‘ಸಂಪದ’ ನಗೆ ಬುಗ್ಗೆ - ಭಾಗ ೬೮

‘ಸಂಪದ’ ನಗೆ ಬುಗ್ಗೆ - ಭಾಗ ೬೮

ಗ್ಯಾರಂಟಿ

ಶ್ರೀಮತಿ ಪ್ಯಾರಾಚೂಟ್ ಕಂಪನಿಯೊಂದರ ಸೇಲ್ಸ್ ಗರ್ಲ್. ಒಮ್ಮೆ ಗಿರಾಕಿಯೊಬ್ಬರೊಡನೆ ನಡೆದ ಮಾತುಕತೆ.
ಶ್ರೀಮತಿ “ನೋಡಿ ನಮ್ಮ ಕಂಪನಿಯ ಪ್ಯಾರಾಚೂಟ್ ಚೆನ್ನಾಗಿ ಬರುತ್ತೆ.”
ಗಿರಾಕಿ “ಹೌದಾ, ಮೇಡಂ ನಾವು ವಿಮಾನದಿಂದ ಧುಮುಕುವಾಗ ನಿಮ್ಮ ಪ್ಯಾರಾಚೂಟಿನ ಗುಂಡಿ ಅದುಮಿದರೂ ಬಿಚ್ಚಿಕೊಳ್ಳದಿದ್ದರೆ ಏನು ಮಾಡುವುದು?”
ಶ್ರೀಮತಿ “ತತ್‌ಕ್ಷಣ ಬನ್ನಿ, ಬದಲಾಯಿಸಿ ಕೊಡ್ತೀವಿ.”

***

ವಿವೇಚನೆ

ರಾಜಕಾರಣ ಪ್ರವೇಶ ಮಾಡುತ್ತಿದ್ದ ಗಾಂಪನಿಗೆ ಅಪ್ಪ ಹೇಳಿದ “ಮಗನೇ, ರಾಜಕಾರಣದಲ್ಲಿ ಪ್ರಾಮಾಣಿಕತೆ ಜತೆಗೆ ವಿವೇಚನೆ ಮುಖ್ಯ”
ಗಾಂಪ “ಪ್ರಾಮಾಣಿಕತೆ ಎಂದರೆ?”
ಅಪ್ಪ “ಅಂದರೆ ನೀನು ಮಾತುಕೊಟ್ಟರೆ ಅದನ್ನು ಪಾಲಿಸಬೇಕು”
ಗಾಂಪ “ಹಾಗಾದರೆ ವಿವೇಚನೆ ಎಂದರೇನು?”
ಅಪ್ಪ “ಮಾತು ಕೊಡದೇ ಇರೋದೆ”

***

ಮಾತು

ಗಾಂಪನ ಹೆಂಡತಿಯನ್ನು ಡಾಕ್ಟರ್ ಪರೀಕ್ಷೆ ಮಾಡಿ ತಲೆಯಲ್ಲಾಡಿಸಿದರು.
“ಏನೂ ಆಗಿಲ್ಲವಯ್ಯಾ, ಚೆನ್ನಾಗಿಯೇ ಇದ್ದಾರೆ”
“ಇಲ್ಲ ಡಾಕ್ಟರೇ, ನೀವು ಸರಿಯಾಗಿ ನೋಡಲಿಲ್ಲ. ಮಾತನಾಡುವಾಗ ಮಧ್ಯೆ ಮಧ್ಯೆ ನಿಲ್ಲಿಸಿಬಿಡುತ್ತಾಳೆ”
“ಏತಕ್ಕೆ?”
“ಉಸಿರಾಡಲಿಕ್ಕೆ”

***

ಜಗಳ

ಗಂಡ ಹೆಂಡತಿ ಜಗಳವಾಡುತ್ತಿದ್ದುದನ್ನು ಅವರ ಸ್ನೇಹಿತ ಅಕಸ್ಮಾತ್ ನೋಡಿಬಿಟ್ಟ. ಮಾರನೆ ದಿನ ಆ ಮಿತ್ರ ಜಗಳವಾಡುತ್ತಿದ್ದ ಸ್ನೇಹಿತನನ್ನು ಕೇಳಿದ, “ನಿನ್ನೆ ಹೆಂಡತಿಯೊಡನೆ ಜಗಳವಾಡುತ್ತಿದ್ದೆಯಲ್ಲ, ಕೊನೆಗೆ ಏನಾಯಿತು?”
“ಅವಳು ನನ್ನೆದುರು ಮೊಣಕಾಲೂರಿದಳು”
“ಅದು ಹೇಗೆ ಸಾಧ್ಯವಾಯಿತೋ ಮಹರಾಯ?”
“ನಾನು ಮಂಚದ ಕೆಳಗೆ ನುಸುಳಿದ್ದೆ”

