‘ಸಂಪದ’ ನಗೆ ಬುಗ್ಗೆ - ಭಾಗ ೩೯

‘ಸಂಪದ’ ನಗೆ ಬುಗ್ಗೆ - ಭಾಗ ೩೯

ಚಪ್ಪಲಿ

ಗಾಂಪ: ನಿನ್ನೆ ನಾನು ವೇದಿಕೆ ಮೇಲೆ ಹಾಡುತ್ತಿರುವಾಗ ಯಾರೋ ಚಪ್ಪಲಿ ಎಸೆದರು.

ಸೂರಿ: ಅದ್ಕೆ ನೀನು ಹಾಡುವುದನ್ನು ನಿಲ್ಲಿಸಿದೆಯಾ?

ಗಾಂಪ: ಒಂದ್ ಚಪ್ಲಿ ಇಟ್ಟುಕೊಂಡು ನಾನೇನ್ಮಾಡಲಿ? ಅದ್ಕೆ ಮತ್ತೊಂದು ಚಪ್ಲಿ ಎಸೆಯುವವರೆಗೆ ಹಾಡುತ್ತಲೇ ಇದ್ದೆ.

***

ಬುದ್ದಿವಂತ

ಸರ್ದಾರ್ಜಿಯೊಬ್ಬ ಓಡೋಡುತ್ತಾ ಪೋಲೀಸ್ ಸ್ಟೇಷನ್ನಿಗೆ ಬಂದು ಇನ್ಸ್ ಪೆಕ್ಟರಿಗೆ ಹೇಳಿದ..."ಬೇಗ ಬನ್ನಿ ! ನಮ್ಮ ಮನೆಯಲ್ಲಿ ಒಬ್ಬ ಕಳ್ಳನನ್ನು ಹಿಡಿದು, ಕಟ್ಟಿ ಹಾಕಿದ್ದೇನೆ.”

ಇನ್ಸ್ ಪೆಕ್ಟರ್ - “ಅವನ ಕಾಲುಗಳನ್ನು ಕಟ್ಟಿ ಹಾಕಿದ್ದೀಯಾ?”

ಸರ್ದಾರ್ಜಿ- “ಹೌದು ! ಎರಡು ಕಾಲುಗಳನ್ನು ಕಟ್ಟಿ ಹಾಕಿ ಬಂದಿದ್ದೇನೆ.”

ಇನ್ಸ್ ಪೆಕ್ಟರ್- “ಅವನ ಕೈಗಳನ್ನು ಕಟ್ಟಿ ಹಾಕಿದ್ದೀಯಾ?”

ಸರ್ದಾರ್ಜಿ- “ ಇಲ್ಲ, ಅವನ ಕೈಗಳನ್ನು ಮಾತ್ರ ಕಟ್ಟಿಲ್ಲ.”

ಇನ್ಸ್ ಪೆಕ್ಟರ್ - “ಅದಕ್ಕೇ ಹೇಳೋದು ಸರ್ದಾರ್ಜಿಗಳು ಬುದ್ದಿವಂತರಲ್ಲಾಂತ - ಅವನ ಕೈಗಳನ್ನು ಕಟ್ಟಿ ಹಾಕದಿದ್ದರೆ, ಕಾಲಿನ ಕಟ್ಟುಗಳನ್ನು ಕೈಗಳಿಂದ ಬಿಡಿಸಿಕೊಳ್ಳುವುದಿಲ್ಲವೇ? ಈಗಾಗಲೇ ಅವನು ಹಾಗೆ ಬಿಡಿಸಿಕೊಂಡು ಹೋಗಿರಬೇಕು"

ಸರ್ದಾರ್ಜಿ- “ ಅಯ್ಯೋ, ಅಷ್ಟೆಲ್ಲಾ ಅವನಿಗೆ ಎಲ್ಲಿ ಹೊಳೆಯುತ್ತದೆ? ಅವನೂ ನನ್ನ ಹಾಗೆ ಸರ್ದಾರ್ಜೀನೇ !”

***

ಮೊಟ್ಟೆ

ಗ್ರಾಹಕ: ಮೊಟ್ಟೆ ಇದೆಯೇನ್ರೀ?

