‘ಸಂಪದ' ನಗೆ ಬುಗ್ಗೆ - ಭಾಗ ೯೨

‘ಸಂಪದ' ನಗೆ ಬುಗ್ಗೆ - ಭಾಗ ೯೨

ಚಾಲಕನ ವೇತನ

ಬಾಸ್: ನನಗೆ ಒಬ್ಬ ಡ್ರೈವರ್ ಬೇಕು ಸ್ಟಾರ್ಟಿಂಗ್ ಎರಡು ಸಾವಿರ ರೂ. ಕೊಡ್ತೀನಿ

ಗಾಂಪ: ಏನ್ ಗ್ರೇಟ್ ಸರ್ ನೀವು ಕಾರ್‌ ಸ್ಟಾರ್ಟಿಂಗ್‌ ಮಾಡಲು ಎರಡು ಸಾವಿರ ಕೊಟ್ರೆ, ದಿನ ಪೂರ್ತಿ ಕಾರು ಓಡಿಸಲು ಎಷ್ಟು ಕೊಡುವಿರಿ?

***

ನಾನು ಯಾರು ಗೊತ್ತಾ?

ಗಾಂಪ ಕೆಲವೇ ದಿನಗಳ ಮುಂಚೆ ಆಫೀಸಿಗೆ ಸೇರಿರುತ್ತಾನೆ. ಕಾಫಿ ತರೋಕೆ ಆಫೀಸ್ ಬಾಯ್‌ಗೆ ಫೋನ್ ಮಾಡೋ ಬದಲು ತಪ್ಪಾದ ನಂಬರ್ ಡಯಲ್ ಮಾಡುತ್ತಾನೆ. ಫೋನ್ ಕರೆ ಬಾಸ್ ನಂಬರ್‌ಗೆ ಹೋಗುತ್ತದೆ.

ಗಾಂಪ: ಹಲೋ… ನನ್ನ ಕ್ಯಾಬಿನ್‌ಗೆ ಒಂದು ಕಾಫಿ ತಗೊಂಡ್ ಬಾ. ಎರಡು ನಿಮಿಷದಲ್ಲಿ ಇಲ್ಲಿರಬೇಕು.

ಬಾಸ್: (ಕೋಪ ನೆತ್ತಿಗೇರುತ್ತೆ) ಏಯ್… ಯಾರ ಹತ್ರ ಮಾತಾಡ್ತಾ ಇದ್ದೀಯ ಅಂತ ಗೊತ್ತ ನಿಂಗೆ?

ಗಾಂಪ: ಇಲ್ಲ.

ಬಾಸ್: ನಾನು ಈ ಆಫೀಸಿನ ಬಾಸ್!

ಗಾಂಪ: ಓಹ್ ಹೌದಾ? ನೀವು ಯಾರ ಹತ್ರ ಮಾತಾಡ್ತಾ ಇದ್ದೀರಾ ಅಂತ ಗೊತ್ತಾ ನಿಮ್ಗೆ?

ಬಾಸ್: ಇಲ್ಲ

ಗಾಂಪ: (ತಕ್ಷಣ ಫೋನ್ ಕಟ್ ಮಾಡಿ) ಅಬ್ಬಾ ಸದ್ಯ ಬಚಾವಾದೆ!

***

ಗಂಡಂದಿರು

ಪಕ್ಕದ ಮನೆ ವ್ಯಕ್ತಿ: ಏನಮ್ಮಾ ನಿನ್ನ ಗಂಡ ಚೆನ್ನಾಗಿದ್ದಾನಾ ?

ಶ್ರೀಮತಿ : ಏನ್ ಸ್ವಾಮಿ, ನನ್ನ ಗಂಡನನ್ನು ಏಕವಚನದಲ್ಲಿ ಹೇಳ್ತಾ ಇದ್ದೀರಾ?

ಪಕ್ಕದ ಮನೆ ವ್ಯಕ್ತಿ: (ಯೋಚಿಸಿ) ಕ್ಷಮಿಸು ತಾಯಿ ಗೊತ್ತಾಗಲಿಲ್ಲ, ನಿನ್ನ ಗಂಡಂದಿರೆಲ್ಲಾ ಚೆನ್ನಾಗಿದ್ದಾರಾ?

