‘ಸಂಪದ' ನಗೆ ಬುಗ್ಗೆ - ಭಾಗ ೫೧
ಮೂರ್ಖ !
ಗಾಂಪ ಹೆಂಡತಿಯೊಂದಿಗೆ ಜಗಳವಾಡುತ್ತಾನೆ.
ಶ್ರೀಮತಿ: ರೀ ನಿಮ್ಮನ್ನು ಮದುವೆಯಾಗುವಾಗ ನಿಜಕ್ಕೂ ನಾನು ಮೂರ್ಖಳಾಗಿದ್ದೆ.
ಗಾಂಪ: ಹೌದೇ? ಛೇ ಕುರುಡಾಗಿ ಪ್ರೀತಿಸುತ್ತಿದ್ದ ನನಗದು ಕಾಣಲೇ ಇಲ್ವೇ!
***
ಮದುವೆಯಾದ ಮೊದಲ ದಿನ
ಗಾಂಪ: ನನ್ನ ಕಡಿಮೆ ಸಂಬಳದಲ್ಲಿ ನೀನು ಹೇಗೆ ಜೀವನ ಮಾಡುತ್ತೀಯ ಎಂಬುದೇ ಚಿಂತೆ.
ಶ್ರೀಮತಿ: ನನ್ನ ಚಿಂತೆ ಬಿಡಿ. ಹೇಗೋ ಆ ಸಂಬಳದಲ್ಲಿ ಜೀವಿಸುತ್ತೀನಿ. ಇನ್ನು ನಿಮ್ಮ ಜೀವನಕ್ಕೆ ಏನು ಮಾಡುತ್ತೀರಿ?
***
ಹೆಂಡತಿ ಮತ್ತು ತೆರಿಗೆ
ಗಾಂಪ: ಹೆಂಡತಿ ಮತ್ತು ತೆರಿಗೆ ನಡುವಿನ ವ್ಯತ್ಯಾಸವೇನು?
ಸೂರಿ: ಇಬ್ಬರ ವಿಚಾರದಲ್ಲೂ ಗಂಡಸರು ಸುಳ್ಳು ಹೇಳುತ್ತಾರೆ!
***
ಸುಂದರ ರಾತ್ರಿ !
ಗಾಂಪ ಕುಡಿದಿದ್ದ. ಅತ್ಯಂತ ರೊಮ್ಯಾಂಟಿಕ್ ಆಗಿ ಶ್ರೀಮತಿ ಜೊತೆ ಮಾತನಾಡಲು ಶುರು ಮಾಡಿದ.
ಗಾಂಪ: ಇವತ್ತು ನಿನಗೆ ಸುಂದರ ರಾತ್ರಿಯನ್ನು ಕೊಡುತ್ತೇನೆ.
ಶ್ರೀಮತಿ: ಇಂದು ರಾತ್ರಿ ನೀವು ಮನೆಯಲ್ಲಿರುವುದಿಲ್ವಾ?
***
ಕಳ್ಳ
ಗಾಂಪ: ನಮ್ಮ ಮನೆ ಕಳ್ಳತನ ಮಾಡಿದ ಕಳ್ಳನನ್ನು ನೋಡಬೇಕು.
ಶ್ರೀಮತಿ: ಯಾಕ್ರೀ?
ಗಾಂಪ: ಆತನಿಂದ ಕಲಿಯಬೇಕಾದದ್ದು ಬಹಳಷ್ಟಿದೆ.
ಶ್ರೀಮತಿ: ಏನು?
ಗಾಂಪ: ಅದು ಹೇಗೆ ನಿನ್ನ ಕಣ್ಣು ತಪ್ಪಿಸಿ ಮನೆಯಿಂದ ಹೊರಗೆ ಹೋದ ಎಂದು!
***
ರಿಂಗ್ !
ಗಾಂಪ: ನಿಶ್ಚಿತಾರ್ಥದ ದಿನ ಹುಡುಗಿಗೆ ರಿಂಗ್ ಕೊಡಲು ಮರೀಬೇಡ.
