‘ಸಂಪದ' ನಗೆ ಬುಗ್ಗೆ - ಭಾಗ ೪೬
ಅಂಗನವಾಡಿ?
ಗಾಂಪ: ನಂಗೆ ಹದಿನೆಂಟು ಜನ ಮಕ್ಕಳು.
ಸೂರಿ: ಫ್ಯಾಮಿಲಿ ಪ್ಲಾನಿಂಗ್ ನೋಡುವವರು ನಿಮ್ಮ ಮನೆಗೆ ಬಂದು ಇಲ್ಲೀ ತನಕ ವಿಚಾರಿಸಲೇ ಇಲ್ಲವಾ?
ಗಾಂಪ: ಒಮ್ಮೆ ಬಂದಿದ್ರು.“ಅಂಗನವಾಡಿ' ಅಂಡ್ಕೊಂಡು ಹಾಗೇ ವಾಪಸು ಹೊರಟು ಹೋದ್ರು!
***
ಸಾಮ್ಯತೆ
ಗಾಂಪ: ಫೇಸಬುಕ್ , ಫ್ರಿಜ್ಗೂ ಏನು ಸಾಮ್ಯತೆ ಇದೆ?
ಸೂರಿ: ಎರಡರಲ್ಲಿಯೂ ಏನೂ ಇಲ್ಲ ಅಂತ ಗೊತ್ತಿದ್ದರೂ ದಿನದಲ್ಲಿ ಹತ್ತು ಬಾರಿ ತೆರೆಯುತ್ತೇವೆ!
***
ಗಾಂಪನಿಗೆ ರಜೆ
ಕಚೇರಿಗೆ ಫೋನ್ ಮಾಡಿದ ಶ್ರೀಮತಿ, ಮ್ಯಾನೇಜರ್ ಅವರನ್ನು ಸಂಪರ್ಕಿಸಿದರು.
'ನಿಮ್ಮಲ್ಲಿ ಕೆಲ್ಸ ಮಾಡೋ ಗಾಂಪ ಅನ್ನೋವರನ್ನ ಅರ್ಧ ದಿನ ರಜೆ ಮೇಲೆ ಕಳಿಸಿಕೊಡಿ ಸಾರ್
''ತಾವು ಯಾರು?"
ಅವರ ಪತ್ನಿ. ಮನೆಗೆ ನೆಂಟರು ಬಂದಿದ್ದಾರೆ. ಕೆಲಸದವಳು ಕೈಕೊಟ್ಟಿದ್ದಾಳೆ. ಪಾತ್ರಗಳ ರಾಶೀನೇ ಬಿದ್ದಿದೆ ಅದಕ್ಕೆ,
'ರಜಾ ಬೇಡಮ್ಮ ಹಾಗೆ ಕಳಿಸಿಕೊಡ್ತೀನಿ', ಎಂದರು ಅನುಭವಿ ಮ್ಯಾನೇಜರ್.
***
ಸುಲಭ ಶೌಚಾಲಯ
ಮಗ : ಅಪ್ಪಾ, ಏನೂ ಕೆಲಸ ಮಾಡದೆ ದುಡಿಮೆ ಮಾಡೋ ಉದ್ಯೋಗ ಯಾವುದಾದ್ರೂ ಇದ್ರ ಹೇಳಪ್ಪ
ಗಾಂಪ : ನಂಗೊತ್ತಿಲ್ಲ ಮಗನೇ, ಕೆಲಸವನ್ನೇ ಮಾಡದೆ ಹಣ ಸಿಗೋಕೆ ಹೇಗೆ ಸಾಧ್ಯ ?
ಮಗ : ಹಾಗಲ್ಲಪ್ಪ, ನನಗೆ ಕೆಲಸ ಇರಬಾರದು. ಬೇರೆಯವರೆಲ್ಲಾ ಅವರವರ ಕೆಲಸ ಮಾಡಿಕೊಂಡು ಹೋಗ್ತಾ ಇರಬೇಕು. ನಮಗೆ ಹಣ ಬರ್ತಾ ಇರಬೇಕು
ಗಾಂಪ : ಹಾಗಿದ್ದರೆ ಒಂದು 'ಸುಲಭ ಶೌಚಾಲಯ' ಶುರು ಮಾಡು !
