’ಆಲ್ಕಟ್ರಾಝ್’

’ಆಲ್ಕಟ್ರಾಝ್’

ಬರಹ

೧೮.೮೬ (೭.೬೩ ಹೆಕ್ಟೇರ್) ಎಕರೆಜಾಗದಲ್ಲಿ ೧೯೩೪ ನೆ ಇಸವಿಯಲ್ಲಿ (ಪೆಸಿಫಿಕ್ ಸಾಗರದ ನೀರಿನ ಮಧ್ಯೆ) ನಿರ್ಮಿಸಲಾಗಿರುವ ಲೈಟ್ ಹೌಸ್, ಹಾಗೂ ಭಾರಿಬಿಗಿ-ಬಂದೋಬಸ್ತ್ ಆದ ಮಿಲಿಟರಿಜೈಲು, ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿಯ ನೀರಿನಮಧ್ಯೆ ಇದೆ. ಈಗ ನಾವು,”ಫಿಷರ್ ಮ್ಯಾನ್ ವಾರ್ಫ್ ’ ಸ್ಥಳದಲ್ಲಿನ ಪವರ್ ಬೋಟ್ ನಲ್ಲಿ ಕುಳಿತು (೩೩ ನೇ ಪಿಯರ್ ಹತ್ತಿರದ), (ಈ ಭಾರಿ-ದೊಡ್ಡಜೈಲು’) ಆಲ್ಕಟ್ರಾಝ್’) ಪ್ರದೇಶಕ್ಕೆ ಹೋಗಬಹುದು. ದುರ್ಗಮವಾದ ಸ್ಥಳದಲ್ಲಿ ಕಟ್ಟಲ್ಪಟ್ಟಿದ್ದರಿಂದ, ಹಿಂದಿನಕಾಲದಲ್ಲಿ ಯಾರೂ ಇದರಹತ್ತಿರ ಸುಳಿಯಲೂ ಅಂಜುತ್ತಿದ್ದರು ! ಸನ್. ೨೦೦೦ ಇಸವಿಯಲ್ಲೂ, ಇಲ್ಲಿಯಾರೂ ವಾಸಿಸಿದ ದಾಖಲೆಗಳಿಲ್ಲ. ಪಶ್ಚಿಮ ಅಮೆರಿಕದ ಸಮುದ್ರ ತೀರದಲ್ಲಿ ಸ್ಥಾಪಿಸಿರುವ ’ಲೈಟ್ ಹೌಸ್’, ನಾವಿಕರಿಗೆ ಕೈಮರವಾಗಿ ಸುಮಾರುಸಮಯ ಸೇವೆಸಲ್ಲಿಸಿತ್ತು. ಅಮೆರಿಕನ್ ಯುವಜನಾಂಗಕ್ಕೆ ಅದು ಚಿರಪರಿತವಾಗಿರುವುದು, ಈ ದ್ವೀಪನಡೆಸಿಕೊಂಡುಬಂದ ’ರಾಕ್ ಸಂಗೀತ,’ ದ ಪರಂಪರೆಯಿಂದಾಗಿ!

