‘ಸಂಪದ' ನಗೆ ಬುಗ್ಗೆ - ಭಾಗ ೬
ಕನಸು
“ಇನ್ನು ನನ್ನಿಂದ ಸಹಿಸಲು ಸಾಧ್ಯವಿಲ್ಲ. ನನ್ನ ಪತಿಗೆ ಡೈವೋರ್ಸ್ ಕೊಡ್ಲೇ ಬೇಕು.”
“ಯಾಕೆ ಏನಾಯ್ತು?”
“ನಿನ್ನೆ ಅವರು ನನ್ನ ಕನಸಿನಲ್ಲಿ ಸುಂದರಿಯೊಬ್ಬಳ ಕಾಲಿಗೆ ಮುತ್ತಿಡುವುದನ್ನು ಕಂಡೆ.”
“ಆದ್ರೆ ಅದು ಕನಸು"
“ನನ್ನ ಕನಸಿನಲ್ಲೇ ಅವರು ಅವಳ ಕಾಲಿಗೆ ಮುತ್ತು ಕೊಡುತ್ತಿರುವಾಗ, ಇನ್ನು ಅವರ ಕನಸಿನಲ್ಲಿ ಏನೇನು ಮಾಡ್ತಾರೋ!”
***
ಪವಾಡ
ಮಿತ್ರ: ನಿಮ್ಮ ಮನೆಯಲ್ಲಿ ಬಹಳಷ್ಟು ಇಲಿಗಳಿದ್ದುವಲ್ಲಾ, ಎಲ್ಲಿ ಹೋದವು?
ಗಾಂಪ: ಎಲ್ಲವೂ ಓಡಿಹೋದವು
ಮಿತ್ರ: ಅದೇಗೆ?
ಗಾಂಪ: ನನ್ನ ಹೆಂಡತಿ ಅಡುಗೆ ಮಾಡಿ, ಮರೆತು ಬಾಗಿಲು ತೆರೆದಿಟ್ಟು ಎಲ್ಲೋ ಹೋದಳು. ಅವಳು ಮಾಡಿದ್ದ ಅಡುಗೆಯನ್ನ ಇಲಿಗಳು ತಿಂದವು. ಅಂದೇ ಅವೆಲ್ಲಾ ಓಡಿಹೋದವು.
***
ಪರಿಹಾರ !
ಗಾಂಪ ಮೈಕೈಗೆಲ್ಲಾ ಬ್ಯಾಂಡೇಜ್ ಕಟ್ಟಿಕೊಂಡಿದ್ದನ್ನು ಗಮನಿಸಿದ ಅವನ ಗೆಳೆಯ “ಏನಯ್ಯಾ ಆಯ್ತು?” ಎಂದು ಪ್ರಶ್ನಿಸಿದ.
“ರೈಲು ಅಪಘಾತವಾಯ್ತು. ಗಾಯಾಳುಗಳಿಗೆ ಕೊಡುವ ಪರಿಹಾರ ಮೂಲಕ ನನಗೆ ಇಪ್ಪತ್ತೈದು ಸಾವಿರ, ನನ್ನ ಹೆಂಡತಿಗೆ ಐವತ್ತು ಸಾವಿರ ಬಂತು!” ಎಂದ ಗಾಂಪ.
“ಪಾಪ ! ಅಪಘಾತದಲ್ಲಿ ನಿನ್ನ ಹೆಂಡತಿಗೆ ತುಂಬಾ ಏಟಾಗಿತ್ತೇ?”
“ಹೌದು. ಅದು ಹೇಗೆಂದರೆ ಅಪಘಾತ ಆದ ಗಾಬರಿ ಸಮಯದಲ್ಲೂ ನಾನು ಸಮಯ ಪ್ರಜ್ಞೆ ಕಳೆದುಕೊಳ್ಳದೆ ಹೆಂಡತಿಗೆ ಏಟು ಕೊಟ್ಟಂತೆಯೂ ಆಯ್ತು, ಪರಿಹಾರ ಹಣ ಸಿಕ್ಕಿದಂತೆಯೂ ಆಯ್ತು ಎಂದಂದು ಕೊಂಡು ಅವಳಿಗೆ ತಿಳಿಯದಂತೆ ಸೂಟ್ ಕೇಸನ್ನು ಅವಳ ಕಾಲ ಮೇಲೆ ಎತ್ತಿ ಹಾಕಿದೆ.”
***
ಪಶ್ಚಾತ್ತಾಪ
ವಿವಾಹದ ರಜತ ಜಯಂತಿಯ ಸಮಾರಂಭ ಜರುಗುತ್ತಿತ್ತು. ಪತಿ ಮಹಾಶಯ ಗಾಂಪ ಒಂದು ಮೂಲೆಯಲ್ಲಿ ಉದಾಸೀನನಾಗಿ ಕುಳಿತಿದ್ದ.
