‘ಸಂಪದ’ ನಗೆ ಬುಗ್ಗೆ - ಭಾಗ ೯೫

‘ಸಂಪದ’ ನಗೆ ಬುಗ್ಗೆ - ಭಾಗ ೯೫

ಇಂಟರ್ ನ್ಯಾಶನಲ್ ಬ್ಯ್ರಾಂಡ್!

ಡಾಕ್ಟರ್: ಗಾಂಪ, ನೀನು ಯಾವ ಸಾಬೂನು ಉಪಯೋಗಿಸುತ್ತೀ?

ಗಾಂಪ: ನಂಬೂದ್ರಿ ಸೋಪ್

ಡಾಕ್ಟರ್: ಪೇಸ್ಟ್?

ಗಾಂಪ: ನಂಬೂದ್ರಿ ಪೇಸ್ಟ್

ಡಾಕ್ಟರ್: ತಲೆಗೆ ಎಣ್ಣೆ?

ಗಾಂಪ: ನಂಬೂದ್ರಿ ಎಣ್ಣೆ

ಡಾಕ್ಟರ್: ನಂಬೂದ್ರಿ ಅನ್ನೋ ಬ್ರ್ಯಾಂಡ್ ಅಷ್ಟೊಂದು ಫೇಮಸ್ಸಾ? ಇಂಟರ್ ನ್ಯಾಶನಲ್ಲಾ?

ಗಾಂಪ: ಇಲ್ಲಾ ಡಾಕ್ಟರ್, ನಂಬೂದ್ರಿ ನನ್ನ ರೂಂ ಮೇಟ್!

***

ಮದುವೆ ಕಾರ್ಡ್ !

ಗಾಂಪ: ಒಂದು ವಿಷದ ಬಾಟಲ್ ಕೊಡಿ

ವ್ಯಾಪಾರಿ: ಹಾಗೆಲ್ಲಾ ಕೊಡೋಕೆ ಆಗಲ್ಲ, ಯಾವುದಾದ್ರೂ ಚೀಟಿ ಇದೆಯಾ?

ಗಾಂಪ: ಹೋ, ಇದೆ (ಆರು ತಿಂಗಳ ಹಿಂದೆ ನಡೆದ ಆತನ ಮದುವೆಯ ಕಾರ್ಡ್ ತೆಗೆದು ಕೊಟ್ಟ)

ವ್ಯಾಪಾರಿ: ವೆರಿ ಗುಡ್. 

ಎನ್ನುತ್ತಾ ವಿಷದ ಬಾಟಲಿ ತೆಗೆದುಕೊಟ್ಟ.

*** 

ಹಳ್ಳಿ ಜನ - ಪೇಟೆ ಜನ

ಗಾಂಪ: ಸೂರಿ, ಮಾರ್ಕೆಟ್ ನಲ್ಲಿ ಹಳ್ಳಿ ಜನ ಮತ್ತು ಪೇಟೆ ಜನ ಎಂದು ಹೇಗೆ ಗುರುತು ಹಿಡಿಯುತ್ತೀ?

ಸೂರಿ: ಅದು ಬಹಳ ಸುಲಭ. ಯಾರು ಮೊದಲು ತೆಂಗಿನ ಕಾಯಿ ಹಾಕಿಸಿಕೊಂಡು ಅದರ ಮೇಲೆ ಟೊಮೆಟೋ ಹಾಕಿಸಿಕೊಳ್ಳುತ್ತಾರೋ ಅವರು ಹಳ್ಳಿ ಮಂದಿ. ಅದೇ ಮೊದಲು ಟೊಮೆಟೋ ಹಾಕಿಸಿಕೊಂಡು ಅದರ ಮ್ಯಾಲೆ ತೆಂಗಿನ ಕಾಯಿ ಹಾಕಿಸಿಕೊಳ್ಳುತ್ತಾರೋ ಅವರು ಪೇಟೆ ಜನ.!

***

ನೆನಪು ಶಕ್ತಿ

ಶ್ರೀಮತಿ: ಬಾದಾಮಿ ತಿಂದರೆ ನೆನಪು ಶಕ್ತಿ ಜಾಸ್ತಿ ಆಗುತ್ತೆ ಅಂತ ಡಾಕ್ಟರ್ ಹೇಳಿದ್ರು, ಅದಕ್ಕೆ ನಿನ್ನೆ ರಾತ್ರಿ ಒಂದಿಷ್ಟು ಬಾದಾಮಿ ನೆನೆಸಿ ಇಟ್ಟಿದ್ದೆ.

ಗಾಂಪ: ಓಹ್ ಹೌದಾ? ಹಾಗಾದ್ರೆ ನನಗೂ ಸ್ವಲ್ಪ ಕೊಡು

ಶ್ರೀಮತಿ: ಅಯ್ಯೋ ರಾಮ, ನಿನ್ನೆ ರಾತ್ರಿ ನೆನೆ ಹಾಕಿಟ್ಟಿದ್ದ ಪಾತ್ರೆ ಎಲ್ಲಿ ಇಟ್ಟೆ ಎಂದೇ ನೆನಪಾಗ್ತಾ ಇಲ್ಲ !