***
ಕುಡುಕ್ ನನ್ ಮಕ್ಲು
ಡಿಜೆ ಗಾಂಪ : ಸರ್, ಎಸ್ಟ್ ಹೊತ್ ತನಕ ಡ್ಯಾನ್ಸ್ಗೆ ಮ್ಯೂಜಿಕ್ ಹಾಕಬೇಕು?
ಮಾಲೀಕ: 6-7 ಪೆಗ್ ಹಾಕೋ ತನಕ ಮಾತ್ರ.
ಡಿಜೆ ಗಾಂಪ : ಆಮೇಲೆ?
ಮಾಲೀಕ : ಕುಡುಕ್ ನನ್ ಮಕ್ಲು, ಜೆನರೇಟರ್ ಸೌಂಡಿಗೇ ಕುಣೀತಾವೆ
***
ಸಾಲ ಮಾಡಿ ಮದುವೆ ಮಾಡ್ಕೊಳ್ತಿದ್ದೆ...!
ಗಾಂಪ ಸಾಲ ಮಾಡಿ ಕಾರು ಖರೀದಿಸಿದ್ದ. ಮರು ಪಾವತಿ ಮಾಡದ ಕಾರಣ ಸ್ವಲ್ಪ ಸಮಯದ ನಂತರ ಬ್ಯಾಂಕ್ನವರು ಕಾರನ್ನು ತೆಗೆದುಕೊಂಡು ಹೋದರು. ಆಗ ಗಾಂಪ ಹೀಗಾಗುತ್ತದೆ ಎಂದು ನನಗೆ ಮೊದಲೇ ಗೊತ್ತಿದ್ದರೆ ನನ್ನ ಮದುವೆಗೆ ಕೂಡ ಸಾಲ ತಗೊಳ್ತಿದ್ದೆ ಎಂದು ಮರುಗಿದ.
***
ಮುಂದಿನ ಜನ್ಮ
ಗಾಂಪ: ನಾನು ಮುಂದಿನ ಜನ್ಮದಲ್ಲಾ ದರೂ ನಾಯಿಯಾಗಿ ಹುಟ್ಟಬೇಕು ಎಂದು ದೇವರನ್ನು ಬೇಡಿಕೊಳ್ಳುವೆ.
ಸೂರಿ: ಯಾಕೋ, ಅಂತಹ ಆಸೆ ನಿನಗೆ, ನಾಯಿಯ ಜನ್ಮ ಬಯಸುವಂತಹ ಮನಸ್ಸು ನಿನಗೆ ಯಾಕೆ ಬಂತು?
ಗಾಂಪ: ನನ್ನ ಹೆಂಡತಿ ನಾಯಿಯನ್ನು ಕಂಡರೆ ಮಾತ್ರ ಹೆದರುವಳು. ಅದಕ್ಕೆ ನಾನು ಮುಂದಿನ ಜನ್ಮದಲ್ಲಿ ನಾಯಿಯಾಗಿ ಹುಟ್ಟಲು ಬಯಸುವೆನು.
***
ಡೈಲಾಗ್
ಡಾಕ್ಟರ್ : ನಮ್ಮ ಆಸ್ಪತ್ರೆಯ ಪ್ರಚಾರಕ್ಕಾಗಿ ಒಂದು ಒಳ್ಳೆಯ ಪಂಚಿಂಗ್ ಡೈಲಾಗ್ ಹೇಳಿ..
ಗಾಂಪ : " ಕರ್ಕೊಂಡ್ ಬನ್ನಿ, ಹೊತ್ಕಂಡ್ ಹೋಗಿ, ಹಣ ನಮಗೆ, ಹೆಣ ನಿಮಗೆ "
***
ಗಂಡ ಬೇಕಾಗಿದ್ದಾನೆ.
ಗಾಂಪ : ನಾನು ತಪ್ಪಿಸಿಕೊಂಡ್ರೆ ನೀನೇನು ಮಾಡ್ತೀಯಾ ?
ಶ್ರೀಮತಿ : ಪೇಪರ್ನಲ್ಲಿ ಜಾಹಿರಾತು ಕೊಡ್ತೀನಿ.
