‘ಸಂಪದ' ನಗೆ ಬುಗ್ಗೆ - ಭಾಗ ೫೦
ಡೈವೋರ್ಸ್
ಗಾಂಪ ಮತ್ತು ಶ್ರೀಮತಿ ಮಧ್ಯೆ ದಿನಾ ಜಗಳ ಆಗ್ತಾ ಇತ್ತು. ಒಂದು ದಿನ ಸರಿ ಇದ್ರೆ ಒಂದು ತಿಂಗಳು ಜಗಳ, ಕೊನೆಗೆ ಹಿಂಗೆ ದಿನಾ ಜಗಳ ಆಡಿಕೊಂಡು ಬದುಕೋಕಾಗಲ್ಲ ಅಂತ ಇಬ್ಬರಿಗೂ ಅನ್ನಿಸಿತು. ಅದ್ಕೆ ಇಬ್ರೂ ಕೋರ್ಟ್ ಮೆಟ್ಟಲು ಹತ್ತಿ ಡೈವೋರ್ಸ್ ಗೆ ಅರ್ಜಿ ಸಲ್ಲಿಸೋದು ಅಂತ ತೀರ್ಮಾನ ಮಾಡಿಕೊಂಡರು. ಹಾಗೇ ಮಾಡಿದ ಬಳಿಕ ಒಂದು ದಿನ ನ್ಯಾಯಾಧೀಶರು ಅವರಿಬ್ಬರನ್ನೂ ಕರೆದರು. ಆ ನ್ಯಾಯಾಧೀಶರು ಬಹಳ ಸಂಭಾವಿತರು. ಹಾಗಾಗಿ ಇಬ್ಬರಿಗೂ ಒಳ್ಳೇ ಮಾತಿನಲ್ಲಿ ಜೊತೆಯಾಗಿ ಬದುಕೋಕೆ ಸಲಹೆ ನೀಡಿದರು. ನೋ ಯೂಸ್, ಗಾಂಪ ಮತ್ತು ಶ್ರೀಮತಿ ಇಬ್ಬರೂ ಸುತರಾಂ ಒಪ್ಪಲಿಲ್ಲ. ಅಂತೂ ಇಂತೂ ಎಲ್ಲ ಪ್ರಯತ್ನಗಳ ನಂತರ ನ್ಯಾಯಾಧೀಶರು ಡೈವೋರ್ಸ್ ನೀಡಿದರು. ಆಗ ಜೀವನಾಂಶದ ವಿಷಯ ಬಂತು. ಶ್ರೀಮತಿ ‘ನನಗೆ ತಿಂಗಳಿಗೆ ೨೦ ಸಾವಿರ ರೂಪಾಯಿ ಜೀವನಾಂಶ ಬೇಕು' ಅಂತ ಪಟ್ಟು ಹಿಡಿದಳು. ಗಾಂಪ ‘ನನಗೆ ಸಾಧ್ಯವೇ ಇಲ್ಲ.' ಅಂತ ಕೂತ. ಕೊನೆಗೆ ಗಾಂಪನ ಒಟ್ಟಾರೆ ಆದಾಯ, ಶ್ರೀಮತಿಯ ಅವಶ್ಯಕತೆ ಎಲ್ಲವನ್ನೂ ಪರಿಶೀಲಿಸಿದ ನ್ಯಾಯಾಧೀಶರು ತೀರ್ಪು ಕೊಟ್ಟರು. ‘ಎಲ್ಲ ದಾಖಲೆಗಳನ್ನು ನೋಡಿ, ಶ್ರೀಮತಿಯ ಪರಿಸ್ಥಿತಿಯನ್ನು ಗಮನಿಸಿ, ಆಕೆಗೆ ಪ್ರತೀ ತಿಂಗಳು ೨೦ ಸಾವಿರ ರೂಪಾಯಿಗಳ ಜೀವನಾಂಶವನ್ನು ನೀಡಬೇಕೆಂದು ನಾನು ತೀರ್ಮಾನ ಮಾಡಿದ್ದೇನೆ.’ ಎಂದರು. ಅದನ್ನು ಕೇಳಿದ ಗಾಂಪ ಫುಲ್ ಖುಷಿಯಾಗಿ ಹೇಳಿದ ‘ನಿಮ್ಮದು ಬಹಳ ದೊಡ್ದ ಮನಸ್ಸು ಸರ್, ಸಾಧ್ಯ ಆದ್ರೆ ಅವಳಿಗೆ ನಾನೂ ಆವಾಗಾವಾಗ ಅಲ್ಪ ಸ್ವಲ್ಪ ದುಡ್ಡು ಕೋಡೋಕೆ ಟ್ರೈ ಮಾಡ್ತೀನಿ !’
***
ಚಿಂತೆಯ ಕಾರಣ
ಡಾಕ್ಟರ್:- ಅಲ್ರೀ, ಇವತ್ತು ನಿಮ್ಮನ್ನು ಡಿಸ್ಚಾರ್ಜ್ ಮಾಡ್ತಾ ಇದ್ದೇವೆ ಅಂತ ಹೇಳಿದ್ರು ಸಹ ಯಾಕ್ರೀ ಸಪ್ಪಗಿದ್ದೀರಾ? ಚಿಂತೆ ಮಾಡ್ತಾ ಇದ್ದೀರಾ ?
