‘ಅರ್ಥ’ದ ಅನರ್ಥ
ಕವನ
ಕುರುಡು ಕಾಂಚಾಣ ಕುಣಿತೈತೆ ತಮ್ಮ
ಲಂಗು ಲಗಾಮಿಲ್ಲದೆ ಎಗರಿ ಮೆರಿತೈತೆ
ಗೂಳಿಯ ಓಟದಲಿ, ಕರಡಿಯ ಕುಣಿತದಲಿ
ಕುರುಡು ಕಾಂಚಾಣ ಎಗ್ಗಿಲ್ಲದೆ ನಲಿದೈತೆ!
ಕುರುಡು ಕಾಂಚಾಣ...
ಜ್ಞಾನ ಭಂಡಾರಕ್ಕು ಬೆಲೆ ಕೊಡದೆ ಕುಣಿತೈತೆ
ಆತ್ಯಾಸೆಗಳ ಸುತ್ತ ಸುಳಿಯುತ್ತಾ ಬರುತೈತೆ
ಸುಳ್ಳು, ಪೊಳ್ಳುಗಳನ್ನು ಬಲು ಚೆನ್ನಾಗಿ ಪೊರೆಯುತ್ತೆ
ಊಹ, ಪೋಹದಾಟದಲಿ ಚೆನ್ನಾಗಿ ನಲಿಯುತ್ತೆ.
ಕುರುಡು ಕಾಂಚಾಣ...
ಕಣ್ಣು, ಬಾಯಿ,ಕಿವಿ ಅದಕೆ ಎಲ್ಲೈತೆ
ಕರ ಕರವ ದಾಟುತ್ತ ಆಟವನಾಡುತ್ತೆ
ಕೊಟ್ಟರು, ಬಿಟ್ಟರು ಅಪವಾದ ತರುತೈತೆ
ಜೇಬಲ್ಲಿ ಕುಳಿತು ನಲಿದಾಡುತಿರುತೈತೆ
ಕುರುಡು ಕಾಂಚಾಣ...
ಸದಾ ಸಂಚಾರಿ ಎಲ್ಲೆಡೆಯೂ ಇರುತೈತೆ
ಕಪ್ಪು ಹಣೆಪಟ್ಟಿಯಲಿ ಸ್ವಿಸ್ ಲಾಕರಿನಲಿರುತೈತೆ
ನಿರ್ಜೀವದಲ್ಲೂ ಇದು ಎಲ್ಲರಿಗೂ
ಬಾಳು ನಿಡುತೈತೆ
ಕಾಸಿನಾಸೆಯಲಿ ಎಲ್ಲವೂ ನಡಿತೈತೆ,
ದಕ್ಕಿಸುತೈತೆ!
ಕುರುಡು ಕಾಂಚಾಣ...
-ವೀಣಾ ಕೃಷ್ಣಮೂರ್ತಿ, ದಾವಣಗೆರೆ
ಇಂಟರ್ನೆಟ್ ಚಿತ್ರ ಕೃಪೆ
ಚಿತ್ರ್