***

ಮಕ್ಕಳು

ಗಾಂಪ: ನಿಂಗೆ ಎಷ್ಟು ಮಕ್ಕಳು

ಸೂರಿ ಹನ್ನೆರಡು, ಹೆಂಡ್ತಿ ಮತ್ತೆ ಗರ್ಭಿಣಿ!

ಗಾಂಪ: ಅಷ್ಟೊಂದು ಮಕ್ಕಳಾ?

ಸೂರಿ: ಹೆಂಡ್ತಿನ ಖಾಲಿ ಹೊಟ್ಟೆಲಿ ಇರಲು ಬಿಡೋಲ್ಲ ಎಂದು ಮಾವನಿಗೆ ಮಾತುಕೊಟ್ಟಿದ್ದೇನೆ..

***

ಶಾಪಿಂಗ್ !

ಶ್ರೀಮತಿ: ಊಟ ಆಯ್ತಾ?

ಗಾಂಪ: (ಹೆಂಡತಿಯನ್ನು ರೇಗಿಸಲು) ಊಟ ಆಯ್ತಾ?

ಶ್ರೀಮತಿ: ನಾನು ನಿನ್ನನ್ನ ಕೇಳ್ತಿರೋದು.

ಗಾಂಪ: ನಾನು ನಿನ್ನನ್ನ ಕೇಳ್ತಿರೋದು.

ಶ್ರೀಮತಿ: (ಸ್ವಲ್ಪ ರೇಗಿ ) ನಾ ಹೇಳಿದ್ದನ್ನೇ ಕಾಪಿ ಮಾಡ್ತಿದೀರಾ?

ಗಾಂಪ: (ಇನ್ನೂ ರೇಗಿಸೋಣ ಅಂತ) ನಾ ಹೇಳಿದ್ದನ್ನೇ ಕಾಪಿ ಮಾಡ್ತಿದೀರಾ?

ಶ್ರೀಮತಿ: ಸರಿ ಬಿಡಿ. ಶಾಪಿಂಗ್ ಹೋಗೋಣ್ವಾ?

ಗಾಂಪ: ಹೇಯ್… ನಾನು ತಮಾಷೆ ಮಾಡ್ತಾ ಇದ್ದೆ. ನಂದು ಊಟ ಆಯ್ತು.

***

ಗಂಡ ಹೆಂಡತಿ ಜಗಳ

ಶ್ರೀಮತಿ: ನಿಮ್ಮನ್ನು ಮದುವೆಯಾಗೋ ಬದಲು ನಾನು ಒಬ್ಬ ರಾಕ್ಷಸನ ಮದುವೆ ಆಗಬೇಕಿತ್ತು.

ಗಾಂಪ: ಹಾಗೆಲ್ಲ ರಕ್ತ ಸಂಬಂಧದಲ್ಲಿ ಮದುವೆ ಆಗಬಾರದು ಕಣೇ.

***

ಜೀವಂತ

ಒಬ್ಬ ಸರ್ದಾರ್ ಜಿ ಹೆಂಡ್ತಿ ಪ್ರಜ್ಞೆ ತಪ್ಪಿ ಬಿದ್ಲು..

ಡಾಕ್ಟರ್ – ಆಕೆ ಸತ್ತಿದ್ದಾಳೆ…

ಆಕೆ ದೇಹವನ್ನು ಎತ್ತಿಕೊಂಡು ಹೋಗಿ ಅವಳ ಅಂತಿಮ ಸಂಸ್ಕಾರ ಮಾಡಲು ಸಿದ್ಧರಾದರು. ಆಕೆಯ ಚಿತೆಗೆ ಬೆಂಕಿ ಇಡುವ ವೇಳೆಗೆ ಅವಳು ಎದ್ದು ಕುಳಿತು ಅಯ್ಯೋ “ನಾನು ಜೀವಂತವಾಗಿದ್ದೀನಿ .. !!” ರೀ ಅಂದಳು..