ಗಾಂಪ- ನಿಮ್ಮ ಫೀಸ್ ಎಲ್ಲಾ ಇವತ್ತು ಸಾಯಂಕಾಲದೊಳಗೆ ಕೊಟ್ಟೇ ಬಿಡಬೇಕಲ್ಲ ಅಂತ ಚಿಂತೆ ಮಾಡ್ತಿದ್ದೀನಿ.
***
ಕೊರೋನಾ ಜೋಕ್ಸ್
ಈ ಲಾಕ್ಡೌನ್ ಒಂಥರಾ ಡಿಫರೆಂಟ್
ಎಷ್ಟು ಬೇಕಾದ್ರೂ ಲಿಕ್ಕರ್ ಸಿಗುತ್ತೆ,
ಆದ್ರೆ ಅರ್ಜೆಂಟ್ ಆಗಿ ಒಂದು ನಿಕ್ಕರ್ ಬೇಕು ಅಂದ್ರು ಸಿಗಲ್ಲ..!
***
ಮದುವೆಗೆ ಅವಕಾಶ ಇದೆ ಅಂತೆ....
ಆದ್ರೆ,
ಬಟ್ಟೆ ಅಂಗಡಿ,
ಆಭರಣ ಅಂಗಡಿ,
ಫ್ಯಾನ್ಸಿ ಅಂಗಡಿ
ಎಲ್ಲವೂ ಬಂದ್... ಹಾಗಾದರೆ ಮದುಮಕ್ಕಳು ಬರ್ಮುಡಾ ಮತ್ತು ನೈಟಿ ಯಲ್ಲಿ ಮದುವೆ ಮಾಡಿಕೊಳ್ಳುವುದೇ…!
***
ಎಣ್ಣೆ, ಬಾರ್, ರೆಸ್ಟೋರೆಂಟ್ ಬಂದ್
ಹೆಂಡತಿ ಖುಷ್.
ಬೆಳ್ಳಿ, ಬಂಗಾರ, ಸೀರೆ ಅಂಗಡಿ ಬಂದ್
ಗಂಡ ಖುಷ್.
ಸ್ಕೂಲ್, ಕಾಲೇಜ್ ಬಂದ್
ಮಕ್ಕಳು ಖುಷ್.
ಒಟ್ನಲ್ಲಿ ಸುಖ ಸಂಸಾರಕ್ಕೆ ಇನ್ನೂ ಏನ್ ಬೇಕು..!
***
ನಿಮ್ಮ ನೆಚ್ಚಿನ ಆಟ ಯಾವುದೂ !!?
ಸಧ್ಯಕ್ಕೆ..... ಉಸಿರಾಟ
***
ಸಧ್ಯಕ್ಕೆ ಈಗ ಇರೋದು ಏರಡೇ ಕಾಲಗಳು.....
ಒಳಗಡೆ ಇದ್ರೆ "ಉಳಿಗಾಲ"
ಹೊರಗಡೆ ಬಂದ್ರೆ "ಕೊನೆಗಾಲ"
***
ಪ್ರೇಮಿಗಳು ಒಟ್ಟಿಗೆ ಇರೋ ದಿನ
"ವ್ಯಾಲೆಂಟೈನ್" ಡೇ.
ಮನೆ ಮಂದಿಯೆಲ್ಲಾ ಒಟ್ಟಿಗೆ ಇರೋ ದಿನ "ಕ್ವಾರಂಟೆನ್" ಡೇ.
***
ಅಂದು ಯುದ್ಧ ಮಾಡಿ ದೇಶವನ್ನು ಉಳಿಸಬೇಕಿತ್ತು.
ಆದ್ರೆ ಈ ಇಂದು ನಿದ್ದೆ ಮಾಡಿ ದೇಶವನ್ನು ಉಳಿಸುವ ಪರಿಸ್ಥಿತಿ ಬಂದಿದೆ!
***
ಅಂತೂ ಇಂತೂ
"ಎಣ್ಣೆ ಹಾಲು" 🥛
ಬೆಳಿಗ್ಗೆ ಒಟ್ಟಿಗೆ ತರೂ ಟೈಮ್ ಬಂತು.....
***
ಇನ್ಮುಂದೆನೂ ಕೋರೋನಾ ತೊಲಗದೆ ಇದ್ರೆ ಬಿಲ್ಡರ್ಸ್ ಗಳು ಹೀಗೆ ಜಾಹೀರಾತು ನೀಡಬಹುದು..
2 ಬೆಡ್ ರೂಮ್,
ಕಿಚನ್, ಹಾಲ್,
ಐಸೋಲೇಷನ್ ರೂಮ್,
ಆಕ್ಸಿಜನ್ ಪೈಪ್ ಲೈನ್, ಮತ್ತೆ ವೆಂಟಿಲೇಟರ್ ಸೌಲಭ್ಯ ಇದೆ". !
***
ಏನ್ ಮಾಡಿದ್ರೂ ಟೈಮ್ ಪಾಸ್ ಆಗ್ತಾ ಇಲ್ಲಾ ಅಂದ್ರೆ.....
ನೀವೇ ನಟಿಸಿರುವ , ನಿಮ್ಮದೇ ಮೂವೀ
" ನಿಮ್ಮ ಮದುವೆ "
ಸಿಡಿ ಹಾಕಿಕೊಂಡು ನೋಡಿ...
ಸತ್ಯ ಘಟನೆ ಆಧಾರಿತ ಚಿತ್ರ.
***
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