***

ಎರಡನೇ ಪ್ರಶ್ನೆ

ಕೋರ್ಟಿನಲ್ಲಿ ಪಾಟೀಸವಾಲು ನಡೆದಿತ್ತು. “ನೀವು ಯಾರು?” ಕಟಕಟೆಯಲ್ಲಿ ನಿಂತ ಸಾಕ್ಷಿಯನ್ನು ಪ್ರಶ್ನೆಸಿದ ವಕೀಲ. ಸ್ವರ್ಣಾಭರಣಗಳ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿ ಒಂದು ಕ್ಷಣವೂ ತಡಮಾಡದೆ ಉತ್ತರಿಸಿದ “ನಿಮಗೆ ಗೊತ್ತೇ ಇರುವ ಹಾಗೆ ನಾನೊಬ್ಬ ಸದ್‌ಗೃಹಸ್ಥ”. “ಸರಿಯಾಗಿಯೇ ಹೇಳಿದಿರಿ. ಅದಕ್ಕಿಂತ ಮೊದಲು ಏನಾಗಿದ್ದಿರಿ?” ವಕೀಲರಿಂದ ಕೂಡಲೇ ಬಂತು ಎರಡನೇ ಪ್ರಶ್ನೆ.

***

ಸೋಪು

ಶ್ರೀಮತಿ:  “ರೀ ಒಂದು ಸೋಪು ಕೊಡಿ.”
ಗಾಂಪ:  “ಮೇಡಂ ಈ ಸೋಪು ತಗೊಳ್ಳಿ. ಬಟ್ಟೆ ಬೆಳ್ಳಗಾಗುತ್ತೆ.”
ಶ್ರೀಮತಿ:  “ಹಾಗಾದ್ರೆ ಅದು ಬೇಡಾ. ನಮ್ಮವರ ಕಪ್ಪುಕೋಟು ಬೆಳ್ಳಗಾದ್ರೆ ಕೋರ್ಟಿಗೆ ಹೋಗುವುದು ಹೇಗೆ?”

***

ಗ್ಯಾರಂಟಿ

ಶ್ರೀಮತಿ ಪ್ಯಾರಾಚೂಟ್ ಕಂಪನಿಯೊಂದರ ಸೇಲ್ಸ್ ಗರ್ಲ್. ಒಮ್ಮೆ ಗಿರಾಕಿಯೊಬ್ಬರೊಡನೆ ನಡೆದ ಮಾತುಕತೆ.
ಶ್ರೀಮತಿ “ನೋಡಿ ನಮ್ಮ ಕಂಪನಿಯ ಪ್ಯಾರಾಚೂಟ್ ಚೆನ್ನ್ನಾಗಿ ಬರುತ್ತೆ.”
ಗಿರಾಕಿ “ಹೌದಾ, ಮೇಡಂ ನಾವು ವಿಮಾನದಿಂದ ಧುಮುಕುವಾಗ ನಿಮ್ಮ ಪ್ಯಾರಚೂಟಿನ ಗುಂಡಿ ಅದುಮಿದರೂ ಬಿಚ್ಚಿಕೊಳ್ಳದಿದ್ದರೆ ಏನು ಮಾಡುವುದು?”
ಶ್ರೀಮತಿ “ತತ್‌ಕ್ಷಣ ಬನ್ನಿ, ಬದಲಾಯಿಸಿ ಕೊಡ್ತೀವಿ.”

***

ಮಾಲೀಕ !

