‘ವಿಶ್ವ ಗಾಳಿ ದಿನ’ದ ಬಗ್ಗೆ ಮಾಹಿತಿ

‘ವಿಶ್ವ ಗಾಳಿ ದಿನ’ದ ಬಗ್ಗೆ ಮಾಹಿತಿ

ಗಾಳಿಯಿಲ್ಲದೆ ಜೀವಕೋಟಿಯಿಲ್ಲ. ಪಂಚಭೂತಗಳಲ್ಲಿ ವಾಯುವೂ ಒಂದು. ಗಾಳಿ ಎನ್ನುವುದು ನೈಸರ್ಗಿಕವಾದರೂ ಇತ್ತೀಚೆಗೆ ಶುದ್ಧವಾದ ಗಾಳಿಗೆ ಕುತ್ತು ಬಂದಿದೆ. ಕೊರೊನಾ ಸಮಯದಲ್ಲಿ ಶುದ್ಧಗಾಳಿಗಾಗಿ ಪರದಾಡಿದ ವಿಷಯ ಮಾಧ್ಯಮಗಳಲ್ಲಿ ನೋಡಿದ್ದೇವೆ. ಉಸಿರಾಟಕ್ಕೆ ಆಮ್ಲಜನಕ ಎಷ್ಟು ಅವಶ್ಯವೆಂಬುದನ್ನು ನಾವೆಲ್ಲ ತಿಳಿದವರೇ ಆಗಿದ್ದೇವೆ.

ಓಜೋನ್ ಪದರ ತೆಳ್ಳಗಾದಂತೆ ಗಾಳಿಯ ಕೊರತೆ ಆಗುವುದಂತೆ. ಗಾಳಿಗಾಗಿ ಪರ್ಯಾಯ ಶಕ್ತಿ ಸಹ ಕಂಡುಹಿಡಿಯುತ್ತಿದ್ದಾರೆ. ಈ ಬಗ್ಗೆ ಸಂಶೋಧನೆಗಳು ನಡೆಯುತ್ತಿದೆ.ವಾಯುವಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಗಾಳಿ ದಿನವನ್ನು ಜೂನ್ ೧೫ ೨೦೦೭ ರಂದು ಮೊದಲ ಸಲ ಆಚರಿಸಲಾಯಿತು. ತಾಪಮಾನ ಏರಿಕೆಯ ಅನುಭವ ಈ ಸಲ ನಮಗೆಲ್ಲರಿಗೂ ಆಗಿದೆ. ಸೂರ್ಯನ ತಾಪದ ತಡೆಗೆ ಹಸಿರು ಗಿಡಮರಗಳ ಕೊರತೆಯಿಂದಾಗಿ ಹಗಲಿಡೀ ಬಿಸಿಗಾಳಿಯ ಪ್ರಭಾವ. ಇದರಿಂದ ಮೈಯಲ್ಲಿ ತುರಿಕೆ, ದದ್ದುಗಳಾದದ್ದೂ ಇದೆ. ಕುಡಿಯುವ ಜಲದ ಅಭಾವ ಎಲ್ಲೆಡೆ ತಲೆದೋರಿದೆ. ಸಮಯಕ್ಕೆ ಸರಿಯಾಗಿ ಮಳೆ ಸಹ ಇಲ್ಲ. ಸ್ವಾಭಾವಿಕವಾದ ಸಿರಿ ಜೀವದುಸಿರಾದ ಗಾಳಿಯನ್ನು ಹಾಳುಮಾಡದೆ, ಸಮತೋಲನ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮಾನವ ಜನಾಂಗ ಎಚ್ಚೆತ್ತುಕೊಳ್ಳಲೇಬೇಕು. ಜಗದ ಜೀವ ಪ್ರಾಣವಾಯುವನ್ನು ಮಲಿನಗೊಳಿಸದೆ, ಕಾಪಾಡಿಕೊಳ್ಳೋಣ.

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