‘ಸಂಪದ' ನಗೆ ಬುಗ್ಗೆ - ಭಾಗ ೪೭
ಎಸ್. ಎಸ್.ಎಲ್.ಸಿ ರಿಸಲ್ಟ್
ಅಪ್ಪ ಗಾಂಪ ಮಗನೊಂದಿಗೆ: ಇವತ್ತು ನಿನ್ನ ಎಸ್. ಎಸ್.ಎಲ್.ಸಿ ರಿಸಲ್ಟ್ ಬರುವುದಲ್ಲಾ?
ಮರಿ ಗಾಂಪ: ಹೌದು.
ಗಾಂಪ: ಎಲ್ಲಿಯಾದರೂ ನೀನು ಫೇಲ್ ಆಗಿ ಬಿಟ್ರೆ ನಾನು ನಿನ್ನ ಅಪ್ಪ ಎಂಬುದನ್ನು ಮರೆತುಬಿಡು. ನನಗೂ ನಿನಗೂ ಮತ್ತೆ ಯಾವುದೇ ರೀತಿಯ ಸಂಬಂಧ ಇಲ್ಲ.
ಮರುದಿನ
ಗಾಂಪ : ನಿನ್ನ ರಿಸಲ್ಟ್ ಏನಾಯಿತೋ?
ಮರಿ ಗಾಂಪ: ಅದನ್ನು ಕೇಳಲಿಕ್ಕೆ ನೀನ್ಯಾರೋ?
***
ಲೂಸ್ ತಗೊಂಡರೆ
ಗಾಂಪ: ಒಂದು ಕೆ.ಜಿ ಚಿಪ್ಸ್ ಗೆ ಎಷ್ಟು ರೂಪಾಯಿ?
ವ್ಯಾಪಾರಿ: ೮೦ ರೂಪಾಯಿ
ಗಾಂಪ: ಲೂಸ್ ತಗೊಂಡರೆ.
ವ್ಯಾಪಾರಿ: ಯಾರ್ ತಗೊಂಡ್ರು ಅಷ್ಟೆ.
***
30 ವರ್ಷ ಅನುಭವ
ಸಂದರ್ಶಕ: ೨೦ ವರ್ಷ ವಯಸ್ಸಿನ ನೀನು ೩೦ ವರ್ಷ ಅನುಭವ ಎಂದು ಹಾಕಿದ್ದೀಯಲ್ಲ?
ಅಭ್ಯರ್ಥಿ ಗಾಂಪ: ಓವರ್ ಟೈಮ್ ಮಾಡುತ್ತಿದ್ದೆ.
***
ಮರ್ಯಾದೆ
ಗಾಂಪ: ಅಪ್ಪ ಇಲ್ಲಿ ಬಾ
ಅಮ್ಮ: ಈ ತರ ಎಲ್ಲ ಅಪ್ಪನನ್ನು ಕರೆಯಬಾರದು ಮರ್ಯಾದೆ ಇಂದ ಕರಿಬೇಕು.
ಗಾಂಪ: ಅಪ್ಪ, ಮರ್ಯಾದೆಯಿಂದ ಇಲ್ಲಿ ಬಾ
***
ದೇವದಾಸ್ ಆಗ್ತಾರೆ ಯಾಕೆ?
ಹುಡುಗರು ದೇವದಾಸ್ ಆಗ್ತಾರೆ ಯಾಕೆ ?
ಹುಡುಗಿಗಾಗಿ.
ಅವಳ ಅಂದಕ್ಕಾಗಿ.
ಮನಸಿಗಾಗಿ.
ಪ್ರೀತಿಗಾಗಿ.
ಇವು ಯಾವುದಕ್ಕೂ ಅಲ್ಲ ಹುಡುಗಿಗೋಸ್ಕರ ಮಾಡಿದ ಸಾಲಕ್ಕಾಗಿ
***
ಡ್ರೈವಿಂಗ್ ಸಂಬಳ
ಬಾಸ್: ನನಗೆ ಒಬ್ಬ ಡ್ರೈವರ್ ಬೇಕು ಸ್ಟಾರ್ಟಿಂಗ್ ೨೦೦೦ ಕೊಡ್ತೀನಿ.
