’ಈ ಸಂಭ್ರಮದ ನೃತ್ಯಕ್ಕೆ ಹೆಸರು ಬರೆದವರು ”, ದಕ್ಷಿನ ಆಫ್ರಿಕದ ಕಾಲ್ಚೆಂಡಿನಾಟದ, "ಶಬಾಲಾಲ" ರವರು !

’ಈ ಸಂಭ್ರಮದ ನೃತ್ಯಕ್ಕೆ ಹೆಸರು ಬರೆದವರು ”, ದಕ್ಷಿನ ಆಫ್ರಿಕದ ಕಾಲ್ಚೆಂಡಿನಾಟದ, "ಶಬಾಲಾಲ" ರವರು !

ಬರಹ

 

"ಕರಿಯರ ನಾಡು", "ಕಗ್ಗತ್ತಲ ಖಂಡ" ವೆಂದೇ ಹೆಸರುಮಾಡಿದ ಆಫ್ರಿಕಾದೇಶದ ದಕ್ಷಿಣ ಭಾಗದ  ಪ್ರಮುಖ ನಗರ, "ಜೊಹಾನ್ಸ್ ಬರ್ಗ್" ನ "ಅತಿದೊಡ್ಡಸ್ಟೇಡಿಯಂ, ಸೊವೆಟೊ", ನಲ್ಲಿ "ಫಿಫಾ ವಿಶ್ವಕಪ್" ನಿನ್ನೆ, ಶುಕ್ರವಾರ, ೧೧, ಜೂನ್, ೨೦೧೦ ರಂದು, ಅದ್ಧೂರಿಯಾಗಿ, ವಿಧ್ಯುಕ್ತವಾಗಿ, ಉಧ್ಗಾಟನೆಗೊಂಡಿತು. ಮೈದಾನದಲ್ಲಿ ತೋರಿಸಿದ ವೈಭವದ ಶಿಸ್ತುಬದ್ಧ-ನೃತ್ಯ ಸಂಗೀತಗಳ ಸಮಾವೇಶಗಳು ಲಕ್ಷಾಂತರ ಜನರ ಕಣ್ಮನಗಳನ್ನು ಸೂರೆಗೊಂಡು, ಫುಟ್ಬಾಲ್ ಪ್ರೇಮಿಗಳ ಭಾವುಕತೆ ಮುಗಿಲೆತ್ತರಕ್ಕೆ ಏರಿತ್ತು ! ಬಾಣ-ಬಿರುಸುಗಳು, ಮತ್ತು "ಸಭಿಕರ ತುತ್ತೂರಿಯ ರೋಮಾಂಚಕ ಜೇನುನೊಣದ ಜೇಂಕಾರ", ನೃತ್ಯ, ಸಂಗೀತ, ಒಂದು "ಹೊಸಲೋಕ"ವನ್ನೇ ಸೃಷ್ಟಿಸಿದವು. ಎಲ್ಲರ ಮಧ್ಯೆ ಮಂಡಿಸಿದ್ದ "ನೊಬೆಲ್ ಪುರಸ್ಕೃತ, ಡೆಸ್ಮಂಡ್ ಟುಟು" ರವರು ಸಂಗೀತದ ದನಿಗೆ ತಲೆಬಾಗಿ ನರ್ತಿಸಿದರು.

 

"ಅಮೆರಿಕದ ಚಿತ್ರತಾರೆ,  ಆರ್. ಕೆಲ್ಲಿ"ಯವರು ಮುಖ್ಯಾತಿಥಿಗಳಾಗಿದ್ದರು. "ಕೆಲ್ಲಿ-ಹಗ್ ಮಸೆಕೆಲ" ರವರ ಸಂಯೋಜನೆಯಲ್ಲಿ, ಆಫ್ರಿಕದ ೬ ರಾಷ್ಟ್ರಗಳು ಪಾಲ್ಗೊಂಡಿದ್ದು, ೧,೫೦೦ ಕ್ಕೂ ಹೆಚ್ಚು ಕಲಾವಿದರು, ಪ್ರದರ್ಶಿಸಿದ ನೃತ್ಯ-ಸಂಗೀತ, ಫುಟ್ಬಾಲ್ ಪ್ರಿಯರನ್ನು ಹೊಸ "ಕಾವ್ಯಲೋಕ"ಕ್ಕೆ ಕರೆದೊಯ್ಯಿತು. ಈ ಭವ್ಯ ಕ್ರೀಡೆಗೆ ಚಾಲನೆನೀಡಿದವರು, "ದ. ಆಫ್ರಿಕದ ಅಧ್ಯಕ್ಷ, ಜಾಕೊಬ್ ಜುಮಾ" ಮತ್ತು, ಫುಟ್ಬಾಲ್ ದಂತಕಥೆಯಾಗಿರುವ, "ಹಗ್ ಮಫೆಕಲರವರು.   ೩೨ ರಾಷ್ಟ್ರಗಳ ಫುಟ್ಬಾಲ್ ತಂಡಗಳು ನೆಟ್ಟ ೩೨ ಧ್ವಜಗಳು, ವೇದಿಕೆಯಲ್ಲಿ ಹಾರಾಡುವ ಭವ್ಯ-ದೃಷ್ಯ, ಇಡೀ ವಿಶ್ವವೇ ಅಲ್ಲಿ ಬಂದು ಪಾಲ್ಗೊಂಡು ಸಂತಸಿದಂತೆ, ಭಾಸವಾಯಿತು !

