’ಅತ್ತೆಗೊಂದುಕಾಲ, ಸೊಸೆ.... ಕ್ಷಮಿಸಿ, ಇದಲ್ಲ ಮಹತ್ವದ್ದು ; ಈಗ ಕತ್ತೆಗೊಂದು ಕಾಲ ಬಂದಿದೆ !

’ಅತ್ತೆಗೊಂದುಕಾಲ, ಸೊಸೆ.... ಕ್ಷಮಿಸಿ, ಇದಲ್ಲ ಮಹತ್ವದ್ದು ; ಈಗ ಕತ್ತೆಗೊಂದು ಕಾಲ ಬಂದಿದೆ !

ಬರಹ

ಪ್ರಜಾವಾಣಿ ಫೋಟೋ ಗ್ಯಾಲರಿಯಲ್ಲಿ ಒಂದು ಗಮ್ಮತ್ತಿನ ಸಂಗತಿ ಇದೆ. ಅಹ್ಮದಾಬಾದ್ ನ ’ ಔಥಾ,’ ಎಂಬಲ್ಲಿ ಕತ್ತೆಗಳ ಮೇಳ ನಡೆಯಿತು. ಅದರಲ್ಲಿ ಭಾಗವಹಿಸಿದ್ದ ಕತ್ತೆಗಳನ್ನು ವೀಕ್ಷಿಸಲು ಹಲವಾರು ಜನ ಬಂದಿದ್ದರು. ಕತ್ತೆಗಳ ಖರೀದಿಗೆಂದು ಬಂದ, ಕತ್ತೆ ಅಲ್ಲ, ಕ್ಷಮಿಸಿ, ಗಾರ್ದಭ-ಗ್ರಾಹಕರು ಅವುಗಳನ್ನು ಪರೀಕ್ಷಿಸಿದರು. ವರ್ಷಕ್ಕೊಮ್ಮೆ ನಡೆಯುವ ಈ ವಿಶೇಷಮೇಳಕ್ಕೆ ತಮ್ಮೆಲ್ಲರಿಗೂ ಸ್ವಾಗತ ! ಹೆಣ್ಣು ಹೆಣ್ಣೆಂದು ಹಳಿಯುವರು ಕಣ್ಣುಕಾಣದ ಗಾವಿಲರು, ಎಂದು ಎಲ್ಲೋ ಸಂಚಿಹೊನ್ನಮ್ಮನವರ ಕೃತಿಯನ್ನು ಓದಿದ್ದೆ. ಆದರೆ, ಗಾರ್ದಭಮೇಳಕ್ಕೆ ಹೋಗಿಬರಲು ಅಡ್ಡಿಯೇನು ? ಕತ್ತೆ , ನನಗೆ ಅತಿ ಪ್ರಿಯ ಪ್ರಾಣಿಗಳಲ್ಲೊಂದು. ಎಂತಹ ಅವಮಾನಮಾಡಿ, ’ಧೂ ಕತ್ತೆ,’ ಎಂದು ಬೈದರೂ ಯಾವ ಪ್ರತಿಕ್ರಿಯೆಯನ್ನೂ ತೋರೆದೆ ತನ್ನ ಕರ್ತವ್ಯದಲ್ಲಿ ನಿರತರಾದ, ’ಕತ್ತೆಕೆಲಸಕ್ಕೆ,’ ಹೆಸರಾದ ಕತ್ತೆಯನ್ನು ನಾವು ಕಡಗಣಿಸುವುದೇಕೊ ಗೊತ್ತಾಗ್ತಾಇಲ್ಲ. ನನಗೇನಾದರೂ ಯಾರಾದರೂ, " ಏಯ್ ಕತ್ತೆ," ಎಂದರೆ, ’ಥ್ಯಾಂಕ್ಯೂ ಫಾರ್ ದ ಕಾಂಪ್ಲಿಮೆಂಟ್ ಸರ್,’ ಎನ್ನುತ್ತೇನೆ. ಅಷ್ಟಾದರೂ ಸಹಾನುಭೂತಿ ಬೇಡವೇ ಈ ಅತ್ಯುಪಯೋಗಿ ಪ್ರಾಣಿಗೆ ! ಹಾ, ಯಾಕೋ ಯಾವ್ ದೇವ್ರೂ ಕತ್ತೆನ ವಾಹನವಾಗಿ ಸ್ವೀಕರಿಸಿದಂತಿಲ್ಲ. ಛೇ.... ಭಾರಿ ಅನ್ಯಾಯ ಅಲ್ವೇ ? ಏನಂತೀರಾ ? ಅತಿ ಕಷ್ಟದ ಕೆಲಸ ಅಂದ್ರೆ, ಅದು ಕತ್ತೆಕೆಲಸ ಅಂತ ನಾವೆಲ್ಲಾ ಒಪ್ಕೊಳ್ತೇವೆ. ಅಬ್ಬಎಷ್ಟೊಂದ್ ಕಷ್ಟದ ಕೆಲ್ಸ ಇವತ್ತು ನಾನ್ ಮಾಡಿದ್ದು... ಅಂತ ಜಂಭ ಕೊಚ್ಕೊಂತೀವಿ. ಆದ್ರೆ, ಆ ಮಾತಿನ ಹಿಂದಿರೋ ಜೀವಿ-ಸನ್ಮಾನ್ಯ ಕತ್ತೆಯವರನ್ನು ಜ್ಞಾಪಿಸಿಕೊಳ್ಳುವ ಜಾಯಮಾನವೇ ನಮಗಿಲ್ಲವಲ್ಲ. ಇನ್ನು ಹಸುವಿಗೆ, ಗೋಮಾತೆ, ಹಸುವಿನಂತಹ ಮನಸ್ಸಿನವ[ಳು] [ನು], ಎಂದೆಲ್ಲಾ ಹೊಗಳಿ ಅಟ್ಟಕ್ಕೇರಿಸುತ್ತೇವೆ. ಆದರೆ ಕತ್ತೆಗೋ, ಅದರ ಸಹನಶೀಲತೆ, ಕಷ್ಟ ಸಹಿಷ್ಣುತೆ, ಕರ್ತವ್ಯನಿಷ್ಠೆ, ಪ್ರಾಮಾಣಿಕತೆ, ಗಳಿಗೆ ಒಂದು ಕಾಸಿನಷ್ಟೂ ಬೆಲೆಬೇಡವೆ. ನಾಯಿಯ ಪ್ರಾಮಾಣಿಕತೆಯನ್ನು ಕೊಂಡಾಡಿದ್ದೂ ಕೊಂಡಾಡಿದ್ದೇ. ದತ್ತಾತ್ರೇಯದೇವ ಅದನ್ನು ತನ್ನ ವಾಹನವನ್ನಾಗಿ ಆರಿಸಿಕೊಂಡಿದ್ದಾನೆ. ಯಾವ ಅರ್ಹತೆಯಮೇಲೆ, ಆತನೇ ಬಲ್ಲ ! ಆದರೆ ಕತ್ತೆಯವಿಶಯದಲ್ಲೇಕೆ ತಾರತಮ್ಯ ? ಬದಲಾದ ವಿಶ್ವದಲ್ಲಿ ಶ್ವೇತಭವನಕ್ಕೆ, ಕರಿಯ ಒಬಾಮ ಹೋಗಿ ದೇಶದ ಚುಕ್ಕಾಣಿಹಿಡಿದು ಆಡಳಿತ ನಡೆಸುತ್ತಾರೆ. [ಜನವರಿ, ೨೦, ೨೦೦೯ ರಂದು] ಆದರೆ ಕತ್ತೆಯ ಜೀವನದಲ್ಲಿ ಯಾವ ಬದಲಾವಣೆ-’ಛೇಂಜ್, ’ ಬೇಡವೇ ? ?

