’ಕೊಲಂಬಿಯ ಪೋಸ್ಟ್ ಆಫೀಸ್’

’ಕೊಲಂಬಿಯ ಪೋಸ್ಟ್ ಆಫೀಸ್’

ಬರಹ

ಅಮೆರಿಕದಲ್ಲಿ ಬಂದು ಎರಡು ತಿಂಗಳಾಗಿವೆ. ನಾನು ಒಮ್ಮೆ ಮಿಸ್ಸೂರಿ ರಾಜ್ಯದ ’ಬೂನ್ ಕೌಂಟಿ,’ ಯಲ್ಲಿರುವ, ಒಂದು ಅಂಚೆ-ಕಚೇರಿಯ ದರ್ಶನಮಾಡಿ, ಸುಮಾರು ಎರಡುಗಂಟೆ ಅಲ್ಲೇ ಕುಳಿತು ವಿದ್ಯಮಾನಗಳನ್ನೆಲ್ಲಾ ವೀಕ್ಷಿಸುತ್ತಿದ್ದೆ.

ಅದರ ಒಂದು ಸಮೀಕ್ಷೆ ಹೀಗಿದೆ  :

ನೋಡಿ. ಕೊಲಂಬಿಯ ಹಳ್ಳಿಯ ಅಂಚೆ ಕಚೇರಿಯ ಕಟ್ಟಡವನ್ನು ೧೯೬೬ ರಲ್ಲಿ ಲಿಂಡನ್. ಬಿ. ಜಾನ್ಸನ್ ರವರು ಉದ್ಘಾಟಿಸಿದರು. ಅಂಚೆಕಚೇರಿಯನ್ನು ನೋಡಿದಾಗ ಆದ ಆನಂದ, ವಿಸ್ಮಯದಿಂದ ನನಗೆ ಒಮ್ಮೆಲೇ ದೀರ್ಘವಾದ ಉಸಿರುಬಿಟ್ಟಂತಾಗಿತ್ತು. ಕಾರಣ ಇಷ್ಟೆ. ನಾನು ನಮ್ಮ ಮುಂಬೈ ನ ಘಾಟ್ಕೋಪರಿನ ಅಂಚೆ ಕಚೇರಿಯನ್ನು ಇದಕ್ಕೆ ಹೋಲಿಸಿದಾಗ, ನಾಚಿಗೆಯಾಯಿತು. ಕೊಲಂಬಿಯ ಒಂದು ಹಳ್ಳಿ. ಎಂತಹ ಅಚ್ಚುಕಟ್ಟು. ಒಂದು ಯಾವುದೋ ನವ-ಬ್ಯಾಂಕಿಗೆ ಹೋದಂತಹ ಅನುಭವ ! ಅಲ್ಲಿನ ಕೌಂಟರಿನಲ್ಲಿ ಕುಳಿತ ನೌಕರರು ಎಷ್ಟು ವಿನಯ, ಹಾಗೂ ಪ್ರೀತಿಗಳಿಂದ ಎಲ್ಲರೊಡನೆ ನಡೆದುಕೊಳ್ಳುವ ರೀತಿ ಅದ್ಭುತವಾಗಿತ್ತು. ಅಲ್ಲಿನ ವ್ಯವಸ್ಥೆಗಳನ್ನು ನಾವು ಮೆಚ್ಚಲೇಬೇಕು.

ಪೋಸ್ಟ್ ಆಫೀಸ್ ಎಂದು ಯಾರೂ ಅದರ ವ್ಯವಸ್ಥೆಯನ್ನು ಅಲ್ಲಗಳೆಯುವುದಿಲ್ಲ. ಎಲ್ಲರೂ ಸುಮಾರು ನಮ್ಮದೇಶದಷ್ಟೇ ಹಳೆಯ ಪೋಸ್ಟ್ ಆಫೀಸ್ ನ್ನು ಆದರಿಸಿ ಗೌರವಿಸುತ್ತಾರೆ. ತಮ್ಮಕೆಲಸದ ಬಗ್ಗೆ ಆತ್ಮವಿಶ್ವಾಸ ಹಾಗೂ ಗೌರವವಿದೆ. ಕೆಲವು ಶಾಖೆಗಳನ್ನು ಉತ್ತಮಗೊಳಿಸಿದ್ದಾರೆ. ಎಲ್ಲೆಲ್ಲಿ ತೊಂದರೆಯಿದೆಯೋ ಅದನ್ನು ಸುಲಲಿತಗೊಳಿಸಲು, ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಸವಲತ್ತುಗಳನ್ನು ಒದಗಿಸುವ ಬಗ್ಗೆ ಅಲ್ಲಿ ಕೆಲಸಮಾಡುವ ನೌಕರರು ತಮ್ಮ ಸ್ವಬುದ್ಧಿಯಿಂದ ಕೆಲಸಗಳನ್ನು ನಿರ್ವಹಿಸುತ್ತಾರೆ.