ಗಾಂಪ: ನಮ್ಮ ಅಂಗಡಿಯಲ್ಲಿ ಮೊಟ್ಟೆ ಇಟ್ಟಿಲ್ಲ

ಗ್ರಾಹಕ: ಯಾಕ್ರೀ ನೀವು ಮೊಟ್ಟೆ ಇಟ್ಟಿಲ್ಲ?

ಗಾಂಪ: ನಾನು ಕೋಳಿ ಅಲ್ವಲ್ಲ.

***

ಕಾಮನಬಿಲ್ಲು

ಟೀಚರ್: ಮಳೆ ನಿಂತ ಮೇಲೆ ಕಾಮನಬಿಲ್ಲು ಕಾಣಿಸುವುದೇಕೆ?

ಗಾಂಪ: ಏಕೆಂದರೆ, ಮಳೆ ಬರುವಾಗ ಅದನ್ನು ನೋಡಲು ನಾವು ಮನೆಯಿಂದ ಹೊರಗೆ ಬರಲು ಆಗುವುದಿಲ್ಲ.

***

ಚಿನ್ನದ ಸರ

ಶ್ರೀಮತಿ: ಏನೇ? ನಿನ್ನ ದುಬಾರಿ ಚಿನ್ನದ ಸರ ಕಳೆದು ಹೋಯ್ತಂತೆ?

ತಾರಾ: ಸದ್ಯ ! ಅದು ನಮ್ಮ ಪಕ್ಕದ್ಮನೆಯವಳಿಗೆ ಸಿಕ್ಕಿದೆಯಂತೆ.

ಶ್ರೀಮತಿ: ಮತ್ತೆ ಇನ್ನೂ ಏನನ್ನು ಹುಡುಕಾಡುತ್ತಿದ್ದೀಯಾ?

ತಾರಾ: ಪಕ್ಕದ್ಮನೆಯವಳನ್ನು. !

***

ಮನೆಗೆಲಸ

ಗಾಂಪ: “ಅಲ್ಲ ಕಣೇ, ನಮ್ಮ ಮದುವೆ ಆದ್ಮೇಲೆ ನಾವು ಈ ರೀತಿ ಪಾರ್ಕಿಗೆ ಬರೋದು ಸಾಧ್ಯವೇ? “

ಶ್ರೀಮತಿ: “ಯಾಕೆ ಸಾಧ್ಯವಿಲ್ಲ? ನೀವು ಮನೆ ಕೆಲಸವನ್ನೆಲ್ಲಾ ಬೇಗ ಬೇಗ ಮುಗಿಸಿಬಿಟ್ರೆ, ನಾವು ದಿನಾ ಬರಬಹುದು..."

***

ತಿಂಡಿ

ಗಾಂಪ ಹೋಟೇಲ್ ನ ಸಪ್ಲೈಯರ್ ನನ್ನು ತಿಂಡಿ ಏನಿದೆ? ಎಂದು ಕೇಳಿದ.

ಆಗ ಸಪ್ಲೈಯರ್ ಒಂದೇ ಉಸಿರಿಗೆ ೮-೧೦ ತಿಂಡಿಗಳ ಹೆಸರು ಹೇಳಿದ.

ನೀನು ಹೇಳಿದ್ದರಲ್ಲಿ ೭ನೇ ತಿಂಡಿ ತಗೊಂಡು ಬಾ. ಎಂದ ಗಾಂಪ. ಸಪ್ಲೈಯರ್ ಕಕ್ಕಾಬಿಕ್ಕಿ!

***

ಜಾಸ್ತಿ ತೂಕ !

ಅಂಚೆ ಗುಮಾಸ್ತ: ನಿಮ್ಮ ಪತ್ರದ ತೂಕ ಜಾಸ್ತಿ ಇದೆ. ಇನ್ನೂ ಐದು ರೂಪಾಯಿ ಸ್ಟಾಂಪ್ ಹಚ್ಚಬೇಕು. 

ಗಾಂಪ: ಇನ್ನೂ ಸ್ಟಾಂಪ್ ಹಚ್ಚಿದರೆ ಪತ್ರದ ತೂಕ ಇನ್ನಷ್ಟು ಜಾಸ್ತಿಯಾಗುವುದಿಲ್ಲವೇ?

***

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