’ರಾತ್ರಿರಾಣಿ ಹೂವಿನಗಿಡ’

’ರಾತ್ರಿರಾಣಿ ಹೂವಿನಗಿಡ’

ಬರಹ

ಈ ಚಿತ್ರದಲ್ಲಿ ’ರಾತ್ರಿರಾಣಿ ಹೂವಿನ ಗಿಡ’, ವನ್ನು ತೋರಿಸಿದ್ದೇನೆ. ಈ ಹೂವಿನಗಿಡದ ಅನೇಕ ಪ್ರಭೇದಗಳಿವೆ. ಎಲೆಗಳ ರಚನೆ, ದಪ್ಪ, ವಿನ್ಯಾಸ, ಗಿಡದಎತ್ತರ, ಇನ್ನೂ ಅನೇಕ ವಿಷಯಗಳಲ್ಲಿ ಸಾಕಷ್ಟು ಅಂತರಗಳಿವೆ. ರಾತ್ರಿರಾಣಿ ಹೂವಿನ ಬಳ್ಳಿಯೂಇದೆ. ಇದು ಕ್ರೀಪರ್ ಹೂವಿನತರಹ, ಬಹಳನಾಜೂಕಾದ ಬಳ್ಳಿ. ಮನೆಯ ಮುಂದಿನ ಚಪ್ಪರಕ್ಕೆ ಹಬ್ಬಿಸಬಹುದು. ಸಾಮಾನ್ಯವಾಗಿ ಹೂಗಳೆಲ್ಲ ಬಿಳಿಯಬಣ್ಣದವು. ಪುಟ್ಟ-ಪುಟ್ಟ ಹೂಗಳು, ಗಂಟೆಯಾಕಾರವಾಗಿರುತ್ತವೆ. ಹೂವಿನಪರಿಮಳವಂತೂ, ಅತ್ಯಧಿಕವಾಗಿರುತ್ತದೆ. ಸಾಯಂಕಾಲ ೭ ಗಂಟೆಯಹೊತ್ತಿಗೆ ಅರಳಿ ತಮ್ಮ ಸುಗಂಧದಿಂದ ನೆರೆಹೊರೆಯ ಜನರಿಗೆಲ್ಲಾ ಮುದನೀಡುವ ಈ ಸಸ್ಯ, ಎಲ್ಲಪ್ರದೇಶಗಳಲ್ಲೂ ಚೆನ್ನಾಗಿ ಬೆಳೆಯುತ್ತದೆ.

ಮಹಾರಾಷ್ಟ್ರದಲ್ಲಿ, ಇದರಜೊತೆಗೆ ಪಾರಿಜಾತಪುಷ್ಪ, ಸಂಪಿಗೆ, ಚೆಂಡು ಹೂ, ಗುಲಾಬಿ, ನಾಗಲಿಂಗಪುಷ್ಪ, ಸುಗಂಧರಾಜ, ಕಣಗಿಲೆ, ಹಳದಿಹೂವು, ಇತ್ಯಾದಿ ಹೂಗಳು ಹೇರಳವಾಗಿಬೆಳೆಯುತ್ತವೆ. ರಸ್ತೆಗಳಲ್ಲೂ ಮಾವಿನಗಿಡ, ಬಾದಾಮಿಗಿಡಗಳನ್ನು ಕಾಣಬಹುದು. ತೆಂಗಿನಮರವೇನೋ ಬೆಳೆಯುತ್ತದೆ. ಆದರೆ ನಮ್ಮಲ್ಲಿದ್ದಂತೆ ಕಾಯಿಬಿಡುವುದಿಲ್ಲ.

-ಚಿತ್ರ-ವೆಂಕಟೇಶ್.