ಬೇರೆ ಖಾಸಗೀ ಸಂಸ್ಥೆಗಳಿಗೆ ಹೋಲಿಸಿದರೆ, ಕಟ್ಟಡ ಅಷ್ಟೇನೂ ಆಧುನಿಕವಾಗಿಲ್ಲ. ಎಷ್ಟು ಅಚ್ಚುಕಟ್ಟು, ಶುಚಿ. ಏನಾದರೂ ಸಹಾಯಮಾಡಲು ಕಾತುರರಾಗಿರುವ ಸಿಬ್ಬಂದಿವರ್ಗ. ನನ್ನ ಕೆಲಸಮುಗಿಯಿತು. ಬೇರೆ ಕೌಂಟರ್ ಗೆ ಹೋಗಿ ಯೆನ್ನುವ ಮಾತೇಇಲ್ಲ. ಕ್ಯೂನಲ್ಲಿನ ಜನರೆಲ್ಲಾ ಹೋದಮೇಲೆ, ತಮ್ಮ ಗೆಳೆಯ/ಗೆಳತಿಗೆ ತಮ್ಮ ಮುಂದಿನಕೆಲಸದ ಬಗ್ಗೆ ಪೂರ್ಣ ಮಾಹಿತಿಕೊಟ್ಟು ಜವಾಬ್ದಾರಿಯನ್ನು ಒಪ್ಪಿಸಿ, ತಾವು ಮನೆಗೆ ಹೋಗುವ ದೃಷ್ಯವನ್ನು ಕಂಡಾಗ, ನಮಗೆ ಅಮೆರಿಕನ್ ಕಾರ್ಯ-ವೈಖರಿಯ ಸೂಕ್ಷ್ಮ ಪರಿಚಯವಾಗುತ್ತದೆ. ಯಾವ ವಲಯದಲ್ಲಾದರೂ ಅಮೆರಿಕನ್ ಕೆಲಸದ ವಾತಾವರಣ ಎಂತಹವರಿಗೂ ಸ್ಪೂರ್ಥಿದಾಯಕ.

ಇದೇ ವಿಷಯವನ್ನು ಮುಂದುವರೆಸಿ ಹೇಳಬಹುದಾದರೆ, ನಮ್ಮ ’ಅಕ್ಕ ವಿಶ್ವಕನ್ನಡ ಸಮ್ಮೇಳನ,’ ವನ್ನೇ ತೆಗೆದುಕೊಳ್ಳಿ. ಮೊದಲನೆಯದಿನ, ಆಗಸ್ಟ್, ೨೯ ರ ಸಾಯಂಕಾಲ, ಅಲ್ಲಿ ಹುಡುಕಿದರೂ ಕಾರ್ಯಕ್ರಮಗಳ ವೇಳಾಪಟ್ಟಿಗಳು ಸಿಕ್ಕಲಿಲ್ಲ. ಅದನ್ನು ನಾವು ಅಧಿಕಾರಿಗಳ ಗಮನಕ್ಕೆ ತಂದೆವು.

ಮಾರನೆಯದಿನವೇ ಬಗ್ಗೆ ವ್ಯವಸ್ಥೆ ಮಾಡಿ ಅದು ಎಲ್ಲರಿಗೂ ಲಭ್ಯವಾಗುವಂತೆ ಎಚ್ಚರಿಕೆ ವಹಿಸಿದ್ದರು. ಆಗಸ್ಟ್, ೩೦ ನೇ ತಾರೀಖು ಬೆಳಿಗ್ಯೆ ’ಬಫೆ ಪದ್ಧತಿ,’ ಯಲ್ಲಿ ನಾವೇ ಬಡಿಸಿಕೊಂಡು ತಿಂಡಿಯ ತಟ್ಟೆಗಳನ್ನು ಹಿಡಿದು ಬಂದಾಗ ವಿಶಾಲವಾದ ಹಾಲಿನಲ್ಲಿ ಸಾಮಾನ್ಯವಾಗಿ ಮುಂಭಾಗದಲ್ಲೇ ಜನರೆಲ್ಲಾ ಕೂಡುವ ಪದ್ಧತಿ. ಹಾಗಾಗಿ, ನಂತರ ಬಂದವರಿಗೆ ಕೂಡಲು ಜಾಗ ಸಿಗದೇ ಹೋಯಿತು. ಇದರ ಅರಿವು ಯಾರಿಗೂ ಮೊದಲು ಆಗಲಿಲ್ಲ.

ಮತ್ತೆ ಎರಡನೆಯ ಪಂಕ್ತಿಯಲ್ಲಿ ತಿಂಡಿಯ ಸಮಯದಲ್ಲಿ ಸ್ವಯಂಸೇವಕ/ಕಿಯರು ಸಾಲಾಗಿ ಬಂದು ಕೂಡುವ ವ್ಯವಸ್ಥೆಯನ್ನು ಅಚುಕಟ್ಟಾಗಿ ಅವರು ನಿರ್ವಹಿಸಿದರು. ಇಂತಹ ಮಾರ್ಪಾಟುಗಳು, ಬದಲಾವಣೆಗಳೂ ನಮಗೆ ಸಾಧ್ಯ.

ಆದರೆ ಭಾರತದಲ್ಲಿ ಪ್ರತಿಯೊಂದೂ ಸಮಸ್ಯೆಯೇ ! ಕೆಲಸಮಾಡಲು ಮನಸ್ಸಿಲ್ಲ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗಲ್ಲ. ಇತ್ಯಾದಿ ಇತ್ಯಾದಿಗಳು, ಪರ್ವತದಷ್ಟು ಅಗಾಧವಾಗುತ್ತವೆ. ನಮಗೂ ಇಂತಹ ವಾತಾವರಣಕ್ಕೆ ಸಮಯಕ್ಕೆ ಸರಿಯಾಗಿ ಸ್ಪಂದಿಸಿ, ನಮ್ಮ ಕೆಲಸದಲ್ಲಿ ಪರಿಪೂರ್ಣತೆಯನ್ನು ಪಡೆಯಲು ಸಾಧ್ಯವಿದೆ.