ದಕ್ಷಿಣ ಕ್ಯಾಲೊಫೋರ್ನಿಯ ರಾಜ್ಯದ, ಸ್ಯಾನ್ ಫ್ರಾನ್ಸಿಸ್ಕೊ ಕೊಲ್ಲಿಯಲ್ಲಿ, ’ಸ್ಯಾನ್ ಫ್ರಾನ್ಸಿಸ್ಕೋ ನಗರದ ಮಧ್ಯಭಾಗದಲ್ಲಿ, ಪೆಸಿಕ್ ಮಹಾಸಾಗರದ ಮಧ್ಯದಲ್ಲಿ , ಎಲ್ಲರ ಆಕರ್ಷಣೆಯ ಕೇಂದ್ರವಾಗಿ ಶೋಭಿಸುತ್ತಿರುವ ಈ ಕಲ್ಲಿನಕೋಟೆ, ಬಹಳಕಾಲ ಮಿಲಿಟರಿ ಕಾರಾಗೃಹವಾಗಿತ್ತು. ಮತ್ತೆ ಅದು, ೧೯೫೩ ರರ ವರೆಗೆ, ’ಫೆಡರಲ್ ಪ್ರಿಸನ್,’ ಆಗಿ ಸುದ್ದಿಯಲ್ಲಿತ್ತು. ನಂತರ, ’National Recreation Area,’ ವಾಗಿ ಪರಿವರ್ತಿತವಾಯಿತು. ೧೯೭೬-೮೬ ರಲ್ಲಿ ಈಗ ಈ ಚಾರಿತ್ರ್ಯಿಕಸ್ಥಳದ, ಹಾಗೂ ಗೋಲ್ಡನ್ ಗೇಟ್ ಬ್ರಿಡ್ಜ್ ಆಡಳಿತವನ್ನು ’'National Park Service, ಸಂಸ್ಥೆ, ನಿರ್ವಹಿಸುತ್ತಿದೆ. ಅದರಿಂದಾಗಿ ಯಾತ್ರಿಗಳೆಲ್ಲಾ ಇದನ್ನು ತಮ್ಮ ಪ್ರವಾಸದಭಾಗವಾಗಿ ಯಾವಸಮಯದಲ್ಲಾದರೂ, ’ಫೆರ್ರಿಸರ್ವೀಸ್,’ ಮುಖಾಂತರಬಂದು, ಭೇಟಿಮಾಡಬಹುದು.

ಅಮೆರಿಕದ ಪಶ್ಚಿಮಗಡಿಯಲ್ಲಿ ಸಮುದ್ರತೀರಯಲ್ಲಿರುವ ’ಆಲ್ಕಟ್ರಾಝ್’ ನ್ನು, ಮೊದಲು ಅಮೆರಿಕದ ಮಿಲಿಟರಿಒಕ್ಕೂಟ, ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿತು. ಇಲ್ಲಿ ರಚಿಸಿರುವ ಸೀಬರ್ಡ್ ಕಾಲೋನಿಯಲ್ಲಿ, 'ವೆಸ್ಟರ್ನ್ ಗಲ್ ಪಕ್ಷಿಗಳು', 'ಕಾರ್ಮೊರ್ಯಾಂಟ್ಸ್ ಪಕ್ಷಿಗಳು,' 'ಎಗ್ರೆಟ್ಸ್ ಪಕ್ಷಿಗಳು' ಬಹುಸಂಖ್ಯೆಯಲ್ಲಿವೆ. ಹಳೆಯ ಭದ್ರವಾದಕಲ್ಲಿನಗೋಡೆಗಳಿಂದಕಟ್ಟಿದ ’ ಸೆಲ್’ ಗಳಲ್ಲಿ ಯುದ್ಧಕೈದಿಗಳು ಹೇಗೆವಾಸಿಸುತ್ತಿದ್ದರು ಎನ್ನುವುದನ್ನು, ಊಹಿಸಲೂ ಸಾಧ್ಯವಿಲ್ಲ. ಅನೇಕರು ಇಲ್ಲಿಂದ ಹೇಗೋತಪ್ಪಿಸಿಕೊಂಡು ಓಡಿಹೋದರು. ಮತ್ತೆಕೆಲವರು ಮಿಲಿಟರಿ ಅಧಿಕಾರಿಗಳ ಗುಂಡಿನೇಟಿಗೆ ಬಲಿಯಾಗಿ, ಪ್ರಾಣಕಳೆದುಕೊಂಡರು. ಇವೆಲ್ಲ ಮಾಹಿತಿಗಳನ್ನು ನಾವು ’ಹೆಡ್ ಫೋನ್” ಗಳಿಂದ ಪಡೆಯಬಹುದು. ಸುಮಾರು ೧೦೦ ಜನ ಪರ್ಯಟಕರಿಗೆ ಇಬ್ಬರಾದರೂ ಗೈಡ್ ಗಳು ಬೇಕಲ್ಲವೇ ! ಗೈಡ್, ಯೆಂದಕೂಡಲೇ ನಮ್ಮ ಟಿಕೆಟ್ ದರ, ಏರಿದಂತೆಯೇ ಅಲ್ಲವೇ. ಅದಕ್ಕೆ ಈತಂತ್ರ.