ಶ್ರೀಮತಿ: ಖಂಡಿತ ಗಾಂಪ, ಆದರೆ ಯಾವುದರಿಂದ ರಿಂಗ್ ಕೊಡಲಿ ಮೊಬೈಲ್ ಅಥವಾ ಲ್ಯಾಂಡ್ ಲೈನ್?
***
ಮದುವೆ
ಶ್ರೀಮತಿ: ನಾನು ನನ್ನ ಗಂಡ ಮೊದಲ ೫ ವರ್ಷ ಸಂತೋಷವಾಗಿದ್ದೆವು.
ತಾರಾ: ಆಮೇಲೆ?
ಶ್ರೀಮತಿ: ಅದೇ ಭರವಸೆಯಲ್ಲಿ ಮದುವೆ ಆದೆವು!
***
ಉಪನ್ಯಾಸ
ಗಾಂಪ: ಇಷ್ಟು ತಡರಾತ್ರಿ ಎಲ್ಲಿಗೆ ಹೋಗುತ್ತಿದ್ದೀಯಾ?
ಸೂರಿ: ಮದ್ಯಪಾನದ ದುಷ್ಪರಿಣಾಮಗಳ ಉಪನ್ಯಾಸ ಕೇಳೋಕೆ.
ಗಾಂಪ: ಯಾರು ಉಪನ್ಯಾಸ ಮಾಡ್ತ ಇರೋದು?
ಸೂರಿ: ಹೆಂಡತಿ!
ಗಾಂಪ: ಎಲ್ಲಿ?
ಸೂರಿ: ಅಯ್ಯಾ... ನಿನ್, ನಾನು ಮನೆಗೆ ಹೋಗ್ತಾ ಇದ್ದೀನಿ!
***
ದಿನಕ್ಕೊಂದು ಸೇಬು
ಡಾಕ್ಟರು ಎಂಜಿನಿಯರು ಒಂದೇ ಹುಡುಗಿ ಹಿಂದೆ ಬಿದ್ದಿರ್ತಾರೆ.
ಡಾಕ್ಟರು ಹುಡುಗೀನ ಪಟಾಯಿಸೋಕೆ ದಿನಾ ಒಂದೊಂದು ಗುಲಾಬಿ ಕೊಡ್ತಾ ಇರ್ತಾನೆ.
ಎಂಜಿನಿಯರ್ ದಿನಾ ಒಂದು ಸೇಬು ಕೊಡ್ತಾ ಇರ್ತಾನೆ.
ಡಾಕ್ಟರ್ ಹುಡುಗೀನ ಇಂಪ್ರೆಸ್ ಮಾಡೋಕೆ ಡೈಮಂಡ್ ರಿಂಗ್ ತಂದು ಕೊಡ್ತಾನೆ.
ಹುಡುಗಿ ಡೈಮಂಡ್ ರಿಂಗ್ ಇಸ್ಕೋತಾಳೆ.
ಎಂಜಿನಿಯರ್ ಹತ್ರ ಅಷ್ಟೆಲ್ಲ ದುಡ್ಡಿಲ್ಲ. ಅವನು ಸೇಬೂನ್ನೇ ಕೊಡ್ತಾನೆ.
ಈ ತ್ರಿಕೋನ ಲವ್ ಸ್ಟೋರಿಯ ಕ್ಲೈಮಾಕ್ಸಲ್ಲಿ ಹುಡುಗಿ ಡಾಕ್ಟರ್ ನ ದೂರ ಮಾಡ್ತಾಳೆ.
ಅದರರ್ಥ? ಆಕೆ 'ಶ್ರೀಮಂತಿಕೆಗೆ ಬೆಲೆ ಕೊಡಲಿಲ್ಲ' ಅಂತ ಅಲ್ಲ.
ಮತ್ತೆ?
ಆ್ಯನ್ ಆ್ಯಪಲ್ ಎ ಡೇ... ಕೀಪ್ಸ್ ಡಾಕ್ಟರ್ ಅವೇ' ಅಂತ!
