‘ಸಂಪದ’ ನಗೆಬುಗ್ಗೆ - ಭಾಗ ೧೨೫

‘ಸಂಪದ’ ನಗೆಬುಗ್ಗೆ - ಭಾಗ ೧೨೫

ರೋಮ್ಯಾಂಟಿಕ್

ನೀನು ರೊಮ್ಯಾಂಟಿಕ್ ಆಗಬೇಕು ಮಗಾ ಅಂತ ಡಾಕ್ಟರ್ ಗಾಂಪ ಯಾವಾಗಲೂ ಗೆಳೆಯ ಸೂರಿಗೆ ಹೇಳ್ತಾ ಇದ್ದ. ಆದರೆ ರೊಮ್ಯಾಂಟಿಕ್ ಆಗಿ ಬಿಹೇವ್ ಮಾಡುವುದು ಸೂರಿಯ ಜಾಯಮಾನಕ್ಕೆ ಬರುತ್ತಲೇ ಇರಲಿಲ್ಲ. ಅದಕ್ಕೆ "ನನ್ನ ಡಾಕ್ಟರ್ ಶಾಪ್‌ಗೆ ಬರೀ ಹುಡುಗೀರು ಬರ್ತಾರೆ, ಅಲ್ಲಿಗೆ ಬಾ ನೀನು, ಸರಿ ಹೋಗೀಯಾ" ಅಂದ ಡಾಕ್ಟರ್ ಗಾಂಪ. ಸರಿ ಅಂತ ಸೂರಿ ದಿನಾ ಗಾಂಪನ ಕ್ಲಿನಿಕ್‌ಗೆ ಹೋಗ ತೊಡಗಿದ. ದಿನವೂ ಸುಂದರಿಯರನ್ನು ನೋಡಿ ಕಣ್ಣುಂಬಿಕೊಳ್ಳುತ್ತಿದ್ದ. ಒಂದಷ್ಟು ದಿನಗಳು ಕಳೆದ ಮೇಲೆ ''ಬರೀ ನೋಡಿದ್ದು ಸಾಕು, ಇನ್ನು ಮುಂದೆ ಏನಾದರೂ ಮುಂದುವರಿಯಬೇಕು'' ಎಂದು ಹೇಳಿದ ಗಾಂಪ ಕ್ಲಿನಿಕ್‌ಗೆ ಪೇಷೆಂಟ್ ಬಂದಾಗ ಯಾವ ಕಾಯಿಲೆಗೆ ಯಾವ ಔಷಧಿ ಕೊಡಬೇಕು ಎಂದೆಲ್ಲಾ ಹೇಳಿಕೊಟ್ಟು ಒಂದು ದಿನ ಸೂರಿಯನ್ನೇ ಡಾಕ್ಟರ್ ಆಗಿಸಿ ತಾನು ಹೊರಟು ಹೋದ. ಸಂಜೆಯ ವೇಳೆಗೆ ಗಾಂಪ ವಾಪಸ್ ಬಂದ. ಅವನ ಮುಂದೆ ಒಂದು ಸುಂದರವಾದ ಹುಡುಗಿ ಕಣ್ಣುಜ್ಜಿಕೊಳ್ಳುತ್ತಾ ಹೊರಗೆ ಹೋದಳು. “ಓಹೋ ನಮ್ಮ ಖೇಮು ಏನೋ ಮಾಡಿದಾನೆ'' ಅಂತ ಗಾಂಪನಿಗೆ ಮನದಟ್ಟಾಯಿತು. ಸೀದಾ ಡಮ್ಮಿ ಡಾಕ್ಟರ್ ಸೂರಿಯ ರೂಮಿಗೆ ಹೋದ. ಬೆಳಗ್ಗೆಯಿಂದ ಏನೇನಾಯ್ತು ಅಂತ ವಿಚಾರಿಸಿದ. 'ಬೆಳಗ್ಗೆ ಒಂದು ಹುಡುಗಿ ತಲೆನೋವು ಅಂತ ಬಂದಿದ್ದು, ಅವಳಿಗೆ ಸಾರಿಡಾನ್ ಕೊಟ್ಟೆ" ಅಂದ ಸೂರಿ. ಸರಿ ಅಂದ ಗಾಂಪ. "ಇನ್ನೊಬ್ಬಳು ಜ್ವರ ಅಂತ ಬಂದಿದ್ದು ಅವಳಿಗೆ ಪ್ಯಾರಾಸಿಟಮಾಲ್‌ ಮಾತ್ರೆ ಕೊಟ್ಟೆ" ಅಂದ ಸೂರಿ, ಸರಿ ಅಂದ ಗಾಂಪ. ''ಇನ್ನೊಬ್ಬಳು ಮೈ ಕೈ ನೋವು ಅಂತ ಬಂದಿದ್ದು ಅವಳಿಗೆ ಬ್ರೂಫಿನ್ ಕೊಟ್ಟೆ'' ಅಂದ ಸೂರಿ. "ಅದ್ಸರಿ ಈಗ ಒಂದು ಹುಡುಗಿ ಹೋದಳಲ್ಲ, ಅವಳಿಗೆ ಏನು ಸಮಸ್ಯೆ ಇತ್ತು?" ಅಂದ ಗಾಂಪ. ಅದಕ್ಕೆ ಸೂರಿ ಹೇಳಿದ- "ಅವಳಾ? ಆ ಹುಡುಗಿ ಒಳಗೆ ಬಂದವಳೇ ನನ್ನನ್ನು ನೋಡಿ, 'ಡಾಕ್ಟರ್ ಕನ್ನಡಿಯಲ್ಲಿ ನನ್ನನ್ನು ನಾನು ನೋಡಿಕೊಂಡಾಗಲೆಲ್ಲಾ ನನ್ನಂಥ ಬ್ಯೂಟಿಪುಲ್ ಹುಡುಗಿ ಈ ಪ್ರಪಂಚದಲ್ಲೇ ಇಲ್ಲ ಅನ್ಸುತ್ತೆ. ನಿಮಗೂ ಹಾಗೇ ಅನ್ಸುತ್ತಾ?' ಅಂತ ರೊಮ್ಯಾಂಟಿಕ್ ಆಗಿ ನನ್ನ ಹತ್ತಿರ ಬಂದು ಹೇಳಿದಳು''. ಗಾಂಪ ಕುತೂಹಲದಿಂದ "ಅವಳಿಗೆ ಏನು ಮಾಡಿದೆ''? ಅಂತ ಕೇಳಿದ. ಅದಕ್ಕೆ ಸೂರಿ ಕೂಲಾಗಿ ಹೇಳಿದ “ಅವಳ ಕಣ್ಣಿಗೆ ಐ ಡ್ರಾಪ್ಸ್ ಹಾಕಿದೆ''.

