’ಒಬಾಮ,’-ಕಪ್ಪು-ಅಮೆರಿಕನೊಬ್ಬನ ಬಿಳಿಧಾಮಕ್ಕೆ ಪಾದಾರ್ಪಣೆ !

’ಒಬಾಮ,’-ಕಪ್ಪು-ಅಮೆರಿಕನೊಬ್ಬನ ಬಿಳಿಧಾಮಕ್ಕೆ ಪಾದಾರ್ಪಣೆ !

ಬರಹ

ಅಮೆರಿಕದ ೪೪ ನೆಯ ಅಧ್ಯಕ್ಷರಾಗಿ, ಒಬಾಮ ರವರು, ಪ್ರಚಂಡ ಬಹುಮತದಿಂದ ಚುನಾಯಿತರಾಗಿ, ಒಂದು ವಿಕ್ರಮವನ್ನೇ ಸ್ಥಾಪಿಸಿದ್ದಾರೆ. ಅಮೆರಿಕಕ್ಕೆ ಒಂದು ಉಪಯುಕ್ತಬದಲಾವಣೆಯ ಅಗತ್ಯ ಅತಿಹೆಚ್ಚಾಗಿತ್ತು. ಯುದ್ಧ, ಯುದ್ಧ, ಯುದ್ಧಗಳಿಂದ ಝರ್ಝರಿತವಾಗಿದ್ದ ಅಮೆರಿಕನ್ ಸಮಾಜದಲ್ಲಿ ಹಣದುಬ್ಬರ ಬೇರೆ ತಲೆಯೆತ್ತಿ, ಸಹಸ್ರಾರು ಜನರ ಜೀವನ ನಿರ್ವಹಣೆಯ ಮಾರ್ಗಕ್ಕೆ ದಿಕ್ಕು ಕಾಣದಿದ್ದಾಗ, ಒಬಾಮ, ಒಬ್ಬ ಯುಗಪುರುರಷರಂತೆ, ಪ್ರವಾದಿಯಂತೆ, ಅಮೆರಿಕನ್ ಜನತೆಗೆ ಸಾಂತ್ವನ ನೀಡಲು ಬಂದರು.

ಈಗ ಲಭ್ಯವಾಗಿರುವ ಎಲೆಕ್ಷನ್ ತಥ್ಯಗಳು ಅಮೆರಿಕದ ಜನತೆಯ ಮನಸ್ಸಿನಲ್ಲಾಗಿರುವ ಆಘಾತ ಹಾಗೂ ಅಪಾರ ನಿರೀಕ್ಷೆಗಳ ಒಳನೋಟಗಳು ಎಲ್ಲರ ಗಮನೆಸೆಳೆಯುತ್ತಿವೆ. ಮೆಕೇನ್ ಒಬ್ಬ ಮಹಾ ಸಂಘಟಿಕ ನಿಜ. ಆದರೆ ಜಾರ್ಜ್ ಬುಷ್ ತರಹ, ಅವರೂ ಯುದ್ಧಪೀಪಾಸಿಗಳು. ಅವರ ಮಾತಿನಲ್ಲಿ ಅಮೆರಿಕನ್ ಎಕಾನಮಿ ಹೆಚ್ಚುಕಡಿಮೆ ಸರಿಯಾಗಿಯೇ ಇದೆ, ಎನ್ನುವ ಅರ್ಥ ಬರುವಂತೆ ಮಾತನಾಡುತ್ತಿದ್ದರು. ಜಾರ್ಜ್ ಬುಷ್ ರವರ ನೀತಿಗಳನ್ನು ಮುಂದುವರೆಸಿ, ಯುದ್ಧದ ನೀತಿಯನ್ನು ಸಾರುವ ಅವರ ಮಾತಿನ ಎಳೆಗಳು ಜನರಿಗೆ ರುಚಿಸಲಿಲ್ಲ.