ಸರ್ದಾರ್: ಸಾಕು ಬಾಯಿ ಮುಚ್ಚು, ನೀನೇನು ಡಾಕ್ಟರ್ ಗಿಂತ ಜಾಸ್ತಿ ತಿಳ್ಕೊಂಡು ಇದ್ಯಾ? ಬೇಗ ಬೆಂಕಿ ಇಡಿ, ಇಲ್ದೇ ಇದ್ರೆ ಇವಳು ಇನ್ನೂ ಮಾತಾಡ್ತಾನೇ ಇರ್ತಾಳೆ ಅಂದ..

***

ಕುದುರೆ ಮತ್ತು ಆನೆ

ಅಧ್ಯಾಪಕ: ಕುದುರೆ ಹಾಗೂ ಆನೆಗಳ ವ್ಯತ್ಯಾಸವೇನು?

ಗಾಂಪ- ಕುದುರೆಗಳಿಗೆ ಹಿಂದುಗಡೆ ಮಾತ್ರ ಬಾಲವಿರುತ್ತೆ, ಆದರೆ ಆನೆಗಳಿಗೆ ಎರಡು ಕಡೆ ಬಾಲವಿರುತ್ತೆ…

***

ಪ್ರೀತಿ

ಶ್ರೀಮತಿ: ನೀವು ನನ್ನನ್ನು ಎಷ್ಟು ಪ್ರೀತಿಸುತ್ತೀರಿ?

ಗಾಂಪ : ಷಹಜಹಾನ್ ಗಿಂತ ಹೆಚ್ಚಾಗೇ ಪ್ರೀತಿಸ್ತೀನಿ.

ಶ್ರೀಮತಿ: ಹಾಗಾದ್ರೆ ನಾನು ಸತ್ತ ಮೇಲೆ ನನಗೆ ನೀವು ಕೂಡಾ ತಾಜ್ ಮಹಲ್ ಅನ್ನು ನಿರ್ಮಾಣ ಮಾಡ್ತೀರಾ?

ಗಾಂಪ : ಅಯ್ಯೋ ಹುಚ್ಚಿ ನಾನು ಈಗಾಗಲೇ ಜಮೀನು ತಗೊಂಡಿದ್ದೀನಿ, ನೀನೇ ತಡ ಮಾಡ್ತಾ ಇದ್ಯಾ ಅಷ್ಟೇ..

***

ಮಾತೃಭಾಷೆ

ಗಾಂಪ: ಅಪ್ಪಾ, ಅಪ್ಪಾ.. ಈ ಅರ್ಜಿಯಲ್ಲಿ ‘ಮದರ್ ಟಂಗ್’ ಇರುವಲ್ಲಿ ಏನೆಂದು ಬರೆಯಲಿ?

ಅಪ್ಪ: ತುಂಬ ಉದ್ದದ ನಾಲಗೆ ಎಂದು ಬರೆ

***

ಹೊಸದಾಗಿ ಮದುವೆಯಾಗಿತ್ತು…

ಒಂದು ದಿನ ಬೆಳಿಗ್ಗೆ ಗಂಡ ಹೆಂಡತಿಯ ಮೇಲೆ ನೀರು ಎರಚಿದ…

ಶ್ರೀಮತಿ (ಕೋಪದಿಂದ ನಿದ್ರೆಯಿಂದ ಮೇಲೆದ್ದು) ಯಾಕ್ರೀ ನೀರು ಹಾಕಿದ್ದು ಏನಾಗಿದೆ ನಿಮಗೆ?

ಗಾಂಪ – ನಿಮ್ಮ ತಂದೆ, “ನನ್ನ ಮಗಳು ಹೂವಿನ ಮೊಗ್ಗಿನ ಹಾಗೆ, ಅದನ್ನು ಒಣಗದೇ ಇರೋ ಹಾಗೆ ನೋಡ್ಕೋ ಅಂದಿದ್ರಲ್ವ.. ಅದಕ್ಕೆ ಕಣೇ”

***

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