***
'ಟ್ಯಾಬ್ಲೆಟ್'
ಗಾಂಪ: ಡಾಕ್ಟ್ರೇ ನಂಗೆ ಜ್ವರ ಬಂದಿದೆ. ಏನಾದರೂ ಔಷಧ ಕೊಡಿ..
ವೈದ್ಯ: ಮಳೆಯಲ್ಲಿ ಹದಿನೈದು ನಿಮಿಷ ನಡೆಯಿರಿ. ಹಸಿ ಬಟ್ಟೆಯಲ್ಲೇ ಅರ್ಧಗಂಟೆ ತಣ್ಣನೆಯ ಗಾಳಿಯಲ್ಲಿ ಕೂತಿರಿ. ಬಟ್ಟೆ ಒಣಗಿದ ಮೇಲೆ ತಣ್ಣನೆಯ ನೀರಲ್ಲಿ ಒಮ್ಮೆ ಸ್ನಾನ ಮಾಡಿ.
ಗಾಂಪ: ಹಾಗೆ ಮಾಡಿದರೆ ಜ್ವರ ಹೋಗುತ್ತದೆಯೇ?
ವೈದ್ಯ: ಇಲ್ಲ. ಹಾಗೆ ಮಾಡಿದರೆ ನ್ಯುಮೋನಿಯಾ ಬರುತ್ತೆ. ಮತ್ತು ನ್ಯುಮೋನಿಯಾಕ್ಕೆ ನನ್ನ ಬಳಿ ಒಳ್ಳೆಯ ಔಷಧಿ ಇದೆ.
ನೀತಿ: ಡಾಕ್ಟರಾಗೋಕೆ ಎಂಬಿಬಿಎಸ್ ಮಾಡಿದ್ರೆ ಸಾಲ್ದು. ಮಾರ್ಕೆಟಿಂಗ್ ಟೆಕ್ನಿಕ್ಕೂ ಕಲಿತಿರಬೇಕು!!
***
ಒಂದು ಒಳ್ಳೆ ದಿನ
ಗಾಂಪ ಹೆಂಡತಿಗೆ 'ಲೇ... ಇವತ್ತು ಒಳ್ಳೆ ದಿನ ಕಣೇ'.
ಹೆಂಡ್ತಿ ಅವನ ಮಾತನ್ನ ತಲೆಗೆ ಹಾಕ್ಕೊಳಲ್ಲ.
ಮರುದಿನ ಮತ್ತೆ... 'ಲೇ ಇವತ್ತು ಕೂಡ ಒಳ್ಳೆ ದಿನ ಕಣೇ'.
ಗಾಂಪ ಯಾಕೆ ಇವತ್ತೂ ಹೀಗಂತಿದಾನೆ ಅಂತ ಆಶ್ಚರ್ಯ ಆದ್ರೂ... ಹೆಂಡ್ತಿ ಏನೂ ಮಾತಾಡಲ್ಲ. ಅವಳ ಪಾಡಿಗೆ ಅವಳ ಕೆಲಸಗಳಲ್ಲಿ ಬ್ಯುಸಿ ಆಗ್ತಾಳೆ.
ಮರುದಿನ ಮತ್ತೆ.... 'ಲೇ ಇವತ್ತು ಒಳ್ಳೆ ದಿನ ಕಣೇ'.
ಆ ವಾರವಿಡೀ ಗಾಂಪನದ್ದು ಇದೇ ಡೈಲಾಗು... ಹೆಂಡ್ತೀದು ಸೈಲೆಂಟ್ ಗೆಸ್ಸಿಂಗು!
ಕೊನೆಗೂ ಯಾಕೆ ಹೀಗೆ ಹೇಳ್ತಿದಾನೆ ಗಂಡ ಅನ್ನೋದು ಅರ್ಥಮಾಡ್ಕೊಳೋಕೆ ಆಗದೆಯೇ ಹೆಂಡ್ತಿ ಕೇಳೇ ಬಿಡ್ತಾಳೆ.