ಗಾಂಪ : ವಾಹ್ ! ಏನಂತ ಕೊಡ್ತೀಯಾ?
ಶ್ರೀಮತಿ : ಗಂಡ ಬೇಕಾಗಿದ್ದಾನೆ.
***
ವ್ಯತ್ಯಾಸ
ಟೀಚರ್ :"ಗಾಂಪ , ಸೀನಿಯರ್ ಗೂ ಜೂನಿಯರ್ ಗೂ ಇರೋ ವ್ಯತ್ಯಾಸವೇನೋ..??"
ಗಾಂಪ :- ಟೀಚರ್, ಸಮುದ್ರದ ಹತ್ತಿರ ವಾಸ ಮಾಡುವವರನ್ನು ಸೀನಿಯರ್ (Sea- near) ಎಂದೂ, ಮೃಗಾಲಯದ ಹತ್ತಿರ ವಾಸಿಸುವವರನ್ನು ಜೂನಿಯರ್ (Zoo- near) ಎಂದೂ ಕರೆಯುತ್ತಾರೆ.
***
ABCD
"ABCD" ಯಲ್ಲಿ “B”ಗೆ ತುಂಬಾ ಚಳಿ" ಯಾಕೆ ಗೊತ್ತ..? ಅದು "AC" ಮಧ್ಯೆ ಇದೆ ಅದಕ್ಕೆ..
"C" ತುಂಬಾ ಕೆಮ್ಮುತ್ತೆ ಯಾಕೆ ಗೊತ್ತ..? ಅದು "BD" ಮಧ್ಯೆ ಇದೆ ಅದರೆ…
"B" ಸಿಕ್ಕಾಪಟ್ಟೆ ಫಿಲ್ಮ್ ನೋಡುತ್ತ ಯಾಕಂದ್ರೆ CD ಅದರ ಮುಂದಿರುತ್ತೆ...
***
ರನ್ನಿಂಗ್ ರೇಸ್
ಶ್ರೀಮತಿ:- ಹೊಸ ಮೊಬೈಲ್ ಎಲ್ಲಿ ತಗೊಂಡೆ?
ಗಾಂಪ:- ರನ್ನಿಂಗ್ ರೇಸ್ ನಲ್ಲಿ ವಿನ್ ಆಗಿದ್ದು
ಶ್ರೀಮತಿ:- ಎಷ್ಟು ಜನ ಓಡಿದ್ರು...?
ಗಾಂಪ: " ಮೊಬೈಲ್ ಮಾಲೀಕ, ಪೋಲಿಸ್, ನಾನು"
ಶ್ರೀಮತಿ:- ಹಾಂ..!
***
ಬಾಳೆ ಹಣ್ಣು
ಬಾಳೆ ಹಣ್ಣು ತಿನ್ನುವುದರಿಂದ ಎಲುಬುಗಳು ಗಟ್ಟಿಯಾಗುತ್ತವೆ.
ಅದರ ಸಿಪ್ಪೆಯ ಮೇಲೆ ಕಾಲಿಟ್ಟರೆ ಎಲುಬುಗಳು ಪುಡಿ ಪುಡಿಯಾಗುತ್ತದೆ
***
ಒಂದು ಪಿಂಪಲ್
ಗಾಂಪ: ನನ್ನ ಮುಖದಲ್ಲಿ ಒಂದು ಪಿಂಪಲ್ ಇತ್ತು. ನಿನ್ನೆ ನಾನು ಅದನ್ನು ಒಡೆದುಬಿಟ್ಟೆ. ಆಮೇಲೆ ಏನಾಯ್ತು ಗೊತ್ತಾ?
ಸೂರಿ: ಏನಾಯ್ತು?
ಗಾಂಪ: ಇವತ್ತು ಅದು ಅವರ ಕುಟುಂಬನ ಕರ್ಕೊಂಡು ಜಗಳಕ್ಕೆ ಬಂದಿದೆ. ನೋಡು ನನ್ನ ಮುಖ ಫುಲ್ ಪಿಂಪಲ್ ಆಗಿವೆ.
(ಸಂಗ್ರಹ)
ಚಿತ್ರ ಕೃಪೆ: ಇಂಟರ್ನೆಟ್ ತಾಣ