‘ಸಂಪದ' ನಗೆ ಬುಗ್ಗೆ - ಭಾಗ ೫೨
ಚಪಾತಿ !
ಮೇಷ್ಟ್ರು: ಒಬ್ಬ ಹೆಂಗಸು ಒಂದು ಗಂಟೆಯಲ್ಲಿ 40 ಚಪಾತಿ ಮಾಡಿದರೆ, ಮೂವರು ಹೆಂಗಸರು ಒಂದು ಗಂಟೆಯಲ್ಲಿ ಎಷ್ಟು ಚಪಾತಿ ಮಾಡುತ್ತಾರೆ?
ಗಾಂಪ: ಹೆಚ್ಚಂದ್ರೆ 20-25 ಮಾಡಬಹುದೇನೋ?
ಮೇಷ್ಟ್ರು: ಯಾಕೆ?
ಗಾಂಪ: ಮೂವರು ಹೆಂಗಸರು ಸೇರಿದ್ರೆ ಹರಟೆ ಹೊಡೆಯೋಕೇ ಸಮಯ ಸಾಕಾಗಲ್ಲ. ಇನ್ನು ಚಪಾತಿ ಬೇರೆ ಮಾಡ್ತಾರಾ!?
***
ಸರಳ ಜೀವನ !
ಒಂದು ಜೋರು ಮಳೆಯ ಸಂದರ್ಭ ತಾಯಿ ಶಾಲೆಯಿಂದ ತನ್ನ ೬ ವರ್ಷದ ಮಗುವನ್ನು ಕರೆದುಕೊಂಡು ಬರಲು ಹೋಗುವಾಗ ಯೋಚಿಸುತ್ತಿದ್ದಳು…ಸಿಡಿಲು,ಮಿಂಚಿಗೆ ಮಗು ಹೆದರಿದರೆ…ಅಂತ.. ಆದರೆ ಮಗು ಪ್ರತಿಯೊಂದು ಮಿಂಚಿಗೂ ಆಕಾಶ ನೋಡಿ ನಗುತ್ತಿತ್ತು….ಅಮ್ಮ ಕೇಳಿದ್ಲು ಯಾಕೆ ನಗುವುದು..ಅಂದಾಗ..ಮಗು ಹೇಳಿತು..”ದೇವರು ನನ್ನ ಫೋಟೋ ತೆಗೀತಿದ್ದಾನೆ ,ಚೆನ್ನಾಗಿ ಬರ್ಲಿ ಅಂತ ನಗುವುದು”…ಅಂತ… ಜೀವನವು ಸರಳವಾಗಿದೆ ನಾವೇ ಕಠಿಣ ಮಾಡ್ಕೊಳ್ಳೋದು.
****
ಅಕ್ಕ !
ಶ್ರೀಮತಿ :ರೀ ಕೆಲಸದವಳ ಹತ್ತಿರ ಏನದ್ರು ತರಲೆ ಮಾಡಿದ್ರಾ…..??
ಗಾಂಪ : ಯಾಕೆ ಏನಾಯ್ತು….??
ಶ್ರೀಮತಿ: ಇಷ್ಟು ದಿನ “ಅಮ್ಮ” ಎಂದು ಕರೆಯುತ್ತಿದ್ದವಳು…. ಈಗ “ಅಕ್ಕ” ಎಂದು ಕರೆಯುತ್ತಿದ್ದಾಳೆ…!!!
***
ಸುಖ
ಗಾಂಪ: ಲೇ ನಿಮ್ಮ ಅಪ್ಪ ಇನ್ನು ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಬುದ್ಧಿ ಬಿಟ್ಟಿಲ್ಲ
ಶ್ರೀಮತಿ: ಯಾಕ್ರೀ ಮತ್ತೆ ಏನ್ ಮಾಡಿದ್ರು?
ಗಾಂಪ: ಇವತ್ತು ಮತ್ತೆ ಕೇಳಿದರು, ನನ್ನ ಮಗಳನ್ನು ಮದುವೆಯಾಗಿ ಸುಖವಾಗಿ ಇದ್ದೀರಿ ಅಲ್ವ ಅಂತ!
***
ಸ್ವರ್ಗ
ಭಿಕ್ಷುಕ : ಸ್ವಾಮೀ, ತಿನ್ನಲಿಕ್ಕೆ ಏನಾದರೂ ಕೋಡಿ,
ಗಾಂಪ : ನಿನಗೆ ಕೊಟ್ಟ್ರೆ ನನಗೆ ಏನು ಸಿಗುತ್ತೆ?