***

ಸೌಂದರ್ಯ

ಶ್ರೀಮತಿ: ಸರ್, ನಾನಿನ್ನು ಕೌಂಟರ್ ನಲ್ಲಿ ಕೆಲಸ ಮಾಡುವುದಿಲ್ಲ.

ಮಾಲೀಕ: ಯಾಕಮ್ಮಾ, ಏನಾಯ್ತು?

ಶ್ರೀಮತಿ: ಏಕೋ ಏನೋ ನನ್ನ ಸೌಂದರ್ಯ ಕಡಿಮೆ ಆಗಿದೆ ಅನ್ನಿಸುತ್ತಿದೆ. ಸರ್, ಈಗ ಪುರುಷರು ನಾನು ಕೊಟ್ಟ ಹಣವನ್ನು ಎಣಿಸಿಕೊಳ್ಳುವುದಕ್ಕೆ ಶುರು ಮಾಡಿದ್ದಾರೆ.

***

ಸೂಟ್ ಕೇಸ್

ಸೂರಿ: ಗಾಂಪ, ನಿನ್ನ ಹೆಂಡತಿ ಸೂಟ್ ಕೇಸ್ ತೆಗೆದುಕೊಂಡು ತವರಿಗೆ ಹೋಗಿರೋದು ಬಹಳ ಬೇಸರದಿಂದ ಹೇಳ್ತಾ ಇದ್ದೀಯಲ್ಲಾ ಏಕೆ?

ಗಾಂಪ: ಏನು ಹೇಳಲಿ, ಆ ಸೂಟ್ ಕೇಸಿನಲ್ಲಿ ನನ್ನ ಗರ್ಲ್ ಫ್ರೆಂಡ್ ಫೋಟೋ ಹಾಗೂ ಲವ್ ಲೆಟರ್ ಎಲ್ಲಾ ಇದೆ ಕಣಯ್ಯಾ!

***

ಮೂಳೆ ಮೂರಿತ

ಸೂರಿ: ನಿನ್ನ ಎಡ ತೊಡೆಯ ಮೇಲೆ ನೀನು ನಿನ್ನ ಸೆಕ್ರೆಟರಿಯನ್ನು ಕೂರಿಸಿದ್ದರಿಂದ ಮೂಳೆ ಮುರಿಯಿತು ಎಂದರೆ ನಂಬಲಾಗುತ್ತಿಲ್ಲ.

ಗಾಂಪ: ಆಕೆ ಕೂತದ್ದನ್ನು ನನ್ನ ಹೆಂಡತಿ ನೋಡಿದಳು. ಹಾಗೆ…

***

ಪುಸ್ತಕ

ಸೂರಿ: ಗಾಂಪ, ನೀನು ಬರೆದ ‘ಹೌ ಟು ಚೇಂಜ್ ಯುವರ್ ಲೈಫ್’ ಪುಸ್ತಕ ಲಕ್ಷಾಂತರ ಪ್ರತಿಗಳು ಮಾರಾಟವಾದವು ಅಂತ ಹೇಳಿದೆಯಲ್ಲ. ಹೇಗೆ ಸಾಧ್ಯವಾಯಿತು?

ಗಾಂಪ: ಪುಸ್ತಕದ ಶೀರ್ಷಿಕೆಯಲ್ಲಿ ‘ಹೌ ಟು ಚೇಂಜ್ ಯುವರ್ ವೈಫ್’ ಎಂದು ತಪ್ಪಾಗಿ ಮುದ್ರಿತವಾಗಿತ್ತು ಅದಕ್ಕೆ.

***

ಉಳಿತಾಯ

ಬ್ಯಾಂಕ್ ಅಧಿಕಾರಿ: ರೀ ಸೂರಿಯವರೇ, ನಿಮ್ಮ ಹೆಂಡತಿ ತವರಿಗೆ ಹೋದ್ರಾ?

ಸೂರಿ: ಹೌದು ಸರ್, ನಿಮಗೆ ಹೇಗೆ ಗೊತ್ತಾಯ್ತು?

ಬ್ಯಾಂಕ್ ಅಧಿಕಾರಿ: ಈಗೀಗ ನಿಮ್ಮ ಖಾತೆಯಲ್ಲಿ ಹೆಚ್ಚು ಹೆಚ್ಚು ಹಣ ಉಳಿತಾ ಇದೆಯಲ್ಲಾ !

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