ಅದರ ಬದಲಾಗಿ, ಒಬಾಮ, ಒಬ್ಬ ಕಪ್ಪು-ಆಫ್ರಿಕ-ಅಮೆರಿಕದ ಪ್ರಜೆ. ಒಳ್ಳೆ ವಿದ್ಯಾವಂತರು. ಮಾತಿನಲ್ಲಿ ಎಂತಹ ಕಲ್ಲನ್ನಾದರೂ ಬದಲಾಯಿಸುವ ಶಕ್ತಿಯುಳ್ಳವರು. ಮೇಲಾಗಿ ಯುವಜನರ ಕಣ್ಮಣಿಯಾಗಿರುವ ಅವರು ಭಾರತೀಯರಿಗೆ, ಹಾಗೂ ’ ಮಾರುತಿದೇವರಿಗೂ’ ಪ್ರಿಯರು ! ಒಟ್ಟಿನಲ್ಲಿ ಬದಲಾವಣೆಗಳಿಗೆ, ಹೊಸತನಕ್ಕೆ, ಅತಿಬೇಗ ಸ್ಪಂದಿಸುವ ಪ್ರವೃತ್ತಿಯ ಅಮೆರಿಕನ್ನರಿಗೆ, ಒಬಾಮ ರವರ ಮಾತಿನ ಮೋಡಿರುಚಿಸಿತು ! ಇದನ್ನು ಎಲೆಕ್ಷನ್ ಗೆ ಬಂದು ಮತಹಾಕಿದವರ ಅಪಾರ ಸಂಖ್ಯೆಯೇ ನಮಗೆ ತಿಳಿಸುತ್ತದೆ. ಭಾರತದ ಹಿತಾಸಕ್ತಿಗಳಿಗೆ ವಿರುಧ್ದವಾಗಿ ಹೋಗಲಾರರೆಂಬ ವಿಷಯವನ್ನು ಕಾದು ನೋಡಿದಾಗಲೇ ನಮಗೆ ತಿಳಿಯುವುದು ! ಸಹಸ್ರಾರು ಮಿಲಿಯನ್ ಜನರ ಆಶೆ, ಹಾಗೂ ಭರವಸೆಗೆ ಅವರು ತಮ್ಮ ಪೂರ್ತಿ ವೈಟ್ ಹೌಸ್ ನ ವಾಸದ-ಕಾಲಾವಧಿಯನ್ನು, ಮೀಸಲಾಗಿಡಬೇಕಾಗಿದೆ. ಎಕಾನಮಿ ಕೆಲವೇ ತಿಂಗಳುಗಳಲ್ಲಿ ವರ್ಷಗಳಲ್ಲಿ ಸರಿಹೋಗುವ ಪರಿಕ್ರಮವನ್ನು ಯಾರೂ ಎದುರುನೋಡಲಾರರು. ಜನರಿಗೆ ಸಮಾಧಾನಕರವಾಗಿ, ಹಲವಾರು ಸಮಸ್ಯೆಗಳನ್ನು ಎಲ್ಲರ ಸಲಹೆ, ಸಮ್ಮತಿಗಳನ್ನು ಪಡೆದು, ಒಂದು ನಿರ್ಧಾರವನ್ನು ಹೇಗೆ ತೆಗೆದುಕೊಂಡು ನೆಲಕಟ್ಟಿರುವ ದೇಶದ ಭವಿಷ್ಯವನ್ನು ಸುಧಾರಿಸುವರೋ ’ ಗಾಡ್ ಓನ್ಲಿ ಶುಡ್ ಟೆಲ್ ’ !

’God only We Trust,’ ಎನ್ನುವ ಅಮೆರಿಕನ್ನರ ಬಾಯಿ-ಮಾತು ಎಷ್ಟರಮಟ್ಟಿಗೆ ಕೆಲಸಮಾಡುತ್ತೋ, ಕಾದು ನೋಡಬೇಕಾಗಿದೆ !

" Only Time will tell "

ಎಲೆಕ್ಷನ್ ಪರಿಣಾಮವನ್ನು ಘೋಷಿಸಿದ ನಂತರ, ಚಿಕಾಗೋನಗರದ ಪ್ರಚಂಡ-ಜನಸ್ತೋಮವನ್ನುದ್ದೇಶಿಸಿ ಮಾತಾಡಿದ ಓಬಾಮರವರು, " ಜಾನ್ ಬ್ರೌನ್," ರವರ ಪ್ರಸಿದ್ಧ ಹಾಡಿನಿಂದ ಉದ್ಧರಿಸಿದ, ಆಯ್ದ ಕೆಲವು ವಾಕ್ಯಗಳು ಎಲ್ಲರಿಗೂ ಪ್ರಿಯವಾದವು. ಅವುಗಳನ್ನು ಕೆಳಗೆ ಕೊಡಲಾಗಿದೆ :

"Blow Ye the Trumpet, Blow," John Brown's favorite hymn:

Blow ye the trumpet, blow!

The gladly solemn sound

Let all the nations know,

To earth's remotest bound:

The year of jubilee is come!

The year of jubilee is come!

Return, ye ransomed sinners, home.

ಅಮೆರಿಕಕ್ಕೆ ಮಂಗಳವಾಗಲಿ. ಅವರಿಗೆ ದೇವರು ಸದ್ಬುದ್ಧಿಯನ್ನು ಕರುಣಿಸಲಿ. ವಿಶ್ವಕ್ಕೆ ಮಂಗಳವಾಗಲಿ !

-Courtesy, 'Rediffmail.om'