‎"ಉಪ್ಪು ತಿಂದವನು ನೀರು ಕುಡಿಯಲೇ ಬೇಕು"

‎"ಉಪ್ಪು ತಿಂದವನು ನೀರು ಕುಡಿಯಲೇ ಬೇಕು"

ಕವನ

ಈ ಪ್ರೀತಿ ಪ್ರೇಮದ ಮಧ್ಯ 
ಹೊದ್ದ ಹಾಸಿಗೆ ಒದ್ದೆ,
ಹರಿದ ಕಣ್ಣೀರ ಕೋಡಿಗೆ.
ಕಣ್ಣೀರ ಹನಿಯು
ಕೆನ್ನೆ ಸವರಿ ತುಟಿಗಿಳಿದಾಗ
ನಾನದನ ನೆಕ್ಕಿದೆ.
ಅದರ ರುಚಿ ಬರೀ 
ಉಪ್ಪು-ಉಪ್ಪು ,
ಆಗ ತಟ್ಟನೆ ಅರಿವಾಯ್ತು
"ಉಪ್ಪು ತಿಂದವನು ನೀರು ಕುಡಿಯಲೇ ಬೇಕು" !