‘ಹನಿಗಳು'
ಕವನ
ಧ್ಯೇಯ
ಸಿದ್ಧಾಂತ,
ಧರ್ಮಗಳ
ಪರಮ
ಧ್ಯೇಯ...
ಅರಳಿ
ನಗುವುದು;
ಕೆರಳಿ
ಸಾಯುವುದಲ್ಲ!
***
ಮಣಿ-ಕಿಂಕಿಣಿ
ಮಾತೃತ್ವವನು
ಪಡೆದು
ಉನ್ನತೋನ್ನತ
ದೇವತೆಯ ಸ್ಥಾನ
ಪಡೆದು ಬಿಡುವ
ಮಹಿಳಾ ಮಣಿ....
ಸಂಗಾತಿಯ
ಜೊತೆ ಮಾತ್ರ
ಭಿನ್ನಾಭಿಪ್ರಾಯಗಳ
ಚುಮುಕಿಸಿ
ಸಿಂಚನವನ್ನುಂಟು
ಮಾಡುವ ಕಿಂಕಿಣಿ!
***
ಮದ್ಯ-18...?
ಮುದ ನೀಡುವ
ಮದ್ಯಕೇಕೆ ನಿಷಿದ್ಧ?
ಅಬಾಲ ವೃದ್ಧರೆಲ್ಲರೂ
ತೆಗೆದುಕೊಳ್ಳಲಿ ಬಿಡಿ;
ಅಂತಿಷ್ಟು ವಯಸಿಗೆ
ಇಂತಿಷ್ಟು ಎಂದು
ನಿಗದಿ ಪಡಿಸಿ
ಮುಕ್ತ ಸಮಾಜವ
ನಿರ್ಮಾಣ ಮಾಡಿಬಿಡಿ...
ವಾವ್ ನಿಮಗೆ ಆದಾಯ
ಎಲ್ಲರಿಗೂ ಮೋಜು!
***
ಮಾವು-ಬೇವು
ಮಾವುಂಡು
ಬೇವುಣಲು
ಸಿದ್ಧನಿರು...
ಮಾವು-ಬೇವುಗಳೆರೆಡು
ಈ ಜೀವನದ
ಗುತ್ತಿಗೆದಾರರು!
ಎರಡೂ
ಪರಮಾವಶ್ಯತೆಗಳೇ
ಈ ಜೀವನಕೆ!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್