ಒಂದು ಸಲ ದಿಲ್ಲಿಗೆ ಬಂದ ಗಾಂಪ. ಕರ್ನಾಟಕ ಸಂಘದಲ್ಲಿ ಗಾಂಪನ ಭಾಷಣ ಇತ್ತು. ಮುಗಿದ ಬಳಿಕ ಗಾಂಪನಿಗೆ ದಿಲ್ಲಿ ಮತ್ತಿತರ ಪ್ರವಾಸೀ ತಾಣಗಳನ್ನು ಸುತ್ತುವ ಆಸೆಯಾಯಿತು. ಕೆಂಪುಕೋಟೆ ನೋಡಿದ. ತಾಜಮಹಲಿಗೂ ಬಂದ. ಗೈಡ್‌ಗಳಿಗೆ ತಾಜಮಹಲ್ ಬಳಿ ಕೊರತೆಯಿಲ್ಲ. ಆತ ತಾಜಮಹಲ್ ನ ಮಹೋನ್ನತ ಕಾಮಗಾರಿ ಹಾಗೂ ಶಿಲ್ಪಕಲೆಗಳ ಬಗ್ಗೆ ದೀರ್ಘವಾದ ಉಪನ್ಯಾಸವನ್ನೇ ಮಾಡಿದ. ಗಾಂಪನಿಗೆ ಆತ ಹೇಳಿದ್ದು ಏನೂ ಅರ್ಥವಾಗಲಿಲ್ಲ.

ಕೊನೆಗೆ ಗೈಡ್ ಹೇಳಿದ “ಒಂದು ಮಾತನ್ನು ಮಾತ್ರ ಗಮನಿಸಬೇಕು ಸ್ವಾಮಿ”
“ಯಾವುದಯ್ಯಾ ಅದು?” ಗಾಂಪ ಕೇಳಿದ.
“ಸಹಸ್ರಾರು ವರ್ಷಗಳಾದವು ಈ ತಾಜಮಹಲನ್ನು ಕಟ್ಟಿ, ಅಲ್ಲವೇ? ಒಂದು ಚಿಕ್ಕ ರಿಪೇರಿ ಇಲ್ಲ. ಸುಣ್ಣಬಣ್ಣವಿಲ್ಲ.” ಎಂದ ಗೈಡ್.
“ತಿಳಿಯಿತು ಬಿಡು” ಎಂದ ತಿಂಮ “ನಾನಿರುವ ಮನೆಯ ಮಾಲೀಕನೇ ಇದರ ಮಾಲಿಕನಿರಬೇಕು.”

***

ಶತ ಮೂರ್ಖನೇ?

ಚುನಾವಣೆಯಲ್ಲಿ ಸತತ ಸೋಲುಂಡ ರಾಜಕೀಯ ಪಕ್ಷವೊಂದರ ವರಿಷ್ಟರಿಗೆ ಜನ ಸಾಮಾನ್ಯನಾದ ಗಾಂಪ ಫೋನಾಯಿಸಿ, “ನಾನು ತಮ್ಮ ಪಕ್ಷದ ಮುಂದಿನ ಅಧ್ಯಕ್ಷನಾಗಲು ಬಯಸುತ್ತಿದ್ದೇನೆ" ಎಂದು ಹೇಳಿದ. ಅದಕ್ಕುತ್ತರಿಸಿದ ವರಿಷ್ಟರು “ನೀನೇನು ಶತ ಮೂರ್ಖನೇ?” ಎಂದು ಪ್ರಶ್ನಿಸಿದರು. ಅದಕ್ಕೆ ಗಾಂಪ “ಅಧ್ಯಕ್ಷಗಿರಿಗೆ ಈ ಅರ್ಹತೆ ಅವಶ್ಯಕವೇ?” ಎಂದ.

***

ಲಾಟರಿ

ಟೀಚರ್ (ಸಿಟ್ಟಿನಲ್ಲಿ) ನಾನು ನಿನ್ನ ಅಮ್ಮನಾದರೆ ಎರಡೇ ದಿನಗಳಲ್ಲಿ ನಿನ್ನನ್ನು ಸುಧಾರಿಸಿ ಸರಿ ದಾರಿಗೆ ತರುತ್ತೇನೆ.

ಗಾಂಪ: ಇರಿ ಮೇಡಂ, ನಾನೀಗಲೇ ಹೋಗಿ ನನ್ನ ಅಪ್ಪನಿಗೆ ಹೇಳುತ್ತೇನೆ.

ಟೀಚರ್: ಏನಂತ?

ಗಾಂಪ: ಅಪ್ಪಾ, ನಿಮಗೆ ಸದ್ಯದಲ್ಲೇ ಲಾಟರಿ ಹೊಡೆಯಲಿದೆ ಅಂತ !

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