“ಇಂದೇಕೆ ತುಂಬಾ ಉದಾಸೀನನಾಗಿದ್ದೀ. ಇಪ್ಪತ್ತೈದು ಸಫಲ ವೈವಾಹಿಕ ವರ್ಷಗಳನ್ನು ಕಳೆದೂ ಚಿಂತೆಯೇಕೆ?” ಎಂದು ಮಿತ್ರ ಕೇಳಿದ.
ಆಗ ಗಾಂಪ ನುಡಿದ “ಐದನೇ ವರ್ಷದ ವಾರ್ಷಿಕೋತ್ಸವದ ಸಮಯದಲ್ಲಿ ನಾನು ನನ್ನ ಹೆಂಡತಿಯನ್ನು ಕೊಲೆ ಮಾಡಲು ಯೋಚಿಸಿದ್ದೆ. ಆದರೆ ಕೊಲೆ ಮಾಡಿದರೆ ಇಪ್ಪತ್ತು ವರ್ಷ ಜೈಲುವಾಸ ಸಿಗುತ್ತೆ ಅಂತ ನನ್ನ ವಕೀಲ ಹೆದರಿಸಿದ... ಅಂದು ನಾನು ಧೈರ್ಯ ಮಾಡಿ ಕೊಲೆ ಮಾಡಿದ್ದಿದ್ದರೆ ಇಂದು ಬಿಡುಗಡೆಯಾಗಿ ಸ್ವತಂತ್ರನಾಗಿರುತ್ತಿದ್ದೆನಲ್ಲಾ” ಎಂದು ಯೋಚಿಸುತ್ತಿದ್ದೇನೆ!
***
ಮದುವೆ
“ಸುಮಿ, ನೀನು ಮೊದಲಿಗಿಂತಲೂ ಸುಂದರಿಯಾಗಿದ್ದೀಯಾ ಹೇಗೆ?” ಗಾಂಪ ತನ್ನ ಗೆಳತಿಯನ್ನು ಕೇಳಿದ.
“ಡಯಟ್ ಮಾಡ್ತಿದ್ದೀನಿ. ದಿನಕ್ಕೆ ಕೇವಲ ಮೂರು ಬ್ರೆಡ್ ಸ್ಲೈಸ್, ಮೂರು ಗ್ಲಾಸ್ ನೀರು ಮಾತ್ರ ತಗೋಳ್ತೀನಿ. ಅದನ್ನೇ ಅನುಗಾಲವೂ ಮುಂದುವರೆಸಬೇಕೂಂತಿನಿ.”
“ಹೌದಾ? ಹಾಗಾದ್ರೆ ನಿನ್ನ ಮದುವೆಯಾಗ್ಲಿಕ್ಕೆ ಅಡ್ಡಿಯಿಲ್ಲ.!”
***
ವಿಳಾಸ
ಗಾಂಪ: ಇಂದು ರಾತ್ರಿ ಸಿನೆಮಾಕ್ಕೆ ಹೋಗೋಣ. ಬರ್ತೀಯಾ?
ಸೂರಿ: ಟಾಕೀಸು ಬಹಳ ದೂರ ಇದೆಯಲ್ಲಾ, ನಿನ್ನ ಹತ್ತಿರ ಬೈಸಿಕಲ್ ಇದೆ. ನನ್ನ ಹತ್ತಿರ ಇಲ್ಲ ನೋಡು.
ಗಾಂಪ: ಡಬ್ಬಲ್ ರೈಡ್ ಮಾಡೋಣ ಆಯ್ತಾ? ಆದರೆ ಫಕ್ಕನೆ ಪೋಲೀಸ್ ಹಿಡಿದರೆ ಮಾತ್ರ ಕಷ್ಟ…
ಸೂರಿ: ಪೆದ್ದು! ಅದಕ್ಕೆ ಯಾಕೆ ಚಿಂತೆ ! ಹಿಡಿದರೆ ವಿಳಾಸ ಬದಲಿಸಿ ಹೇಳೋಣ. ನೀನು ನನ್ನ ವಿಳಾಸ ಕೊಡು, ನಾನು ನಿನ್ನ ವಿಳಾಸ ಕೊಡುತ್ತೇನೆ. !
***
(ಕೃಪೆ: ಗೆಳೆಯ ಗೆಳತಿಯರಲ್ಲಿ ಜೋಕುಗಳು ಪುಸ್ತಕ)
ಚಿತ್ರ ಕೃಪೆ: ಅಂತರ್ಜಾಲ ತಾಣ