’ಅರೆ ಓ ಸಾಂಬಾ’ ಮತ್ತು ’ಜೈರಾಮ್, ಜೈಜೈರಾಮ್!’
(ಸಂಪದಿಗ ಮಿತ್ರರಿಗೆ ನಮಸ್ಕಾರಗಳು. ನಿಮ್ಮಲ್ಲಿ ಅನೇಕರ ಅಭಿಮಾನಪೂರ್ವಕ ಒತ್ತಾಯಕ್ಕೆ ತಲೆಬಾಗಿ, ನಿಮ್ಮೊಡನೆ ನನ್ನ ಭಾವನೆಗಳನ್ನು ಹಂಚಿಕೊಳ್ಳುವುದನ್ನು ಮುಂದುವರಿಸುತ್ತೇನೆ. ನನ್ನ ಎಲ್ಲ ಬರಹಗಳಿಗೆ ನೀವು ದಾಖಲಿಸುವ ಎಲ್ಲ ಪ್ರತಿಕ್ರಿಯೆಗಳನ್ನೂ ನಾನು ಸದಾ ತಪ್ಪದೇ ಓದುತ್ತೇನೆ. ಹತ್ತು ಹಲವು ಸಾಮಾಜಿಕ ಕಾರ್ಯಗಳಲ್ಲಿ ನಾನು ತೊಡಗಿರುವುದರಿಂದ ಎಲ್ಲ ಪ್ರತಿಕ್ರಿಯೆಗಳಿಗೂ ಉತ್ತರಿಸಲಾಗದಿರುವುದಕ್ಕೆ ನನ್ನನ್ನು ಕ್ಷಮಿಸಬೇಕೆಂದು ಕೋರುತ್ತೇನೆ.)
ಅರೆ ಓ ಸಾಂಭಾ
"ಅರೆ ಓ ಸಾಂಭಾ, ಕಹ್ಞಾ ಗಯಾರೇ?"
"ದೂರ್, ಸರ್ಕಾರ್."
"ಕಿತ್ನೀ ದೂರ್?"
"ಪೂರೇ ಭೂಲೋಕ್ ಪಾರ್."
"ಕೌನ್ ಹೈ ರೇ ವಹ್ಞಾ?"
"ಮೇರಾ ಬಾಸ್ ಗಬ್ಬರ್ ಹೈ, ಸರ್ಕಾರ್."
"ಅಚ್ಛಾ, ಉಧರ್ ಶಾಂತಿ ಸೇ ರಹ್ನಾ. ಶೋಲೆ ಮತ್ ಜಲಾನಾ."
"ಠೀಕ್, ಸರ್ಕಾರ್."
ಜೈರಾಮ್, ಜೈಜೈರಾಮ್!
(ಕೇಂದ್ರ ಪರಿಸರ ಸಚಿವ ಜೈರಾಮ್ ರಮೇಶ್ ಅವರಿಗೆ ಸಮರ್ಪಿತ)
ವಿದೇಶಕ್ಹೋಗಿ ಸ್ವದೇಶವನ್ನು ತೆಗಳಿದೆಯಲ್ಲೋ ಜೈರಾಮ್, ಜೈಜೈರಾಮ್
ಚೀನಾ ರಾಜಧಾನೀಲಿ ಏನೋ ಬೊಗಳಿದೆಯಲ್ಲೋ ಜೈರಾಮ್, ಜೈಜೈರಾಮ್
ಭಾರತಕ್ಕೆ ನಿಮ್ಮಮೇಲೆ ಅನುಮಾನ ಅಂದ್ಯಲ್ಲೋ ಜೈರಾಮ್, ಜೈಜೈರಾಮ್
’ಪಂಚಶೀಲ’ಗೆಟ್ಟವರು ಅವರೆಂಬುದು ಗೊತ್ತಿಲ್ವೆ? ಜೈರಾಮ್, ಜೈಜೈರಾಮ್
ಟಿಬೆಟ್ ನುಂಗಿ ನಮ್ಮತ್ತ ನುಗ್ಗಿದ್ದು ಯಾರಪ್ಪಾ? ಜೈರಾಮ್, ಜೈಜೈರಾಮ್
ಅರುಣಾಚಲಪ್ರದೇಶದಮೇಲೆ ಕಣ್ಣು ಯಾರದು? ಜೈರಾಮ್, ಜೈಜೈರಾಮ್
ನಮ್ಮ ವೆಬ್ಸೈಟ್ ಹ್ಯಾಕ್ ಮಾಡ್ತಿರೋದ್ಯಾರು? ಜೈರಾಮ್, ಜೈಜೈರಾಮ್
ಇಂಥ ಚೀನಾದೆದ್ರು ಯಾಕ್ ಲೂಸ್ ಮಾತಾಡ್ದೆ? ಜೈರಾಮ್, ಜೈಜೈರಾಮ್
ಚೀನಾ ವಸ್ತುಗಳಿಗೆ ಭಾರತದಲ್ಲಿ ಬರವೆ? ಜೈರಾಮ್, ಜೈಜೈರಾಮ್
ಚೀನಾ ಮಾರ್ಕೆಟ್ಟನ್ನೇ ತರಿಸಿಟ್ಕೊಂಡಿದ್ದೀವಿ, ಜೈರಾಮ್, ಜೈಜೈರಾಮ್
ಭಾರತದ ಉದ್ಯಮಕ್ಕೇ ಏಟು ಕೊಟ್ಟಿದೆ ಚೀನಾ ಜೈರಾಮ್, ಜೈಜೈರಾಮ್
ಇಂಥ ಚೀನಾದ ಪರ ವಕಾಲತ್ತೇ ನಿನ್ನದು?! ಜೈರಾಮ್, ಜೈಜೈರಾಮ್
ಭೋಪಾಲ್ ಕಾನ್ವೊಕೇಷನ್ನಲ್ಲಿ ಗೌನ್ ಕಳಚಿಟ್ಟೆ ಜೈರಾಮ್, ಜೈಜೈರಾಮ್
ದೇಶಾಭಿಮಾನ ಮೆರೆದು ಮೆಚ್ಚುಗೆ ಗಳಿಸಿದೆ ಜೈರಾಮ್, ಜೈಜೈರಾಮ್
ಈಗೇನಾಯ್ತಪ್ಪ ನಿನಗೆ ಚೀನಾಕ್ಕೆ ಹೋದಾಗ ಜೈರಾಮ್, ಜೈಜೈರಾಮ್
ದೇಶದ ಮಾನ ಹರಾಜ್ಹಾಕೋಕ್ಹೊರಟ್ಯಲ್ಲೋ ಜೈರಾಮ್, ಜೈಜೈರಾಮ್!