‘ಸಂಪದ' ನಗೆ ಬುಗ್ಗೆ - ಭಾಗ ೮

‘ಸಂಪದ' ನಗೆ ಬುಗ್ಗೆ - ಭಾಗ ೮

ಲಂಚ್ ಬಾಕ್ಸ್

ಖೇಮು, ರಾಮು, ಸೋಮು ಒಂದೇ ಆಫೀಸಿನಲ್ಲಿ ಕೆಲಸ ಮಾಡ್ತಾ ಇದ್ರು. ಮೂವರೂ ಒಳ್ಳೆಯ ಗೆಳೆಯರು. ಹಾಗಾಗಿ ಮೂವರು ಪ್ರತಿದಿನ ಲಂಚ್ ಬ್ರೇಕ್ ನಲ್ಲಿ ಒಟ್ಟಿಗೇ ಕೂತು ಊಟ ಮಾಡ್ತಾ ಇದ್ರು. ಮೂವರೂ ತಮ್ಮ ತಮ್ಮ ಮನೆಯಿಂದ ಊಟವನ್ನು ಲಂಚ್ ಬಾಕ್ಸ್ ನಲ್ಲಿ ತರ್ತಾ ಇದ್ರು. ಅವರೆಲ್ಲರಿಗೂ ಒಂದು ವಿಷಯದ ಬಗ್ಗೆ ಕಿರಿಕಿರಿ ಆಗ್ತಾ ಇತ್ತು. ಸೋಮು ಅವತ್ತು ಕ್ಯಾಂಟೀನ್ ನಲ್ಲಿ ಕೂತು, ನನ್ ಹೆಂಡ್ತಿ ಬೆಳಿಗ್ಗೆ ಮಾಡಿದ ತಿಂಡಿನೇ ಲಂಚ್ ಗೂ ಹಾಕಿ ಕೊಡ್ತಾಳೆ. ಅದೂ ಬರೀ ಮೊಸರನ್ನ. ಹೆಂಗಪ್ಪಾ ತಿನ್ನೋದು ಅಂತ ತನ್ನ ಕಷ್ಟ ಹೇಳಿಕೊಂಡು, ನೋಡು, ನನ್ನ ಬಾಕ್ಸ್ ನಲ್ಲಿ ಇವತ್ತೂ ಮೊಸರನ್ನ ಇದ್ರೆ, ನಾನು ಈ ಬಿಲ್ಡಿಂಗ್ ಮೇಲಿಂದ ಹಾರಿ ಕೆಳಗೆ ಬಿದ್ದು ಸತ್ತೋಗ್ತೀನಿ ಅಂತ ಬಾಕ್ಸ್ ಓಪನ್ ಮಾಡಿದ. ಮೊಸರನ್ನ ಇತ್ತು. ರಾಮು ಮುಖ ನೋಡಿದ. ರಾಮು ಕೂಡಾ ಅದೇ ಮಾತನ್ನ ಹೇಳಿ, ನೋಡು, ಇವತ್ತೂ ನನ್ನ ಬಾಕ್ಸ್ ನಲ್ಲಿ ಚಿತ್ರಾನ್ನ ಇದ್ರೆ ನಾನೂ ಮೇಲಿಂದ ಬಿದ್ದು ಸಾಯ್ತೀನಿ ಅಂತ ಓಪನ್ ಮಾಡಿದ. ಚಿತ್ರಾನ್ನವೇ ಇತ್ತು. ಇವರಿಬ್ಬರ ನಂತರ ಖೇಮು ಕೂಡಾ, ಇವತ್ತೂ ನನ್ನ ಕ್ಯಾರಿಯರ್ ನಲ್ಲಿ ಉಪ್ಪಿಟ್ಟು ಇದ್ರೆ, ನಾನೂ ಸಾಯ್ತೀನಿ ಅಂತ. ತೆಗೆದು ನೋಡಿದ್ರೆ ಉಪ್ಪಿಟ್ಟೇ ಇತ್ತು. ಮೂವರೂ ಕಾರಣ ಬರೆದಿಟ್ಟು ಮೇಲಿನಿಂದ ಬಿದ್ದು ಸತ್ತು ಹೋದರು. ಪೋಲೀಸರು ಬಂದು ವಿಚಾರಣೆ ಮಾಡುವಾಗ ಸೋಮು ಹೆಂಡ್ತಿ, ಅಯ್ಯೋ ಅವರಿಗೆ ಮೊಸರನ್ನ ಕಂಡ್ರೆ ಇಷ್ಟ ಇಲ್ಲ ಅಂತ ನಂಗೊತ್ತಿರಲಿಲ್ಲ ಅಂದಳು. ರಾಮು ಹೆಂಡ್ತಿ ಅಯ್ಯೋ, ಅವರಿಗೆ ಚಿತ್ರಾನ್ನ ಕಂಡ್ರೆ ಇಷ್ಟ ಇಲ್ಲ ಅಂತ ಗೊತ್ತಿರಲಿಲ್ಲ ಅಂದ್ಳು. ಕೊನೆಗೆ ಖೇಮು ಹೆಂಡ್ತಿ ಹೇಳಿದ್ಳು ಅದೇನಾಯ್ತು ಅಂತಾನೇ ಗೊತ್ತಾಗ್ತಿಲ್ಲ, ದಿನಾಲೂ ಅವರ ಲಂಚ್ ಬಾಕ್ಸ್ ಅವರೇ ಮಾಡಿಕೊಂಡು ಬರ್ತಾ ಇದ್ರು. !

