‘ಅಲ್ಲೇ ನಿಂತು’

‘ಅಲ್ಲೇ ನಿಂತು’

ಕವನ

ಮತ್ತೆ ಮತ್ತೇ ಅಲ್ಲೆ ನಿಂತು

ಮುಗುಳು ನಗೆಯಾ ಚೆಲ್ಲುತ

ಹಿಂದೆ ತಿರುಗೀ ನನ್ನ ನೋಡಿ

ಕಣ್ಣು ಕಣ್ಣೂ ಬೆರೆಸುತ

 

ನನ್ನಲೇನೋ ಬೆಂಕಿ ಹಚ್ಚಿ

ದೂರ ಹೋಗೀ ಕುಳಿತೆಯಾ

ಒಳಗೆ ಸುಡುತಾ ಬೇಯಲೀಗ

ನಗುತ ಸುತ್ತಾ ಸುಳಿದೆಯಾ

 

ರವಿಯ ಕಿರಣಾ ರಾಶಿಯೊಳಗೆ

ಕೇಶರಾಶೀ ಸೇರುತ

ಅದರ ರಶ್ಮೀ ನನ್ನ ಮೈಗೆ

ತಾಗಿ ಮುತ್ತಾ ಒತ್ತುತ

 

ನೀನು ಬರದೇ ಇರುಳನಿಲ್ಲಿ

ನಾನು ಹೇಗೇ ಕಳೆಯಲಿ

ಚಂದ್ರ ತಾರೇ ಚೆಲುವಿನಲ್ಲಿ

ನಮ್ಮ ಪಯಣಾ ಸಾಗಲಿ

***

ಗಝಲ್

ಬದುಕಿನಲ್ಲಿ ಸವಿಯನು ತಿನಿಸಲೇ ಗೆಳತಿ

ಜೀವನದಲ್ಲಿ ಪ್ರೇಮವ ಕುಣಿಸಲೇ ಗೆಳತಿ

 

ಚಿತ್ತದೊಳಗಿನ ಚಿತ್ರದಂತೆ ಬದುಕಲಿ ಬೇಕೆ

ಯೌವನದ ಸೆಳೆತದೊಳು ಕಾಣಿಸಲೇ ಗೆಳತಿ

 

ಮಲಗಿರುವಾಗ ನಾವು ಕಣ್ಣುಮುಚ್ಚುತ್ತೇವೆ

ಸರಸದ ಸಲ್ಲಾಪದಲ್ಲಿಯೆ ಮಣಿಸಲೇ ಗೆಳತಿ

 

ಜೀವನದೊಳಗೆ ಒಲವು ಮೂಡಲಾರದೇನು

ಜೇನಿನೊಳಗಿನ ಸುಧೆಯನು ಹನಿಸಲೇ ಗೆಳತಿ

 

ನನಸಿನಾಟದ ತರುವಾಯ ಹೊರಡುವನು ಈಶಾ

ಅತಿಯೆನುವ ಪ್ರೀತಿಯಾಟವನು ಉಣಿಸಲೇ ಗೆಳತಿ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್