‘ಅವಳ ಚೆಲುವು’ ಎಂಬ ಗಝಲ್
ಕವನ
ಅರಳಿ ನಿಂತ ಅವಳ ಚೆಲುವು
ಎಷ್ಟು ಸೊಗಸಾಗಿದೆ ಗೆಳೆಯ
ಹೊಳೆಯುತಿರುವ ಹೂದೋಟ
ಕೈ ಬೀಸಿ ಕರೆಯುತಿದೆ ಗೆಳೆಯ..!!
ಕೆಂಪು ಹಳದಿ ಬಣ್ಣಗಳೆರಡು
ಕನಸಿಗೆ ಮುನ್ನುಡಿ ಬರೆದಂತಿದೆ
ಮೊಗ್ಗುಗಳು ಮಾತನಾಡುವಾಗ
ಮನಸ್ಸು ಹಗುರಾಗಿದೆ ಗೆಳೆಯ..!!
ಕಣ್ಮನ ಸೆಳೆಯುವ ಆಕರ್ಷಣೆಗೆ
ಸ್ವರ್ಗವೂ ಸೋತು ಶರಣಾಗಿದೆ
ತುಂತುರು ಹನಿಗಳ ಸ್ಪರ್ಶದಿಂದ
ಭುವಿಯು ನಗುತಲಿದೆ ಗೆಳೆಯ..!!
ಹಸಿರು ಸೀರೆ ತೊಟ್ಟು ನಿಂತ
ಹಸನ್ಮುಖಿ ನನ್ನವಳಾಗಿರಲು
ಬದುಕಿನಲ್ಲಿ ಭರವಸೆಯೊಂದು
ಹಚ್ಚ ಹಸಿರಾಗಿದೆ ಗೆಳೆಯ..!!
ಚಿಗುರಿದ ಬಳ್ಳಿ ಚೈತನ್ಯವಾಗಲು
"ಹೂಗಾರ"ನ ಬೆವರು ಸುರಿದೈತೆ
ಕಷ್ಟದಿ ದುಡಿದವನಿಗೆ ಉತ್ತಮ
ಆದಾಯ ಸಿಗಬೇಕಿದೆ ಗೆಳೆಯ..!!
-‘ಪುಷ್ಪಕವಿ’ ಉಮೇಶ ಹೂಗಾರ*
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್