***

ನಾಟಕ

“ನೀನು ನಿನ್ನೆ ದಿನ ಎಲ್ಲೋ ಹೋದ ಹಾಗಿತ್ತಲ್ಲ?”

“ಹೌದು ನಾಟಕಕ್ಕೆ ಹೋಗಿದ್ದೆ. ‘ಗಂಡಸರೇ, ನೀವು ಹೆಂಗಸರ ದಾಸರಲ್ಲ' ಎನ್ನುವ ನಾಟಕ ತುಂಬಾ ಚೆನ್ನಾಗಿದೆ.”

“ಏನು ವಿಶೇಷ?”

“ವಿಶೇಷವೇನೂ ಇಲ್ಲ. ನನ್ನ ಹೆಂಡತಿ ಹೋಗಿ ಎಂದಳು. ನಾನು ಹೋಗಿದ್ದೆ ಅಷ್ಟೇ..."

***

ಸಮಯವೆಷ್ಟು?

“ಅಯ್ಯೋ ! ರಾತ್ರಿ ತುಂಬಾ ಹೊತ್ತಾಗಿದೆ. ಈಗ ಸಮಯ ಎಷ್ಟೀದ್ದೀತು...?” ಹರಟೆ ಹೊಡೆಯುತ್ತಿದ್ದ ಗಾಂಪನ ಸ್ನೇಹಿತ ಕೇಳಿದ.

“ಗಡಿಯಾರ ಕೆಟ್ಟಿದೆ. ಆದರೂ ತಾಳು ಹೇಳುವೆ" ಎನ್ನುತ್ತಾ ಗಾಂಪ ತಬಲಾ ಎತ್ತಿಕೊಂಡು ಬಾರಿಸತೊಡಗಿದ.

ತಕ್ಷಣ ನೆರೆಮನೆಯಾತ ಕೂಗಿದ. “ಲೋ ಮೂರ್ಖಾ ! ತಬಲಾ ನಿಲ್ಲಿಸು ರಾತ್ರಿ ಒಂದು ಗಂಟೆಯಾಗಿದೆ, ತಿಳಿಯೋದಿಲ್ವಾ?”

***

ನೋವು

ಗಾಂಪ: ಹೋಗಲಿ ಬಿಡಪ್ಪಾ, ಸಾವು ಎಲ್ಲರಿಗೂ ಬರುವಂಥದ್ದೇ ಅದಕ್ಕಾಗಿ ಎಷ್ಟು ಅಂತ ಅಳ್ತೀಯಾ?

ಸೂರಿ: ಏನು ಮಾಡಲಿ? ಈ ಹಿಂದೆ ನನ್ನ ತಾಯಿ ಸತ್ತಾಗ ಹೀಗೇ ದುಃಖಿಸುತ್ತಿದ್ದೆ, ಎಷ್ಟೋ ಮಹಿಳೆಯರು ‘ನನ್ನನ್ನೇ ನಿಮ್ಮ ತಾಯಿ ಅಂದುಕೊಂಡು ಸಮಾಧಾನ ಮಾಡಿಕೊಳ್ಳಿ’ ಅಂದರು. ನನ್ನ ಅಕ್ಕ ಸತ್ತಾಗಲೂ ಹೀಗೆಯೇ ಆಯಿತು.