ಗಾಂಪ: ಏನ್ ಗ್ರೇಟ್ ಸರ್ ನೀವು, ಸ್ಟಾರ್ಟ್ ಮಾಡೋಕೇ ೨೦೦೦ ಕೊಟ್ರೆ ಡ್ರೈವಿಂಗ್ ಮಾಡೋಕೆ ಸಂಬಳ ಎಷ್ಟು?
***
ಗೌಂಡ್ ಫ್ಲೋರ್ ನಲ್ಲೆ ಇರೋದು
ಗಾಂಪ ಬಸ್ ಸ್ಪಾಪ್ ನಲ್ಲಿ ಕಾಯ್ತಾ ಇದ್ದ
ಒಬ್ಬ ಬೈಕ್ ನಲ್ಲಿ ಬಂದು ಕೇಳಿದ ‘ಲಿಫ್ಟ್ ಬೇಕೇ?’
ಗಾಂಪ : ಬೇಡ, ನಮ್ಮ ಮನೆ ಗೌಂಡ್ ಫ್ಲೋರ್ ನಲ್ಲಿ ಇರೋದು.
***
ಮೈಸೂರ್ ಪಾಕ್ ಮಹಿಮೆ
ಗಾಂಪ : ಮೂರು ಹಲ್ಲು ಒಮ್ಮೆಲೆ ಹೇಗೆ ಹೋದವು?
ಸೂರಿ: ಹೆಂಡತಿ ಮಾಡಿದ ಮೈಸೂರು ಪಾಕು ತಿಂದು
ಗಾಂಪ : ಒತ್ತಾಯ ಏನಿತ್ತು? ಬೇಡ ಅಂತ ಹೇಳಬೇಕಿತ್ತು.
ಸೂರಿ: ಹಾಗೆ ಹೇಳಿದ್ದರೆ ಈಗ ಉಳಿದಿರೋ ಹಲ್ಲುಗಳೂ ಉದುರುತಿತ್ತು…
***
ಗಂಡಂದಿರೆಲ್ಲಾ ಚೆನ್ನಾಗಿದ್ದಾರಾ?
ಗಾಂಪ: ಏನಮ್ಮಾ, ನಿನ್ನ ಗಂಡ ಚೆನ್ನಾಗಿದ್ದಾನಾ ?
ಹೆಂಗಸು : ಏನ್ ಸ್ವಾಮಿ, ನನ್ನ ಗಂಡನನ್ನು ಏಕವಚನದಲ್ಲಿ ಮಾತಾಡಿಸ್ತೀರಾ ?
ಗಾಂಪ : (ಯೋಚಿಸಿ) ಕ್ಷಮಿಸು ತಾಯಿ ಗೊತ್ತಾಗಲಿಲ್ಲ, ನಿನ್ನ ಗಂಡಂದಿರೆಲ್ಲಾ ಚೆನ್ನಾಗಿದ್ದಾರಾ?
***
ಬಿಟ್ಟು ದೂರ ಹೋದ್ರೆ
ಶ್ರೀಮತಿ : ರೀ.. ನಾನೆಲ್ಲಾದ್ರೂ ನಿಮ್ಮನ್ನ ಬಿಟ್ಟು ದೂರ ಹೋದ್ರೆ ಏನ್ ಮಾಡ್ತೀರ?
ಗಾಂಪ: ಹಾಗೆನಾದ್ರು ಆದ್ರೆ ಪೇಪರ್ ನಲ್ಲಿ ಟಿ.ವಿ.ನಲ್ಲಿ ಹಾಕುತ್ತೇನೆ..
ಶ್ರೀಮತಿ: ಏನಂತ ಹಾಕುತ್ತೀರಾ?
ಗಾಂಪ : ನೀನು ಎಲ್ಲೇಯಿರು, ಹೇಗೇಯಿರು, ಅಲ್ಲೇಯಿರು!
***
ನಂಬಿಕೆ
ಬ್ಯಾಂಕಿನವರನ್ನು ನಂಬಿ ನಾವು ಕೋಟಿಗಟ್ಟಲೆ ಹಣ ಠೇವಣಿ ಇಡುತ್ತೇವೆ.
ನಮ್ಮನ್ನು ನಂಬದ ಅವರು 5 ರೂಪಾಯಿ ಪೆನ್ನನ್ನು ಕೂಡ ದಾರದಲ್ಲಿ ಕಟ್ಟಿ ಇಡುತ್ತಾರೆ.
