’ಸೇಂಟ್ ಲೂಯಿ, ಗೇಟ್ವೆ ಆರ್ಚ್’ !

’ಸೇಂಟ್ ಲೂಯಿ, ಗೇಟ್ವೆ ಆರ್ಚ್’ !

ಬರಹ

’ಸೇಂಟ್ ಲೂಯಿ ಗೇಟ್ವೆ ಆರ್ಚ್’

೧೮೦೩ ರಿಂದ ೧೮೯೦ ರವರೆಗೆ ನಡೆದ ಅಮೆರಿಕದ ನಾಗರಿಕರ ಪಶ್ಚಿಮದಿಕ್ಕಿಗೆ ಬೆಳೆಸಿದ ವಲಸೆಪ್ರಯಾಣಕ್ಕೆ, ಒಂದು ಸುದೀರ್ಘವಾದ ಇತಿಹಾಸವಿದೆ. ೧೮೦೩ ರಲ್ಲಿ ಬಳಕೆಯಲ್ಲಿದ್ದ ’ಫರ್ ಮಾರಾಟದಕೇಂದ್ರ,’ ದಂತಿದ್ದ ಈಸ್ಥಳದಲ್ಲೇ ಚಾರಿತ್ರ್ಯಿಕ, ’ಸೇಂಟ್ ಲೂಯಿ ಗೇಟ್ವೆ ಆರ್ಚ್’ನ್ನು ಅನಂತರ ನಿರ್ಮಿಸಲಾಯಿತು. ೬೩೦ ಅಡಿ ಎತ್ತರದ ಅದ್ಭುತವಾದ ಸ್ಟೀಲ್ ನಲ್ಲಿ ನಿರ್ಮಿಸಿದ ಈ ಸ್ಮಾರಕ, ಒಂದು ತಲೆಬಾಗಿಲಿನತರಹವಿದ್ದು, ಸೇಂಟ್ ಲೂಯಿಸ್ ಪ್ರಾಂತ್ಯದ ಪ್ರಾಮುಖ್ಯತೆಯನ್ನು ಇಂದಿಗೂ ವಿಶ್ವದ ಜನರಿಗೆ ತಿಳಿಸುವ ಪ್ರತೀಕವಾಗಿ ಶೋಭಿಸುತ್ತಿದೆ.

ಲೂಯಿಸ್ ಮತ್ತು ಕ್ಲಾರ್ಕ್ ರವರು ಬಹು ಉತ್ಸಾಹದಿಂದ ಕನಸುಕಾಣುತ್ತಿದ್ದ ಜಾಗ ! ಅವರಿಬ್ಬರೂ ಥಾಮಸ್ ಜೆಫರ್ಸನ್ ರವರ ಆಸೆಯಮೇರೆಗೆ ಅಮೆರಿಕದ ಪಶ್ಚಿಮಕ್ಕೆ ವಲಸೆಹೋಗಿ, ಅಲ್ಲಿನ ದುರ್ಗಮವಾದ ಕಾಡುಗಳು, ಹಾಗೂ ಸ್ಥಳೀಯಜನರ ಸಂಸ್ಕೃತಿಯನ್ನು ಅಮೆರಿಕದ ಜನತೆಗೆ ಪರಿಚಯಿಸಿದರು. ಆರ್ಚ್ ನ ಕೆಳಗಡೆಯ ಭಾಗದಲ್ಲಿ ಒಂದು ಸುಸಜ್ಜಿತವಾದ ’ವಸ್ತುಸಂಗ್ರಹಾಲಯ,’ ವಿದೆ. ಇದು ಅಮೆರಿಕದ ೧೯ ನೆಯ ಶತಮಾನದ ಪಶ್ಚಿಮದಿಶೆಯ ಬೆಳವಣಿಗೆಯ ದಾಖಲೆಗಳನ್ನು ನಮ್ಮೆಲ್ಲರಿಗೆ ಒದಗಿಸುತ್ತದೆ. ಥಾಮಸ್ ಜೆಫರ್ಸನ್ ರವರು, ಲ್ಯೂಸಿಯಾನ ಪ್ರಾಂತ್ಯವನ್ನು ಕೊಂಡು, ಈ ಅಭಿಯಾನವನ್ನು ಸುಸ್ಥಿರಗೊಳಿಸಿದರು. ಈ ಕಮಾನಿನಾಕಾರದ ಸ್ಮಾರಕ ಹಾಗೂ ಸೇತುವೆ, ಮಿಸಿಸಿಪ್ಪಿ ನದಿಯಕಡೆಯಿಂದ ನಗರದ ಸೇಂಟ್ ಲೂಯಿಸ್ ಪಟ್ಟಣದ ಡೌನ್ ಟೌನ್ ಗೆ ಒಂದು ದ್ವಾರದೋಪಾದಿಯಲ್ಲಿದೆ.

ಚಿತ್ರಪ್ರದರ್ಶನಲ್ಲಿ, ಕೆಲವು ಪ್ರಾತ್ಯಕ್ಷಿಕೆಗಳಿಗೆ ಕೆಲವೊಮ್ಮೆ ಹೆಸರನ್ನು ಕೊಡಲಾಗದಿದ್ದರೂ, ಆ ಕಾಲದ ಜನಜೀವನದ ಪ್ರತೀಕಗಳಗಿರುವುದರಿಂದ, ಚರಿತ್ರೆಯ ವಿದ್ಯಾರ್ಥಿಗಳಿಗೆ ಮಾಹಿತಿಗಳನ್ನು ನೀಡುವ ದಿಶೆಯಲ್ಲಿ ರಸಗವಳವಾಗಿದೆ.

-ನಾನೇ ನೋಡಿದ್ದು.