ಭಿಕ್ಷುಕ : ನಿಮಗೆ ಸ್ವರ್ಗ ಸಿಗುತ್ತೆ,
ಗಾಂಪ : ನಿಂಗೆ ಬೆಂಗಳೂರು ಕೊಡುತ್ತಿನಿ,
ಭಿಕ್ಷುಕ : ಬೆಂಗಳೂರು ಏನು ನಿಮ್ಮದಾ?
ಗಾಂಪ : ಮತ್ತೆ ಸ್ವರ್ಗ ಏನು ನಿಮ್ಮಪ್ಪಂದಾ?
***
ವೆಜ್ ಊಟ
ಒಬ್ಬ ಮಲಯಾಳಿ ಅವನ ಒಬ್ಬ ಅರಬ್ ಸ್ನೇಹಿತನನ್ನು ಓಣಮ್ ಊಟಕ್ಕೆ ಕರೆದ.
ಅ ಅರಬ್ ಸ್ನೇಹಿತ ಊಟ ವೆಜ್ಜೋ ನಾನ್ ವೆಜ್ಜೋ ಅಂತ ಕೇಳಿದ…
ಮಲಯಾಳಿ ಹೇಳಿದ.. ಇದು ಪ್ಯೂರ್ ವೆಜ್ ಊಟ ಬರ್ತೀರಲ್ವ?
ಅರಬ್ ಬರಲು ಒಪ್ಪಿದ.. ಮತ್ತು ಊಟಕ್ಕೆ ಬಂದ ಊಟಕ್ಕೆ ಕುಳಿತ…
ಮಲಯಾಳಿ ಒಂದು ಒಳ್ಳೆಯ ದೊಡ್ಡ ಬಾಳೆಎಲೆಯನ್ನು ಹಾಕಿ ಒಂದು ಲೋಟ ನೀರಿಟ್ಟು ಊಟ ತರಲು ಒಳಗೆ ಹೋದ…
ಒಳಗಿಂದ ಊಟ ತರುವಷ್ಟರಲ್ಲಿ…. ಅ ಅರಬ್ ಸ್ನೇಹಿತ ಬಾಳೆಎಲೆಯನ್ನು ತಿಂದುನೀರು ಕುಡಿದು ಹೇಳಿದ….
“ಮಾಷಾ ಅಲ್ಲಾ…. ಇದೇ ಮೊದಲ ಸಲ ನಾನು ಇಷ್ಟು ದೊಡ್ಡ ಎಲೆಯ “ಸಲಾಡ್'” ತಿಂದಿದ್ದು…”
***
ಪಾಲಿಸಿ !
ಗಾಂಫ : ಏನೇ ಮೂದೇವಿ, ಈ ಮಧ್ಯೆ ನಾನು ಸಿಗ್ರೇಟ್ ಸೇದಿದ್ರೂ ‘ಹಾಂಹೂಂ’ ಅನ್ತಿಲ್ಲ, ಡ್ರಿಂಕ್ಸ್ ತಗೊಂಡ್ರೂ ‘ಹಾಂಹೂಂ’ ಅನ್ತಿಲ್ವಲ್ಲೇ.. ಏನ್ ಕತೆ..!? ಮೊದ್ಲಾದ್ರೆ ರಾಕ್ಷಸಿ ಥರಾ ಎಗ್ರಾಡ್ತಿದ್ದಿಯಲ್ಲೇ..
