’ಶೈನಾ ಕೈಬರಹದ ಪತ್ರಿಕೆ,’ ನನ್ನ ಮೇಲೆ ಮೋಡಿ ಮಾಡಿತು!

’ಶೈನಾ ಕೈಬರಹದ ಪತ್ರಿಕೆ,’ ನನ್ನ ಮೇಲೆ ಮೋಡಿ ಮಾಡಿತು!

ಬರಹ

description of the hand written paper, Shaina

* ’ಆಡ ಮೋಡಿಗಲದಾ ರಾಮಯ್ಯ’, ತ್ಯಾಗರಾಜರ ಕೀರ್ತನೆಯ ’ಎಚ್. ಎಮ್. ವಿ. ರೆಕಾರ್ಡ್’ ಗಳು ನಮ್ಮ ಮನೆಯಲ್ಲಿದ್ದವು. ಶಾಸ್ತ್ರೀಯ ಸಂಗೀತವನ್ನು ನಮ್ಮ ತಂದೆಯವರು ಆಸ್ತೆಯಿಂದ ಆಲಿಸುತ್ತಿದ್ದರು. (ಇದು, ೧೯೩೧ ರಲ್ಲಿ)

songs that were played by record player

* ’ವೇದಶಾಸ್ತ್ರ ತತ್ವಾರ್ಥಮುಲು’, ತ್ಯಾಗರಾಜರ ಕೀರ್ತನೆಯ ’ಎಚ್. ಎಮ್. ವಿ. ರೆಕಾರ್ಡ್’ ಗಳು ನಮ್ಮ ಮನೆಯಲ್ಲಿದ್ದವು. ಶಾಸ್ತ್ರೀಯ ಸಂಗೀತವನ್ನು ನಮ್ಮ ತಂದೆಯವರು ಆಸ್ತೆಯಿಂದ ಆಲಿಸುತ್ತಿದ್ದರು. (ಇದು, ೧೯೩೧ ರಲ್ಲಿ)

* ನಾನು ಹುಟ್ಟಿದ್ದು, ೨೪, ಜನವರಿ, ೧೯೪೪ ರಲ್ಲಿ ಮತ್ತು ನನ್ನ ತಮ್ಮ ೨೯, ನವೆಂಬರ್, ೧೯೪೬ ರಲ್ಲಿ. ನಮ್ಮಿಬ್ಬರ ಜಾತಕವನ್ನು ಬರೆದವರು, ನಮ್ಮ ತಂದೆಯವರೇ ! ನಮ್ಮ ಮನೆಯ ಎಲ್ಲಾ ಪರಿವಾರದವರ, ಮತ್ತು ಹತ್ತಿರದ ಬಂಧುಗಳ ಜಾತಕಗಳನ್ನು ನಮ್ಮ ತಂದೆಯವರೇ ಬರೆದದ್ದು.

ಸದ್ದಿಲ್ಲದೆ ಕನ್ನಡಮ್ಮನ ಸೇವೆಮಾಡುತ್ತಿರುವ ತುಮಕೂರಿನ ಈ ಕನ್ನಡಭಿಮಾನಿ ಬಳಗಕ್ಕೆ ನಮೋ ನಮಃ ! ಬರೀ ಮಾತಾಡುವುದೊಂದನ್ನು ಬಿಟ್ಟರೆ ನಮ್ಮಲ್ಲಿ ಕೆಲಸಕ್ಕೆ ಇಳಿಯುವವರ ಸಂಖ್ಯೆ ತೀರಾ ಕಡಿಮೆ.

ಈ ಸಂದರ್ಭದಲ್ಲಿ ನಮ್ಮ ಹೆಮ್ಮೆಯ ’ಸಂಪದ ಕನ್ನಡ ತಾಣದ ರುವಾರಿ ಹರಿ,’ ಯವರನ್ನು ಎಷ್ಟು ಶ್ಲಾಘಿಸಿದರೂ ಕಡಿಮೆಯೆ ! ಒಬ್ಬ ವ್ಯಕ್ತಿ ಏನೆಲ್ಲಾ ಮಾಡಬಹುದು ಎನ್ನುವುದನ್ನು ಈ ಯುವ ಪ್ರತಿಭೆ ಸುಮಾರು ೫ ವರ್ಷಗಳಿಗಿಂತ ಹಿಂದಿನಿಂದ ತೋರಿಸುತ್ತಾ ಬಂದಿದ್ದಾರೆ. ಅವರಿಗೆ ನಾವು ಅಭಿನಂದಿಸೋಣ !

