಚಂದ್ರನ್, ದರ್ಶನ್, ಗಣೇಶ್, ಸುನಿಲ್,ಶಂಕರ್ನಾಗ್ (ದಿವಂಗತ), ಅನಂತನಾಗ್, ಹೀಗೆ ಎಲ್ಲರನ್ನು ಮೆಚ್ಚಿದ್ದೇನೆ. ನೇವು ಹೇಳಿದ್ದೆ ನಿಜವಾದರೆ, ರಾಘಣ್ಣ ತೆರೆಮರೆಗೆ ಕೇವಲ ಕೆಲವೇ ಚಿತ್ರಗಳ ನಂತರ ಸರಿಯುತ್ತಿರಲಿಲ್ಲ. ಹಾಗೂ ಶಿವಣ್ಣ, ಅಪ್ಪು ಎಲ್ಲ ಚಿತ್ರಗಳೂ ಹಿಟ್ ಆಗುತ್ತಿದ್ದವು. ಇನ್ನು ನೀವು ಹೇಳಿದ, 'ವಿಷ್ಣು ಪುರಾಣದ' ಬಗೆಗಿನ ಲೇಖನವನ್ನ ನಾನು ಸಹಾ(ಇನ್ನು ಎಸ್ಟೊಂದು ಜನ ಸಹಾ ಓದಿರಬಹುದು) ಓದಿದ್ದೇನೆ. ಆದರೆ ಅದರಲ್ಲಿ,. 'ಅಣ್ಣಾವ್ರ' ಬಗೆಗಲ್ಲ, ಅಣ್ಣಾವ್ರೆ ಹೀಗೆಲ್ಲ ಮಾಡಿಸಿದರು, ಅಥವಾ ಮಾಡಿದರು ಅಂತಲ್ಲ. ಅವರ ಕೆಲ ಹುಚ್ಚು ಅಭಿಮಾನಿಗಳ ಬಗ್ಗೆ ಮಾತ್ರ .

ಅದನ್ನು ಓದಿ ನನಗೂ ಕೋಪ ಬಂದಿತ್ತು, ಆದರೂ ಜನ, ಅನಂತನಾಗ್, ವಿಷ್ಣು ಅವರನ್ನ ಇಷ್ಟ ಪಟ್ರು ಅನ್ನೋದನ್ನ ಮರೀಬೇಡಿ.
ಈಗಿನ ಅವಶ್ಯಕತೆ, ನಮ್ಮವರ ಬಗ್ಗೆಗ್ಯೆ ತೆಗಳುತ್ತ ಈ ತರಹದ್ದನ್ನ ಬರೆಯುವುದಲ್ಲ, ಅನ್ಯ ರಾಜ್ಯದವರನ್ನ ನಮ್ಮ ಸಂಸ್ಕೃತಿ, ಜೀವನ, ರೀತಿ - ನೀತಿ ಗಳ ಮೇಲೆ ಪ್ರಭಾವ ಬೀರದಂತೆ ತಡೆಯುವುದು. ಅದನ್ನು ನಾವೆಲ್ಲಾ ಮಾಡೋಣ.
ನನ್ನ ಪ್ರತಿಕ್ರಿಯೆ ಕಿಡಿ ಯಾಗಿದ್ದಾರೆ, ಅದು ನನ್ನ ತಪ್ಪಲ್ಲ. ಅದು ನನ್ನ ಮನದಾಳದ ಮಾತು.
post scrap cancel