***

ಖುಷಿಯಾದ್ರೆ…

ಗಾಂಪ: ಏನ್ ಸರ್, ನಿನ್ನ ಏರೋಪ್ಲೇನ್ ಹತ್ತಿಸ್ತೀನಿ ಅಂತ ಕರಕೊಂಡು ಬಂದು ಕೂತ್ಕೊಳಿಸಿ ಏಷ್ಟು ಹೊತ್ತು ಆಯ್ತು. ಬೇಗ ನನ್ನ ಏರೋಪ್ಲೇನ್ ಏರಿಸಿ ಸರ್, ನನ್ನ ಜೊತೆ ನನ್ನ ಹೆಂಡ್ತಿಗೂ ಏರೋಪ್ಲೇನ್ ಹತ್ತೋ ಆಸೆ ಸರ್. ದಯವಿಟ್ಟು ಅವಳನ್ನೂ ನನ್ನ ಜೊತೆನೇ ಹತ್ತಿಸಿ ಸರ್, ಪುಣ್ಯ ಬರುತ್ತೆ !

ಇನ್ಸ್ ಪೆಕ್ಟರ್: ಮೊದಲಿಗೆ ನಿನ್ನನ್ನು ಏರೋಪ್ಲೇನ್ ಹತ್ತಿಸ್ತೇನೆ. ನಿನ್ನನ್ನು ನೋಡಿ ಖುಷಿಯಾದ್ರೆ ನಿನ್ನ ಹೆಂಡ್ತೀಗೂ ಏರೋಪ್ಲೇನ್ ಹತ್ತಿಸ್ತೀನಿ !

***

ಹುಡುಗಿ ಕಡೆಯವರು...!

ಗಾಂಪ: ಅಪ್ಪಾ, ಇವತ್ತು ನಮ್ಮ ಮನೆಗೆ ಹುಡುಗಿ ಕಡೆಯವರು ಬರ್ತಾರಂತೆ.

ಅಪ್ಪ : ಎಲಾ ಇವ್ನಾ...ನನಗೇ ಗೊತ್ತಿಲ್ಲದ ಹಾಗೆ ಅದ್ಯಾರೋ ನಿನ್ನ ನೋಡೋಕೆ ಬರೋರು?

ಗಾಂಪ: ನಿನ್ನೆ ಸಂಜೆ ಬೀದಿಯಲ್ಲಿ ಹೋಗ್ತಿದ್ದ ಹುಡುಗಿಯನ್ನು ಚುಡಾಯಿಸಿದ್ದೆ. ಆಕೆಯ ಅಣ್ಣ ನಾಳೆ ನಿಮ್ ಮನೆಗೆ ಬಂದು ವಿಚಾರಿಸುತ್ತೇನೆ ಅಂತ ಹೇಳಿದ್ದ. ಅವ್ರು ಇವತ್ತು ಬರ್ತಿದ್ದಾರೆ ಅಷ್ಟೇ...!

***

ವಿಚಾರಣೆ

ಶ್ರೀಮತಿ: ಪಕ್ಕದ ಮನೆ ತಾರಾಳನ್ನು ನೋಡಿ ಕಲೀರಿ. ಅವಳು ಗಂಡನ ಜೊತೆ ಫಾರಿನ್ ಟೂರ್ ಹೋಗ್ತಾನೇ ಇರ್ತಾಳೆ, ನೀವೂ ಇದ್ದೀರಾ?

ಗಾಂಪ: ಅಯ್ಯೋ... ಎಷ್ಟೋ ಸಲ ನಾನೂ ಕರೆದೆ, ಅವಳು ಒಪ್ಪಲಿಲ್ಲ.!

***

ಕಳ್ಳತನ

ಕಳ್ಳ ಗಾಂಪ: ಇನ್ನು ಮುಂದೆ ಕಳ್ಳತನಕ್ಕೆ ಹೆಂಡತಿಯನ್ನು ಕರೆದುಕೊಂಡು ಹೋಗಲ್ಲ

ಕಳ್ಳ ಸೂರಿ: ಯಾಕೋ...ಏನಾಯಿತು?

ಕಳ್ಳ ಗಾಂಪ: ನಿನ್ನೆ ರಾತ್ರಿ ಒಂದು ಮನೆಗೆ ಕಳ್ಳತನ ಮಾಡಲು ಹೆಂಡತಿಯನ್ನು ಕರೆದುಕೊಂಡು ಹೋಗಿದ್ದೆ. ಆ ಮನೆಯಲ್ಲಿದ್ದ ಟಿ ವಿ ಎತ್ಕೊಂಡು ಬಾರಮ್ಮಾ ಅಂದ್ರೆ ಧಾರವಾಹಿ ನೋಡ್ಕೊಂಡು ಕೂತಿದ್ಲು. ಅದ್ಕೆ.!

***

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