ಈ ಸಂದರ್ಭದಲ್ಲಿ ನನ್ನ ಜೀವನದಲ್ಲಿ ಅದೃಷ್ಯರಾಗಿ ಮಾರ್ಗದರ್ಶನ ಮಾದುತ್ತಿರುವ ಪೂಜ್ಯ ತಂದೆಯವರಾದ ದಿ. ಎಚ್. ವಿ. ರಂಗರಾಯರನ್ನು ನಾನು ದಿನದಲ್ಲಿ ಒಮ್ಮೆಯಾದರೂ ನೆನೆಯುತ್ತೇನೆ. ಪ್ರಾತಃಸ್ಮರಣೀಯರಾದ ಅವರು, ಒಬ್ಬ, ಜ್ಯೋತಿಷಿಗಳು, ಕನ್ನಡ, ತೆಲುಗು, ಮರಾಠಿ, ಇಂಗ್ಲೀಷ್ ಭಾಷೆಗಳಲ್ಲಿ ಗಮನಾರ್ಹವಾದ ಪಾಂಡಿತ್ಯವನ್ನು ತಮ್ಮ ಸ್ವಪರಿಶ್ರಮದಿಂದ ಹಾಸಲುಮಾಡಿಕೊಂಡಿದ್ದರು.

ಮುಂಬೈನಲ್ಲಿ ಸುಮಾರು ೧೯೪೩ ರವರೆಗೆ ಆಗಿನ ಕಾಲದ ಒಳ್ಳೆಯ ಬ್ರಿಟಿಷ್ ಕಂಪೆನಿಗಳಾಗಿದ್ದ, ’ವೋಲ್ಕಾರ್ಟ್ ಬ್ರದರ್ಸ್ ', ಮತ್ತು 'ಜಾಲಿಬ್ರದರ್ಸ್ ', 'ಪಟೇಲ್ ವೋಲ್ಕಾರ್ಟ್,' ಮುಂತಾದ ಕಂಪೆನಿಗಳಲ್ಲಿ ಏಜೆಂಟಾಗಿ ದುಡಿದವರು. ನಮ್ಮಜ್ಜನವರ ಆಸೆಯಂತ ಅವರು ನಡೆಸಿಕೊಂಡು ಬರುತ್ತಿದ್ದ ವಂಶಪಾರಂಪರ್ಯ ಶ್ಯಾನುಭೋಗಿಕೆ-ವೃತ್ತಿಯನ್ನು ಮುಂದುವರಿಸಲೋಸ್ಕರವಾಗಿಯೇ ಹೊಳಲ್ಕೆರೆಗೆ ಬಂದು ನೆಲೆಸಿದರು. ಆಗ ಅಲ್ಲಿ ನಾನು ಜನ್ಮಿಸಿದ್ದು.

ತಂದೆಯವರ ಸ್ಪುಟವಾದ ಮತ್ತು ಸುಂದರವಾದ ಹಸ್ತಾಕ್ಷರಗಳ ಬಗ್ಗೆ  ’ವಾರ್ಷಿಕ-ಜಮಾಬಂದಿ’ಸಮಯದಲ್ಲಿ ಅವರ ಮೇಲಿನ ಅಧಿಕಾರಿಗಳಾಗಿದ್ದ ಅಮಲ್ದಾರರು  ೧೦-೧೫ ನಿಮಿಷವಾದರೂ, ಹೊಗಳಿಕೆ ಮಾತುಗಳನ್ನು ಎಲ್ಲರ ಮುಂದೆಯೂ ಹೇಳುತ್ತಿದ್ದರು. ಆ ಮುತ್ತಿನಂತಹ ಅಕ್ಷರಗಳ ಸೌಂದಯವನ್ನು ನನ್ನ ಪ್ರೀತಿಯ ಅಣ್ಣ, ರಾಮಕೃಷ್ಣರ ಬರಹಗಳಲ್ಲೂ ನಾವು ಕಂಡೆವು. ಇದೇ ನಮಗೆಲ್ಲಾ ಪ್ರೇರಣೆಯೆಂದರೆ ಆಶ್ಚರ್ಯವೇನಲ್ಲ !

 

* ಪ್ರತಿಜಾತಕನಿಗೂ ಸಿಗತಕ್ಕ ಫಲಾಫಲವಿಚಾರಗಳನ್ನು " ದಶಾಭುಕ್ತಿ ವಿಚಾರ" ವೆಂಬ ಶೀರ್ಷಿಕೆಯಡಿಯಲ್ಲಿ ಸಂಕ್ಷಿಪ್ತವಾಗಿ ದಾಖಲಿಸುತ್ತಿದ್ದರು.