’ಸಂಪದ’-ಸಂಕಲ್ಪ
ಬರಹ
’ಸಂಪದ’ದಲ್ಲಿ
Some ಪದ ಬರೆಯದಿರೋಣ
ಕನ್ನಡದ
ಸಂಪದದ ದೃಷ್ಟಿಯಿಂದ
ಬರೆಯೋಣ
ಅಕ್ಷರಲೋಕದ
ಸಂಪದ ನಮ್ಮ ಬರವಣಿಗೆ
ಆಗಲೆಂದು ಬಯಸೋಣ
ಬರೆದೋದಿ ಸ್ನೇಹ-
-ಸಂಪದ ಗಳಿಸೋಣ
’ಸಂಪದ’ವನ್ನು ಬೆಳೆಸೋಣ
Sum ಪದ ಇಷ್ಟೆ,
Some ಪದ ಹಾಡದಿರೋಣ
ಇಲ್ಲಿ
ಅರ್ಥಪೂರ್ಣ ನುಡಿ-
-ಸಂಪದ ಮೆರೆಯೋಣ
ಓದುಗರು
’ಸಾರ್ಥಕ’ ಎನ್ನುವಂತೆ
’ಸಂಪದ’ಕ್ಕೆ
ಬರೆಯೋಣ
(ಸಂಪದ = (೧) ಏಳಿಗೆ (೨) ಐಶ್ವರ್ಯ)
(ಪದ = (೧) ನುಡಿ (೨) ಹಾಡು)