’ಸೇಂಟ್ ವರ್ಜಿನ್ ಮೇರಿ ಚರ್ಚ್', ಫುಲ್ಟನ್ !

’ಸೇಂಟ್ ವರ್ಜಿನ್ ಮೇರಿ ಚರ್ಚ್', ಫುಲ್ಟನ್ !

ಬರಹ

ಕ್ರಿಸ್ಟೋಫರ್ ರೆನ್ ಎಂಬುವರು, ವಿಶ್ವಯುದ್ಧದಲ್ಲಿ ವಿನಾಶದಹಂತದಲ್ಲಿದ್ದ ೧೭ನೇ ಶತಮಾನದ, ’ಸೇಂಟ್ ವರ್ಜಿನ್ ಮೇರಿ ಚರ್ಚ್ ನ್ನು’, ಲಂಡನ್ ನಲ್ಲಿ ಮರು-ಸ್ಥಾಪಿಸಿದರು. ರೆನ್ ಗ್ರೇಟ್ ಬ್ರಿಟನ್ ನಲ್ಲಿ ಸುಮಾರು ೫೩ ಚರ್ಚ್ ಗಳನ್ನು ನಿರ್ಮಿಸಿ ಎಲ್ಲರ ಪ್ರಸಂಶೆಗೆಪಾತ್ರರಾಗಿದ್ದರು. ಆದರೆ ಪುನಃ ೧೯೪೧ ರಲ್ಲಿ ಬ್ರಿಟನ್ ಮೇಲೆ ಜರ್ಮನ್ ದೇಶದ ಬಾಂಬ್ ದಾಳಿಯಿಂದ ಅನೇಕ ಕಟ್ಟಡಗಳು ಸ್ಮಾರಕಗಳೂ ನೆಲಸಮವಾದವು. ಅವುಗಳಲ್ಲಿ ಮೇರಿ ಚರ್ಚ್ ಕೂಡ ಒಂದು.

ಅಮೆರಿಕದೇಶದ ಮಿಸ್ಸೂರಿರಾಜ್ಯದಲ್ಲಿರುವ ಫುಲ್ಟನ್ ನಲ್ಲಿನ, ವೆಸ್ಟ್ ಮಿನ್ಸ್ಟರ್ ಕಾಲೇಜಿನ ಒಳ ಆಂಗಣದಲ್ಲಿ. ಲಂಡನ್ ನಿಂದ ಕಟ್ಟಡದ ಪ್ರತಿಕಲ್ಲುಗಳು ಹಾಗೂ ಅಲ್ಲಿ ಕೈಗೆ-ಸಿಕ್ಕ ಅವಶೇಷಗಳನ್ನು ಮರಮುಟ್ಟುಗಳನ್ನು ಎಲ್ಲಾ ಕಡೆಗಳಿಂದ ಅತ್ಯಂತ ಎಚ್ಚರಿಕೆಯಿಂದ ತಂದು, ಅದರ ಪ್ರಾಂಗಣದಲ್ಲಿನ ವಿಶಾಲ ಮೈದಾನದಲ್ಲಿ ಸ್ಥಾಪಿಸಿದರು. ಹಾಗೆಯೇ ’ಸರ್ ವಿನ್ ಸ್ಟನ್ ಚರ್ಚಿಲ್ ’ ರ ಸ್ಮಾರಕವನ್ನು ಚರ್ಚ್ ನ ಕೆಳಮಹಡಿಯಲ್ಲಿ ಸ್ಥಾಪಿಸಲಾಯಿತು.

ಅದರ ಹತ್ತಿರವೇ ಚರ್ಚಿಲ್ಲರ ಅತಿ ಪ್ರತಿಭಾನ್ವಿತ-ಮೊಮ್ಮಗಳಾದ, ’ಎಡ್ವಿನಾಸ್ಯಾಂಡೀಸ್” ಳ ವಿಶಿಷ್ಠ ಶಿಲ್ಪ, " ಬ್ರೇಕ್ ಥ್ರೂ’ ರಚಿಸಲಾಯಿತು ! ಆಕೆ, ಬರ್ಲಿನ್ ವಾಲಿನ ಸ್ಥಳಕ್ಕೆ ಹೋಗಿ, ಅದರ ಏಳು ಭಾಗಗಳಿಂದ ತುಣುಕುಗಳನ್ನು ಪಡೆದು, ಅವುಗಳನ್ನು " ಬ್ರೇಕ್ ಥ್ರೂ’ ಶಿಲ್ಪದ ನಿರ್ಮಾಣದಲ್ಲಿ ಉಪಯೋಗಿಸಿಕೊಂಡಿದ್ದಾಳೆ. ಈ ಜಾಗದಲ್ಲೇ ಚರ್ಚಿಲ್ ಆಗಿನ ಸೋವಿಯಟ್ ಸಂಘದ ಕಾರ್ಯ-ವೈಖರಿಯನ್ನು ’ಕಬ್ಬಿಣದ ತೆರೆ ’ ಯೆಂದು ವರ್ಣಿಸಿಮಾಡಿದ ಭಾಷಣದ ಧ್ವನಿ-ಸುರಳಿಯನ್ನು ಈಗಲೂ ನಾವು ಸ್ಪಷ್ಟವಾಗಿ ಆಲಿಸಬಹುದು. ಇದು ’ಶೀತಸಮರ’ ದ ಮೊದಲಿಗಿನ ಭಾಷಣ.

ಆದರೆ ಈ ಪ್ರತೀತಿಯನ್ನು ಒದ್ದು ