‘ಇತಿಶ್ರೀ’ (ಸಣ್ಕತೆ)
ಪಾರ್ವತಿ ಎರಡು ಪುಟ್ಟ ಮಕ್ಕಳೊಂದಿಗೆ ಕುಡುಕ ಗಂಡನನ್ನು ಕಟ್ಟಿಕೊಂಡು ಪಡುವ ಪಾಡು ಕಣ್ಣಲ್ಲಿ ನೋಡಲಾಗುತ್ತಿರಲಿಲ್ಲ. ಬೀಡಿ ಸುತ್ತಿದರೆ ಒಲೆಯಲ್ಲಿ ಬೆಂಕಿ, ಇಲ್ಲದಿದ್ದರೆ ಅದೂ ಇಲ್ಲ. "ಏನ್ರಿ, ಹೊರಗೆ ಹೋಗಿ ದುಡ್ಕೊಂಡು ಬನ್ನಿ" ಹೇಳಿದ್ರೆ ಕೆನ್ನೆಗೆ ಬಿದ್ದಾಯಿತು. ಯಾಕೋ ಸುಸ್ತು, ಸಂಕಟ ಅಂಥ ಕಷಾಯ ಮಾಡಿ ಕುಡಿದರೂ ಕಡಿಮೆಯಾಗದ ಕಾರಣ, ಹತ್ತಿರದ ಆಸ್ಪತ್ರೆಗೆ ಹೋಗಿ, ವೈದ್ಯರು ಹೇಳಿದ ವಿಷಯ ಕೇಳಿ ಹೌಹಾರಿದಳು. "ಅಯ್ಯೋ ಭಗವಂತ! ನಿನಗೂ ಕರುಣೆಯಿಲ್ಲವೇ?" ಎಂದಳು. ಬೆಳಗಿನ ಜಾವದವರೆಗೂ ಹೊರಳಾಡಿದವಳು, ಈ ಹಣಕಾಸಿನ ಕಷ್ಟಕ್ಕೆ ತಲೆಬಾಗಿ ತನ್ನ ಬದುಕಿಗೆ *ಇತಿಶ್ರೀ* ಹಾಡಿದಳು.
(ಸತ್ಯ ಘಟನೆಯ ಆಧಾರಿತ)
-ರತ್ನಾ ಕೆ.ಭಟ್, ತಲಂಜೇರಿ
ಇಂಟರ್ನೆಟ್ ಚಿತ್ರ