’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಬರಹ
ನನ್ನ ಹಿಂದಿನ ಬರೆಹವೊಂದಱಲ್ಲಿ ತಿಳಿಸಿದಂತೆ ದ್ರಾವಿಡ ಶಬ್ದ ತಮಿೞ್ಗೆ ಮಾತ್ರ ಅನ್ವಯಿಸುವುದಱಿಂದ ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎಂಬ ಶಬ್ದ ಬೞಸುವ ಬಗ್ಗೆ ತಮ್ಮ ಅಭಿಪ್ರಾಯ ಸಂಗ್ರಹಿಸಲು ಬಯಸುತ್ತೇನೆ. ತೆನ್ ಎಂದರೆ ತೆಂಕಣ (ಗಮನಿಸಿ ತೆಂಗಾಳಿ=ತೆಂಕಣ ಗಾಳಿ ಹಾಗೆಯೆ ತಂಗಾಳಿ ಶಬ್ದ ಕೂಡ ಇದೆ. ಅದಱರ್ಥ ತಣ್+ಗಾಳಿ=ತಂಗಾಳಿ ಅಂದರೆ ತಣ್ಣನೆಯ ಗಾಳಿ). ಆದ್ದರಿಂದ ದಕ್ಷಿಣ ಭಾರತೀಯ ಭಾಷೆಗಳಿಗೆ ’ತೆನ್ನುಡಿ’ ಎಂದು ಬೞಸಬಹುದೆಂದು ನನ್ನ ಅಭಿಪ್ರಾಯ. ತೆನ್+ನುಡಿ (ಅಂದರೆ ತೆನ್=ದಕ್ಷಿಣ ನುಡಿ=ಭಾಷೆ. ಹಾಗಾಗಿ ತೆನ್ನುಡಿ ಅಂದರೆ ದಕ್ಷಿಣ ಬಾರತೀಯ ಭಾಷೆಗಳು ಎಂದು ಕನ್ನಡದಲ್ಲಿ ಬೞಸಬಹುದೆಂದು ನನ್ನ ಅಭಿಪ್ರಾಯ).
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