ಶ್ರೀಮತಿ : ಅಂದೇನಂದ್ರೆ…. ಕಳ್ದ್ ವಾರ LIC ಏಜೆಂಟ್ ಬಂದಿದ್ನಲ್ಲಾ, ನೀವ್ ಮಾಡಿರೋ ಪಾಲಿಸಿ ಬೆನಿಫಿಟ್ ಬಗ್ಗೆ ಅರ್ಧಗಂಟೆ ಚೆನ್ನಾಗ್ ಹೇಳಿ ಹೋದ ನೋಡ್ರೀ…
***
ಬಹುಮಾನ
ಆ ಕೊಳ ಮೊಸಳೆಗಳಿಂದ ತುಂಬಿ ಹೋಗಿತ್ತು. ಆ ಕೊಳಕ್ಕೆ ಧುಮುಕಿ, ಆ ಮೊಸಳೆಗಳಿಂದ ಪಾರಾಗಿ ಮೇಲೆ ಬಂದ ಶೂರನಿಗೆ ಒಂದು ಕೋಟಿ ರೂ.ಗಳ ಬಹುಮಾನ ಘೋಷಣೆಯಾಗಿತ್ತು. ನೂರಾರು ಜನ ಸೇರಿದ್ದರೂ ಯಾರೊಬ್ಬರೂ ಅದಕ್ಕೆ ಧುಮುಕುವ ಧೈರ್ಯ ಮಾಡಿರಲಿಲ್ಲ. ಕೊನೆಗೂ ಒಬ್ಬಾತ ಧುಮುಕಿಯೇ ಬಿಟ್ಟ. ನೆರೆದವರು ಬೆಕ್ಕಸ ಬೆರಗಾಗಿ ನೋಡುತ್ತಿದ್ದಂತೆಯೇ ಆತ ಹೇಗೋ ಈಜಿಕೊಂಡು ದಡ ಸೇರಿಯೇ ಬಿಟ್ಟ. ಎಲ್ಲರೂ ಅವನನ್ನು ಅಭಿನಂದಿಸುವವರೇ..!
ಒಂದು ಕೋಟಿ ರೂ.ಗಳ ಬಹುಮಾನ ಸ್ವೀಕರಿಸಿದ ಆತ ಸುತ್ತಲೂ ಕೆಕ್ಕರಿಸುತ್ತಾ ನೋಡಿ,”ಈಗ ಹೇಳಿ.ಯಾರು ನನ್ನನ್ನು ಕೊಳಕ್ಕೆ ತಳ್ಳಿದವರು?”
ಯಾರೂ ಉತ್ತರಿಸಲಿಲ್ಲ.ಆದರೆ ಪಕ್ಕದಲ್ಲೇ ನಿಂತ ಆತನ ಪತ್ನಿ ಮುಗುಳು ನಗುತ್ತಿದ್ದುದು ಆತನ ಕಣ್ಣಿಗೆ ಬಿತ್ತು..!
ಕತೆಯ ನೀತಿ: ಪ್ರತೀ ಯಶಸ್ವೀ ಪುರುಷನ ಹಿಂದೆ, ಒಬ್ಬ ಮಹಿಳೆ ಇದ್ದೇ ಇರುತ್ತಾಳೆ.!
***
ವೆಲ್ಡಿಂಗ್ !
ಇಬ್ಬರು ಹುಚ್ಚರು ಟೆರೇಸ್ ಮೇಲೆ ಮಲಗಿದ್ದರು.ಮಳೆ ಬರಲಾರಂಬಿಸಿತು,
ಮೊದಲ ಹುಚ್ಚ :- ನಡಿ ಕೆಳಗೆ ಹೋಗಿ ಮಲಗೋಣ, ಆಕಾಶ ತೂತಾಗಿದೆ.
(ಅಷ್ಟರಲ್ಲಿ ಆಕಾಶದಲ್ಲಿ ಮಿಂಚು ಬರ ತೊಡಗಿತು)
ಎರಡನೇ ಹುಚ್ಚ :-ಇಲ್ಲೇ ಮಲಗೋ ವೆಲ್ಡಿಂಗ್ ಮಾಡೋರು ಬಂದ್ರು...!
***
ಹೆದರುಪುಕ್ಕ
ಗಾಂಪ: ನಾನು ಹೆದರುಪುಕ್ಕನಲ್ಲ. ನಾನೇನು ನಿನಗೆ ಹೆದರುವವನಲ್ಲಾ!
ಶ್ರೀಮತಿ: ಓ ಹಾಗೋ! ಮದುವೆಗೆ ಮೊದಲು ನನ್ನ ನೋಡೋದಕ್ಕೆ ನೀವು 5-6 ಜನರೋಂದಿಗೆ ಬಂದಿದ್ರಿ.
ಮದುವೆಯಾಗುವಾಗ 400-500 ಜನರೋಂದಿಗೆ ಬಂದಿದ್ರಿ. ಹೌದೋ ಅಲ್ವೋ?
ಗಾಂಪ: ಹೌದು ಕಣೇ.
ಶ್ರೀಮತಿ: ನಾನು ಮಾತ್ರ ನೋಡಿ, ಮದುವೇ ನಂತರ ಓಬ್ಬಳೇ ನಿಮ್ಮ ಮನೆಗೆ ಬಂದೆ. ಈಗ ಹೇಳಿ, ನಮ್ಮಿಬ್ಬರಲ್ಲಿ ಯಾರು ಹೆದರುಪುಕ್ಕರು?
***
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