’ಸೀಗಲ್ ’ ಗಳಿಗೂ ಮಿಚಿಗನ್ ಸರೋವರ ಅತಿ-ಪ್ರಿಯ !

’ಸೀಗಲ್ ’ ಗಳಿಗೂ ಮಿಚಿಗನ್ ಸರೋವರ ಅತಿ-ಪ್ರಿಯ !

ಬರಹ

ಈ ಚಿತ್ರ ತೆಗೆಯಲು ನಾನು ಸ್ವಲ್ಪ ಸರ್ಕಸ್ ಮಾಡಬೇಕಾಯಿತು. ಎಷ್ಟೇ ಆಗಲಿ ಪಕ್ಷಿಗಳು ಯಾವದೇಶದಲ್ಲಿದ್ದರೂ ಅವು ಪಕ್ಷಿಗಳೇ ! ಆದರೆ ಸೀಗಲ್ ಪಕ್ಷಿಗಳು ನಮ್ಮಲ್ಲಿ ಕಡಿಮೆಯೆಂದು ನನ್ನ ಅನಿಸಿಕೆ. ಅಥವಾ ಚೆನ್ನೈನಲ್ಲಿದ್ದರೂ ಇರಬಹುದು. ಮುಂಬೈನಲ್ಲಿ ಇದ್ದಂತಿಲ್ಲ. ನಾನು ಹತ್ತಿರದಲ್ಲೇ ಹೋಗಿ ಅದರ ಚಿತ್ರವನ್ನು ಪಡೆದು, ಮತ್ತೆಮತ್ತೆ ಕ್ಲೋಸ್ ಅಪ್ ದೃಷ್ಯತೆಗೆಯುವಾಗ ಹಾರಿಹೋದ ಸೀಗಲ್, ನಾನು ಹೋಗಿ, ಪಕ್ಕದ ಕಟ್ಟೆಯಮೇಲೆ ಕುಳಿತಾಗ, ಅದೂ ಲಾಂದ್ರದ-ಕಂಬದಮೇಲೆ ಆಸೀನವಾಗುತ್ತಿತ್ತು. ಇದೇತರಹ ನಿರಂತರವಾಗಿ ಅದನ್ನು ಅಟ್ಟಿಸಿಕೊಂಡು ಹೋಗಿ, ಹೋಗಿ ’ಸಾಕುಸಾಕಾಯಿತು. ಕೊನೆಗೆ ’ಝೂಮ್,’ ಮಾಡಿ ಚಿತ್ರತೆಗೆದಿದ್ದಾಯಿತು. ನಾವು ಸ್ಯಾನ್ ಫ್ರಾನ್ಸಿಸ್ಕೊ ನಗರದ ”ಫಿಶರ್ ಮನ್ ವಾ ರ್ಫ್, ’ ನ ಬಳಿಯೂ ಹೀಗೆ ತಿಣುಕಬೇಕಾಯಿತು. ಪವರ್ ಬೋಟ್ ನಲ್ಲಿ ಸಮುದ್ರದಮೇಲೆ ಹೋದಾಗ, ಅದೇ ಸೀಗಲ್ ಗಳು ಮುತ್ತಿಗೆಹಾಕಿ ಅಲ್ಲಲ್ಲೇ ಸ್ಟಿಮರ್ ಬೋಟ್ ಬಳಿ, ’ ಪಕ್-ಪಕ್,’ ಯೆಂದು ಹಾರಾಡುತ್ತಿದ್ದವು. ಗಾಳಿಯಲ್ಲಿ ಹೆಲಿಕಾಪ್ಟರ್ ತರಹ ನಿಂತು ಹಾರುವ ಅವುಗಳ ಹಾರಾಟ, ಬಹಳ ಮುದತರುತ್ತಿತ್ತು. ಮಕ್ಕಳಂತೂ ಅವುಗಳನ್ನು ಕರೆದು ಕೈನಲ್ಲಿ ಕಾಳುಗಳನ್ನು ಹಿಡಿದು ನಿಲ್ಲುತ್ತಿದ್ದರು. ನಾನು ಅನೇಕ ಫೋಟೋಗಳನ್ನು ತೆಗೆದೆ. ಅವು ಮೋಟರ್ ಮನ್ ನ ಕ್ಯಾಬಿನ್ ಬಳಿ ಹಾರುವ ದೃಷ್ಯ, ನಮಗೂ ಎನೋ ಒಂದು ’ಎಕ್ಸೈಟ್ ಮೆಂಟ್,’ ತರುತ್ತಿತ್ತು. ಅದೇವೇಳೆಗೆ ’ಗೋಲ್ಡನ್ ಬ್ರಿಡ್ಜ್ ,’ ಹತ್ತಿರ-ಹತ್ತಿರ ಬರುತ್ತಿತ್ತು. ಆದರೆ, ಯಾವುದೂ ಸ್ಪಷ್ಟವಿಲ್ಲ. ಮಸುಕು-ಮಸುಕು. ಕಾವಳ, ಅಥವಾ ಮಂಜು ಅಲ್ಲೆಲ್ಲಾ ಆವರಿಸಿತ್ತು. ಸುಮಾರು ಒಂದೂವರೆಗಂಟೆಗಳ ಪ್ರಯಾಣ ನಮ್ಮ ಜೀವನದಲ್ಲಿ ಮರೆಯಲು ಸಾಧ್ಯವೇ ಇಲ್ಲ. ಒಂದು ರಸಾನುಭವ !

ಅದರೆ, ಇಲ್ಲಿ ಯಾವ ಅಂತಹ ಮಸುಕು, ಕಾವಳ, ಮಂಜಿಲ್ಲ. ಎಲ್ಲಾ ನಿಚ್ಚಳವಾಗಿದೆ. ಇದೊಂದು ಬೇರೆತರಹದ ನೈಜ-ಸನ್ನಿವೇಶವೆನ್ನಿಸಿದೆ.