'ಯಾಕ್ರೀ ಅವತ್ತಿಂದ ಇದೊಂದೇ ಡೈಲಾಗ್ ಹಿಡ್ಕಂದಿದೀರ? ಏನಾಗಿದೆ ನಿಮಗೆ? ಸರಿ... ಇವತ್ತು ಒಳ್ಳೆ ದಿನ. ಏನೀಗ?
ಗಾಂಪ ತಲೆ ಕೆರ್ಕೊಳ್ತಾ ಹೇಳ್ದ 'ಏನಿಲ್ಲ.. ಹೋದವಾರ ನಮ್ಮಿಬ್ರಿಗೂ ಜೋರ್ ಜಗಳ ಆದಾಗ ಒಂದ್ 'ಒಳ್ಳೆ ದಿನ' ನೋಡಿ, ಈ ಮನೆ ಬಿಟ್ ಹೋಗ್ತೀನಿ... ನೀವೂ ಸಾಕು ನಿಮ್ಮನೇನೂ ಸಾಕು ಅಂದಿದ್ಯಲ್ಲ... ಅದಕ್ಕೆ ನೆನಪು ಮಾಡ್ತಾ ಇದ್ದೆ ಅಷ್ಟೇ'!!
***
ಆಂಟಿ ಆಸ್ಪತ್ರೆ ಭೇಟಿ
ವಯಸ್ಸಾದ ಧಡೂತಿ ಆಂಟಿ ಒಬ್ಳು ಆಸ್ಪತ್ರೆಗೆ ಬರ್ತಾಳೆ.
'ಡಾಕ್ಟರ್ ಡಾಕ್ಟರ್... ಸಿಕ್ಕಾಪಟ್ಟೆ ಗ್ಯಾಸ್ಟ್ರಬಲ್ ಆಗ್ಬಿಟ್ಟಿದೆ... ಏನಾದರೂ ಮೆಡಿಸಿನ್ ಕೊಡಿ. ಸಮಾಧಾನದ ವಿಷ್ಯ ಏನಪ್ಪಾ ಅಂದ್ರೆ... ಸಿಕ್ಕಾಪಟ್ಟೆ ಗ್ಯಾಸ್ ಪಾಸ್ ಆಗುತ್ತೆ. ಆದ್ರೆ ಸೌಂಡು ಸ್ಮೆಲ್ಲು ಎಲ್ಲ ಬರಲ್ಲ. ಹಾಗಾಗಿ ನನ್ನಿಂದ ಬೇರೇವ್ರಿಗೆ ತೊಂದ್ರೆ ಆಗ್ತಿಲ್ಲ. ಈಗ ನಿಮ್ಹತ್ರ ಮಾತಾಡ್ತಾ ಕಮ್ಮಿ ಅಂದ್ರೂ ಹತ್ತು ಗ್ಯಾಸ್ ಪಾಸ್ ಆಯ್ತು. ವಾಸ್ನೇನೂ ಇಲ್ಲ ಸೌಂಡೂ ಇಲ್ಲ... ಹೌದಾ? ಏನೇ ಆದರೂ ಪ್ರಾಬ್ಲಮ್ ಪ್ರಾಬ್ಲಮ್ಮೇ ಅಲ್ವ... ಪ್ಲೀಸ್ ಏನಾದರೂ ಮೆಡಿಸಿನ್ ಕೊಡಿ'
ಡಾಕ್ಟರ್ ಅದೇನೋ ಮಾತ್ರೆ ಕೊಟ್ಟು ಒಂದು ವಾರ ಬಿಟ್ಟು ಬರೋಕೆ ಹೇಳಿ ಕಳಿಸ್ತಾರೆ.
ಒಂದು ವಾರ ಕಳೀತಿದ್ದ ಹಾಗೆಯೇ ಕೂಗಾಡ್ತಾ ಆಸ್ಪತ್ರೆಗೆ ನುಗ್ತಾಳೆ ಆಂಟಿ.