***
ಯಾವಾಗ ಬುದ್ದಿ ಬರುತ್ತೋ ?
ಟೊಮ್ಯಾಟೊ ಬೆಳೆಗಾರರು ಪ್ರತಿಭಟನೆ ಮಾಡ್ತಾರೆ, ಟೊಮ್ಯಾಟೊ ರಸ್ತೆಗೆ ಸುರಿತಾರೆ
ಹಾಲಿನವರು ಪ್ರತಿಭಟನೆ ಮಾಡ್ತಾರೆ, ಹಾಲನ್ನ ರಸ್ತೆಗೆ ಸುರಿತಾರೆ
ಈ ಬ್ಯಾಂಕ್ ನವರಿಗೆ ಯಾವಾಗ ಬುದ್ದಿ ಬರುತ್ತೋ ಎನೋ
***
ನನ್ ಮಗಂದ್ ... ಖುಷಿ
ಗಾಂಪ ಒಂದೇ ಉಸಿರಿನಲ್ಲಿ ಓಡಿ ಬಂದು
ಗಾಂಪ :- ಸಾರ್ ನನ್ನ ಹೆಂಡತಿ ನೆನ್ನೆ ರಾತ್ರಿಯಿಂದ ಕಾಣ್ತಾ ಇಲ್ಲ !
ಆಫೀಸರ್ :- ನಿನ್ನ ಹೆಂಡತಿ ಕಳೆದ್ ಹೊದ್ರೆ ಪೋಲಿಸ್ ಸ್ಟೇಷನ್ ಗೆ ಹೋಗಿ ಅಲ್ಲಿ ಕಂಪ್ಲೆಂಟ್ ಕೊಡು, ಪೋಸ್ಟ್ ಆಫೀಸಿಗೆ ಯಾಕ್ ಬಂದಿದ್ದೀಯಾ?
ಗಾಂಪ :- ಓ ಓ ಸಾರಿ ಸಾರ್ ನನ್ ಮಗಂದ್ ... ಖುಷಿಲಿ ಎಲ್ಲಿಗ್ ಹೋಗ್ಬೇಕು ಎನ್ ಮಾಡ್ಬೇಕು ಅಂತ ಗೊತ್ತಾಗ್ತಿಲ್ಲ ಸರ್
***
ಒಂದು ರೂಪಾಯಿ
ಭಿಕ್ಷುಕಿ : ಅಣ್ಣಾ.. ಮೂರು ದಿನದಿಂದ ಊಟ ಮಾಡಿಲ್ಲ.. ಒಂದು ರೂಪಾಯಿ ಕೊಡಿ..
ಗಾಂಪ : ಮೂರು ದಿನದಿಂದ ಊಟ ಮಾಡಿಲ್ಲಾಂತಿಯಾ .. ಒಂದು ರೂಪಾಯಿನಲ್ಲಿ ಏನು ಮಾಡ್ತೀಯ?
ಭಿಕ್ಷುಕಿ : ಎಷ್ಟು ಕೆಜಿ ಕಮ್ಮಿ ಆಗಿದ್ದೀನಿಂತಾ ನೋಡ್ತೀನಿ..
***
ಸ್ಟೈಲ್
ಯಮ : ನೀನು ಸಿಡಿಲು ಬಡಿದು ಸತ್ತೆ ಆದರೂ...
ಗಾಂಪ : ಆದರೂ... ಏನು ಪ್ರಭು?
ಯಮ : ಸಾಯೋವಾಗ ಯಾಕೆ ನಗ್ತಾ ಇದ್ದೆ?
ಗಾಂಪ : ಸಿಡಿಲು ಬರುವ ಮುನ್ನ ಮಿಂಚು ಬಂತು ಯಾರೋ ಬಡ್ಡಿಮಕ್ಳು ಫೋಟೋ ತೆಗೆತಾ ಇರ್ಬೇಕು ಅಂತಾ ಸ್ಮೈಲ್ ಕೊಟ್ಟೆ ಪ್ರಭು
(ಸಂಗ್ರಹ)
ಚಿತ್ರ ಕೃಪೆ: ಇಂಟರ್ನೆಟ್ ತಾಣ