’ಸೇಂಟ್ ಲೂಯಿಸ್ ಆರ್ಚ್’ ನಿಂದ ಕೆಳಗೆ ಕಾಣಿಸುವ ಸುಂದರ ನೋಟ !

’ಸೇಂಟ್ ಲೂಯಿಸ್ ಆರ್ಚ್’ ನಿಂದ ಕೆಳಗೆ ಕಾಣಿಸುವ ಸುಂದರ ನೋಟ !

ಬರಹ

ಅಮೆರಿಕದ ಮಿಸ್ಸೂರಿರಾಜ್ಯ, ಚಾರಿತ್ರ್ಯಿಕವಾಗಿ ಸಾಂಸ್ಕೃತಿಕ, ಸಂಪದ್ಭರಿತವಾದ ರಾಜ್ಯಗಳಲ್ಲೊಂದು. ಇದು 'ಹ್ಯಾರಿ ಟ್ರೂಮನ್' ನಂತಹ ಅಮೆರಿಕನ್ ಅಧ್ಯಕ್ಷರ ತವರುಮನೆ ; ’ವೈಲ್ಡ್ ವೆಸ್ಟ್’ ಎಂದು ಅನೇಕರು ಕರೆದು, ಅದರಬಗ್ಗೆ ಹಲವಾರು ದಶಕಗಳಕಾಲ ವಿಶ್ವದ ಜನರೆಲ್ಲರ ಗಮನಸೆಳೆದ, ಹಾಗೂ ಒಂದು ’ತಲೆಬಾಗಿಲಿನ ತರಹ ಸೆಟೆದೆದ್ದುನಿಂತ ಸೊಗಸಿನತಾಣ ! ಚಾರ್ಲ್ಸ್ ಲಿಂಡ್ಬರ್ಗ್ ರ ’ಸ್ಪಿರಿಟ್ ಆಫ್ ಸೇಂಟ್ ಲೂಯಿಸ್’, ಯೆಂಬ ಒಮ್ಮೆಲೇ ಎಲ್ಲೂ ನಿಲ್ಲದೆ ಅಟ್ಲಾಂಟಿಕ್ ಮಹಾಸಾಗರವನ್ನು ವಿಮಾನದಲ್ಲಿ ಹಾರಿಮುಗಿಸಿದ ಸನ್ನಿವೇಶವನ್ನು ಸೃಷ್ಟಿಸಿದ ಹೆಮ್ಮೆ, ಈ ರಾಜ್ಯಕ್ಕಿದೆ.

ಈ ಮಹಾಪ್ರದರ್ಶನಕ್ಕೆ ಆರ್ಥಿಕನೆರವು ನೀಡಿದವರು, 'ಸೇಂಟ್ ಲೂಯಿಸ್', ನ ಶ್ರೀಮಂತ ವರ್ತಕರುಗಳು. ಅಂದಿನದಿನಗಳಲ್ಲಿ, ಫರ್, ಹಗೂ ಚರ್ಮದ ಸಾಮಾನುಗಳ ಮಾರಾಟ ಮತ್ತು ಸಾಗಾಣಿಕೆಗೆ ಹೆಸರಾದ ಊರಿದು. ಥಾಮಸ್ ಜಫರ್ಸನ್, ಅಬ್ರಾಹಮ್ ಲಿಂಕನ್ ರಂತಹ, ಮಹಾದೇಶಭಕ್ತನಾಯಕರ ನೆಲೆಬೀಡು. ಎರಡನೇ ಮಹಾ ವಿಶ್ವ ಯುದ್ಧದ ಸಮಯದಲ್ಲಿ ಯಜಮಾನಿಕೆವಹಿಸಿಕೊಂಡು, ಬ್ರಿಟನ್ ದೇಶವನ್ನು ಸೋಲಿನ ಸುಳಿಯಿಂದ ಬಿಡಿಸಿ ಹೊರತಂದ, ಅಪ್ರತಿಮವೀರನಾಯಕ, ದೇಶಪ್ರೇಮಿ, ರಾಷ್ಟ್ರನಾಯಕ, ’ವಿನ್ಸ್ಟನ್ ಚರ್ಚಿಲ್’ ರ ಸ್ಮಾರಕ, ಹಾಗೂ ಅವರ ಭಾಷಣಗಳ ವಸ್ತುಸಂಗ್ರಹಾಲಯ, ಪುಸ್ತಕಭಂಡಾರವಿರುವುದು, ಈರಾಜ್ಯದ ಪುಟ್ಟಹಳ್ಳಿ ’ಫುಲ್ಟನ್,’ ನ, ’ವೆಸ್ಟ್ ಮಿನ್ಸ್ಟರ್ ವಿಶ್ವವಿದ್ಯಾಲಯ’ ದ ಪ್ರಾಂಗಣದಲ್ಲಿಯೆ ! ಮಾಜಿ ಅಮೆರಿಕನ್ ಅಧ್ಯಕ್ಷ, ಥಾಮಸ್ ಜಫರ್ಸನ್ ರವರು, ಲ್ಯೂಸಿಯಾನ ರಾಜ್ಯವನ್ನು ಖರೀದಿಸಿದ ದಿನದಿಂದ ಅಮೆರಿಕದ ವಿಸ್ತಾರ ಅಗಾಧವಾಗಿ ಹೆಚ್ಚಾಗುತ್ತಾಬಂತು. ಮುಂದೆ ಕ್ಯಾಲಿಫೋರ್ನಿಯದಂತಹ ವಿಶಾಲರಾಜ್ಯ ಕೈಗೆ ದಕ್ಕಿದ್ದು ಅಮೆರಿಕದ ಅದೃಷ್ಟ.

 

-ಚಿತ್ರ , ಹೊರಂಲವೆಂ