’ಆರೇಂಜ್ ಕೌಂಟಿ’ ಯಲ್ಲಿನ , ’ಅವೆನ್ಯೂ ಆಫ್ ಆರ್ಟ್ಸ” ಗೆ, ಹೋಗುವ ಮಾರ್ಗ !

’ಆರೇಂಜ್ ಕೌಂಟಿ’ ಯಲ್ಲಿನ , ’ಅವೆನ್ಯೂ ಆಫ್ ಆರ್ಟ್ಸ” ಗೆ, ಹೋಗುವ ಮಾರ್ಗ !

ಬರಹ

ಕ್ಯಾಲಿಫೋರ್ನಿಯ, ಅಮೆರಿಕದ ಒಂದು ವಿಶೇಷ ವಸತಿಗೃಹಗಳ ನೆಲೆವೀಡು. ಹವಾಮಾನವಂತೂ ಭಾರತೀಯರಿಗೆ ಅತಿಯಾಗಿಮುದನೀಡುವ ಈ ಸ್ಥಳವನ್ನು ಭಾರತೀಯರೆಲ್ಲಾ ಅತಿಯಾಗಿ ಪ್ರೀತಿಸುತ್ತಾರೆ. ’ಸಾಫ್ಟ್ವೇರ್ ಉದ್ಯೋಗಮಂದಿರ,’ ಗಳಿಗೇನೂ ಕೊರತೆಯಿಲ್ಲ. ’ಸಿಲಿಕಾನ್ ವ್ಯಾಲಿ’, ಯೂ ಹತ್ತಿರ. ಕಾರ್ಪೊರೇಟ್ ಆಫೀಸ್ ಗಳಾದ,”ಮೈಕ್ರೊಸಾಫ್ಟ್,’ ’ಯಾಹೂ’, ’ಗೂಗಲ್,’ ಗಳ ಪ್ರಮುಖ ಕಚೇರಿಗಳಿರುವುದು ಇಲ್ಲೇ ! ವಿಶಾಲವಾದ ಮನೆಗಳ ಹಿಂದೆ-ಮುಂದೆ ಅಚ್ಚುಕಟ್ಟಾದ ಲಾನ್ ಗಳು, ಹೂದೋಟಗಳು, ಪಾರ್ಕಿಂಗ್ ಜಾಗಗಳು, ವಿಶಾಲವಾದ ದೊಡ್ಡ ರಸ್ತೆಗಳು, ಗಗನಚುಂಬೀ ಕಟ್ಟಡಗಳು, ನೀಲಗಿರಿಮರಗಳು, ಚೂಪಾದ ಎತ್ತರದ ಮರಗಳು, ನೀರಿನ ಕಾರಂಜಿಗಳು, ಅತಿ ಮುದವನ್ನು ನೀಡುತ್ತವೆ. ಪೆಸಿಫಿಕ್ ಸಾಗರದ ದಾರಿಗುಂಟ, ಅನೇಕ ಬೀಚ್ ಗಳನ್ನು ಕಾಣಬಹುದು. ಉದಾ : ಹಂಟಿಂಗ್ಟನ್ ಬೀಚ್, ಲಗುನಾ ಬೀಚ್, ನ್ಯೂಪೋರ್ಟ್, ಬೀಚ್, ಇತ್ಯಾದಿ.

-ಚಿತ್ರ, ನಾನುತೆಗೆದದ್ದು.