‘ಜನನ ಮರಣ’ದ ಜತೆಗೆ ಒಂದು ಗಝಲ್
ಕವನ
ಹಗೆಯೊ ಪಗೆಯೊ
ಬಗೆಯ ಪೊಗೆಯೊ
ದಗೆಯ ಕೊಡುವ ತಂತ್ರ ಹೊಸತು
ತೆಗಳೊ ಪೊಗಳೊ
ಹಗಲೆ ರಾತ್ರಿ
ತೆಗೆಯ ಬಹುದೆ ನವ್ಯ ಹಾಡು
ಕಲೆಯ ಕಂಬ
ಚೆಲುವು ದಿಂಬು
ಮಲಗೆ ಸವಿಯ ನಿದ್ರೆ ಮನದಿ
ಹಲವು ಚಿಂತೆ
ಹೊಲಸು ಕಂತೆ
ಜಲದ ಹುಳುಕು ಕಣ್ಣ ಸರದಿ
ಮನೆಗೆ ಬರದ
ಮನದ ಮಾತು
ತನುವ ಜೊತೆಗೆ ಹೋಗಿ ಗೆಲಲು
ಜನನ ಮರಣ
ಹನನ ಸೃಷ್ಟಿ
ತನನ ಬಗೆಗೆ ವಿಶ್ವ ಬರಲು
***
ಗಝಲ್
ತುರುಬ ತುಂಬ ಹೂವ ಮುಡಿದು ಎಲ್ಲಿ ಹೋದೆ ನಲ್ಲೆ
ಕನಸ ಕದ್ದ ನನಸ ನೆಪದಿ ಇಲ್ಲೆ ಕಾದೆ ನಲ್ಲೆ
ಮೋಹ ತುಂಬಿ ಹೂವು ಅರಳಿ ಮೌನ ಹೃದಯ ಬೇಕೆ
ದುಂಬಿ ಹಾಗೆ ಸವಿಯೆ ಇಂದು ನಾನು ಬಂದೆ ನಲ್ಲೆ
ಎಲ್ಲೊ ಕುಳಿತು ನನ್ನ ನೋಡಿ ನಕ್ಕೆ ನೀನು ಏಕೆ
ಕೈಯ ಹಿಡಿದು ತಬ್ಬ ಬೇಕು ಚೆಂದ ಅಂದೆ ನಲ್ಲೆ
ಚಿತ್ರ ಸೊಬಗು ಸುತ್ತ ಮುತ್ತ ಸವಿಯ ಹರಡೆ ನಲಿವು
ಶಯನ ಕಂಡ ರಾತ್ರಿ ಹೊರಗೆ ಬಂದು ನಿಂದೆ ನಲ್ಲೆ
ಹೊತ್ತು ಮೂಡಿ ಇರುಳು ಕಳೆಯೆ ಎಲ್ಲಿ ಇಹನು ಈಶ
ಬಾನ ಕಿರಣ ಬುವಿಗೆ ಚೆಲ್ಲೆ ದೂರ ಸರಿದೆ ನಲ್ಲೆ
-ಹಾ. ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್