 

’ಸಾಕರ್ ಸಿಟಿ, ಜೊಹಾನ್ಸ್ ಬರ್ಗ್ ’ ನಲ್ಲಿ, ೨೦೧೦ ರ, ಜೂನ್,  ೧೧ ನೇ ತಾರೀಖು ಶುರುವಾದ,”ವಿಶ್ವ ಪುಟ್ಬಾಲ್ ಕಪ್ ಪ್ರತಿಯೋಗಿತೆಯ ’ ಮೊದಲ ಆಟ ನಡೆದದ್ದು, ಉದ್ಘಾಟನಾ ಸಮಾರಂಭದ ಬಳಿಕ; ಸ್ಪರ್ಧೆಯಲ್ಲಿ  ಮೊದಲ ಎರಡು ತಂಡಗಳಾದ ದ. ಆಫ್ರಿಕ ಹಾಗೂ ಮೆಕ್ಸಿಕೊ ಟೀಮ್ ಗಳ ಮಧ್ಯೆ ನಡೆದ”ಕಾಲ್ಚೆಂಡಿನಾಟದ ಸಮರ ’ದಲ್ಲಿ, ಎರಡು ತಂಡಗಳೂ ಒಂದೊಂದು ಗೋಲ್ ಬಾರಿಸುವುದರ ಮೂಲಕ”ಡ್ರಾ ಫಲಿತಾಂಷ ’ಕ್ಕೆ ಪಾತ್ರರಾದರು. ಆ ಸಮಯದಲ್ಲಿ  ಗೋಲ್  ಬಾರಿಸಿದ, ದ. ಆಫ್ರಿಕದ, ’ಶಬಾಲಾಲ ’ರೊಡನೆ ಅವರ ತಂಡಿಗರು,(ಎಡದಿಂದ ಎರಡನೆಯವರು) ಹೆಚ್ಚು ಗದ್ದಲ ಗೊಂದಲವಿಲ್ಲದರೀತಿಯಲ್ಲಿ ಸಂಯಮದ ಪ್ರತಿರೂಪಿಗಳಾಗಿ, ಚಿತ್ರದಲ್ಲಿ ತೋರಿಸಿರುವ ರೀತಿಯಲ್ಲಿ ಸಣ್ಣಗೆ ಸಾಗಿ ತಮ್ಮ ಗೆಲುವಿನ ಸಂತಸದ ಸಂಭ್ರಮವನ್ನು ಪ್ರಚಂಡ ಜನಸ್ತೋಮದೊಂದಿಗೆ ಹಂಚಿಕೊಂಡ ಸವಿನೆನಪಿನ ಗೆಲುವಿನ-ಕ್ಷಣಗಳು.

 

ದಕ್ಷಿಣ ಆಫ್ರಿಕದ ಕಣ್ಮಣಿ,  ೯೧ ವರ್ಷದ ಕರಿಯ ಪ್ರಥಮ ಅಧ್ಯಕ್ಷ, ಡಾ. ನೆಲ್ಸನ್ ಮಂಡೇಲಾ, ಬರಬೇಕಾಗಿತ್ತು. ಆದರೆ ಅವರ ಮರಿ ಮೊಮ್ಮಗಳು, "ಝನಾನಿ" ಕಾರ್ ಅಪಘಾತದಲ್ಲಿ ತೀರಿಕೊಂಡಿದ್ದರಿಂದ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಾಗಲು ಸಾಧ್ಯವಾಗಲಿಲ್ಲ.  ಈ ಘಟನೆ ಅಲ್ಲಿನ ಸಭಿಕರಿಗೆ ಸೂತಕದ ವಾತಾವರಣವನ್ನು ಸೃಷ್ಟಿಸಿತ್ತು. ತಮ್ಮ ದೇಶದ ಮೊಟ್ಟಮೊದಲ ವಿಶ್ವಕಪ್ ಕ್ರೀಡೆಯನ್ನು ಆಯೋಜಿಸಿದ ಹೆಮ್ಮೆಯ ಕ್ಷಣಗಳ ನಡುವೆ, ದುಗುಡ ಹಾಗೂ ವ್ಯಸನದ ಛಾಯೆ ಎಲ್ಲರ ಮುಖಗಳಮೇಲೂ ಆವರಿಸಿತ್ತು ! ಮೊದಲೇ, "ದ. ಆಫ್ರಿಕದ ಎಲ್ಲ ತೊಡರುಗಳೂ ಹೋಗಿ, ಯಾವಸಮಸ್ಯೆಯೂ ಕ್ರೀಡೆಗೆ ಬಾರದಿರಲೆಂದು ಹಾರೈಸಿದ್ದರು" 

 

- ಪ್ರಜಾವಾಣಿ ಫೋಟೊಗ್ಯಾಲರಿ ಸೌಜನ್ಯದಿಂದ.