ಏನ್ ಮಾತ್ರೆ ಕೊಟ್ರಿ ಡಾಕ್ಟರೇ..? ಮೊದಲೇ ವಾಸಿ ಇತ್ತು. ಸೌಂಡು ಸ್ಮೆಲ್ಲು ಏನೂ ಇರಲಿಲ್ಲ... ಈಗ ಮಾತ್ರೆ ತಗೊಂಡಾಗಿಂದ ಸಿಕ್ಕಾಪಟ್ಟೆ ಕೆಟ್ಟ ವಾಸನೆ. ನಂಗೇ ತಡ್ಕಳಕ್ಕಾಗ್ತಾ ಇಲ್ಲ... ಇನ್ನು ಬೇರೆಯವರು ನಂ ಬಗ್ಗೆ ಏನ್ ತಿಳ್ಕಳಲ್ಲ ಹೇಳಿ'
ಡಾಕ್ಟರ್ ಸೈಲೆಂಟಾಗಿ ಹೇಳ್ತಾರೆ 'ಗುಡ್ ಗುಡ್... ನಾ ಕೊಟ್ಟ ಮೆಡಿಸಿನ್ನಿಂದ ನಿಮ್ಮ ಮೂಗು ಕ್ಲಿಯರ್ ಆಗಿದೆ. ಇವತ್ತಿಂದ ನಿಮ್ಮ ಕಿವಿಯ ಟ್ರೀಟ್ಮೆಂಟ್ ಶುರು ಮಾಡೋಣ ಓಕೆನಾ?'.
***
ಡ್ಯಾನ್ಸ್ ಅಂದ್ರೆ ಇಷ್ಟ
ಅದೊಂದು ಗ್ರ್ಯಾಂಡ್ ಪಾರ್ಟಿ. ಸಿಕ್ಕಾಪಟ್ಟೆ ಜನ. ಒಂದಷ್ಟು ಜನ ಕುಡೀತಿದ್ರು. ಒಂದಷ್ಟ್ಜನ ಕುಣೀತಿದ್ರು.
ಅಲ್ಲೊಬ್ಳು ಸುಂದರಿ ಕೂತ್ಕೊಂಡಿದ್ಳು. ತುಂಬಾ ಸುಂದರಿ. ಅವಳನ್ನು ಪಾರ್ಟಿಗೆ ಬಂದಿದ್ದ ಒಬ್ಬ ಯುವಕ ನೋಡಿದ.
ಸೀದಾ ಹತ್ತಿರ ಹೋದ.
ಕಣ್ಣು ಕಣ್ಣು ಬೆರೆಯಿತು.
ನಗು ಎಕ್ಸ್ಚೇಂಜ್ ಆಯ್ತು.
ಧೈರ್ಯ ಮಾಡಿ ಕೇಳೇ ಬಿಟ್ಟ 'ನೀವು ಡ್ಯಾನ್ಸ್ ಮಾಡ್ತೀರಾ?'.
ಹುಡುಗಿ ಕೂಡ ಒಬ್ಬಳೇ ಕೂತಿದ್ದಳಲ್ವಾ? 'ಓಹೋ ಅದಕ್ಕೇನಂತೆ... ನಂಗೂ ಡ್ಯಾನ್ಸ್ ಅಂದ್ರೆ ಇಷ್ಟ' ಅಂತ ಎದ್ದು ರೆಡಿಯಾಗೇಬಿಟ್ಟಳು.
ಯುವಕನಿಗೆ ಸಖತ್ ಖುಷಿ... 'ಹಾಗಾದ್ರೆ... ನಾನು ನಿಮ್ ಛೇರಲ್ಲಿ ಕೂತ್ಕೋತೀನಿ... ಒಂದೇ ಒಂದ್ ಖಾಲಿ ಛೇರ್ ಕೂಡ ಸಿಕ್ಲಿಲ್ಲ... ಅದ್ಕೇ ಕೇಳ್ದೆ.... ಥ್ಯಾಂಕ್ಯೂ'!
***
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