ಗಾಂಪ: ಹೋಗಲಿ ಬಿಡು. ಹಿಂದಿನದನ್ನು ಯಾಕೆ ಜ್ಞಾಪಿಸಿಕೊಳ್ಳುತ್ತಿ?

ಸೂರಿ: ಅದೇ ನನಗೆ ಹೆಚ್ಚು ದುಃಖ ಕೊಡ್ತಿದೆ. ಈ ಸಲ ನನ್ನ ಹೆಂಡ್ತಿ ಸತ್ತಿದ್ದಾಳೆ. ‘ನನ್ನನ್ನೇ ನಿಮ್ಮ ಹೆಂಡ್ತಿ ಅಂದ್ಕೊಳ್ಳಿ’ ಎಂದು ಹೇಳುವವರು ಒಬ್ಬರೂ ಬೇಡವೇ?!

***

ಸಸ್ಪೆನ್ಸ್ ಕಾದಂಬರಿ

ಗಾಂಪ: (ಪುಸ್ತಕದ ಅಂಗಡಿಯಲ್ಲಿ) ಒಂದು ಒಳ್ಳೆಯ ಪತ್ತೇದಾರಿ ಮತ್ತು ಥ್ರಿಲ್ಲರ್ ಕಾದಂಬರಿ ಕೊಡಿ.

ಅಂಗಡಿಯವ: ಈ ಪುಸ್ತಕ ತೆಗೆದುಕೊಳ್ಳಿ ಸಾರ್! ಎಷ್ಟು ಸಸ್ಪೆನ್ಸ್ ಮತ್ತು ಥ್ರಿಲ್ಲಿಂಗ್ ಆಗಿದೆ ಅಂದ್ರೆ, ನಾಯಕನ ಹೆಂಡತಿನೆ ಇದನ್ನೆಲ್ಲಾ ಮಾಡಿದ್ದು ಅಂತ ಕೊನೆಯ ಪುಟ ಓದುವವರೆಗೂ ಗೊತ್ತಾಗೋದೆ ಇಲ್ಲ !

ಗಾಂಪ: ಈ ಪುಸ್ತಕ ಬೇಡವೇ ಬೇಡ.

ಅಂಗಡಿಯವ: ಯಾಕೆ ಸರ್? ನೀವು ಕೇಳಿದ ಸಸ್ಪೆನ್ಸ್ ಮತ್ತು ಥ್ರಿಲ್ಲಿಂಗ್ ಕಾದಂಬರಿ ಪುಸ್ತಕ ಸರ್, ಚೆನ್ನಾಗಿದೆ.

ಗಾಂಪ: ಸಸ್ಪೆನ್ಸ್ ಮತ್ತು ಥ್ರಿಲ್ಲಿಂಗ್ ವಿಷಯವನ್ನು ನೀನೇ ಹೇಳ್ಬಿಟ್ಟಿದ್ದಿಯಾ. ಇನ್ನು ಈ ಪುಸ್ತಕ ತಗೊಂಡೋಗಿ ಹೊಸದಾಗಿ ಏನನ್ನ ಓದಲಿ...?

***

ಕರೆಂಟ್ ಅಕೌಂಟ್

ಬ್ಯಾಂಕ್ ಮ್ಯಾನೇಜರ್: ಅಲ್ರೀ...ನಾನು ನಿಮಗೆ ಸುಲಭವಾದ ಸೇವಿಂಗ್ಸ್ ಅಕೌಂಟ್ ಖಾತೆ ಕೊಟ್ಟಿದ್ದೇನೆ ! ಆದ್ರೆ ನೀವು ಯಾಕೆ ಕರೆಂಟ್ ಅಕೌಂಟ್ ಖಾತೆನೇ ಬೇಕು ಅಂತ ಹಟ ಮಾಡ್ತಾ ಇದ್ದೀರಾ?

ಗಾಂಪ: ಅಯ್ಯೋ ಹಾಗೇನೂ ಇಲ್ಲ ಸರ್! ನಾನು ಮೆಸ್ಕಾಂ ನಲ್ಲಿ ಕೆಲಸ ಮಾಡ್ತಾ ಇದ್ದೇನೆ. ಅದಕ್ಕೆ ಸರ್!

***

(ಸಂಗ್ರಹ) ಗೆಳೆಯ ಗೆಳತಿಯರಲ್ಲಿ ಜೋಕುಗಳು