’ಕತ್ತೆವಾರ,’ ವನ್ನು ಸೆಲೆಬ್ರೇಟ್ ಮಾಡುವ ಆಸೆ; ಸಹಕರಿಸಿ :

ಅದಕ್ಕಾಗಿ, ನಾನು ಕತ್ತೆಯಬಗ್ಗೆ ಕನಿಕರ ಸೂಚಿಸುವ, ’ ಕತ್ತೆಯಬಳಗ,’ ವನ್ನೊಂದು ರಚಿಸಿದ್ದೇನೆ. ನಿಮ್ಮ ಅನಿಸಿಕೆಗಳನ್ನು ಈವಾರದಲ್ಲಿ ಕೊಡಿ. ’ ಕೆಳಗೆಕಂಡ ವಿಶಯಗಳನ್ನು ಆರಿಸಿಕೊಂಡು ಲೇಖನ ಬರೆಯಿರಿ.

೧. ’ಕತ್ಗ್ಯಾಕ್ ಹತ್ತಿ ಕಾಳಿನ್ ಮುಸ್ರೆ” !

೨.”ಕತ್ತೆ ತರ್ಹ ಕೆಲ್ಸ್ ಮಾಡಿದ್ರೆ ಸಾಕೇನ್ರಿ, ಸ್ವಲ್ಪಾನೂ ಬುದ್ಧಿ ಬೇಡ್ವಾ ’?

೩. ಸುಮ್ನೆ ಕತ್ತೆತರ್ಹ ಇದಾನೆ[ಳೆ] ತಲೇಲೇನ್ ಬುದ್ಧಿಯಿಲ್ಲಪ್ಪ”

೪.”ಕತ್ತೆಗಳಿರಾ, ನಿಮ್ಗ್ಯಾಕ್ ಅವೆಲ್ಲಾ ದೊಡ್ ವಿಶ್ಯಾ, ಹೇಳ್ದಷ್ಟ್ ಮಾಡ್ರಿ ’ ?

ಸದ್ಯಕ್ಕೆ ಸಾಕು ಅನ್ಸತ್ತೆ. ಯಾರ್ಗಾದ್ರೂ ಇನ್ನೂ ಶಿರ್ಷಿಕೆಗಳು ಹೊಳದ್ರೆ, ಸಂಕೋಚವಿಲ್ಲದೆ ಸೇರ್ಸಿ. ಸುಮ್ನೆ ಕತ್ತೆ ತರ್ಹ ನಿಂತಿರ್ಬೇಡಿ ! [ಕ್ಷಮಿಸಿ]

-ಚಿತ್ರ. ಪ್ರಜಾವಾಣಿಯ ಫೋಟೋಗ್ಯಾಲರಿಯಿಂದ.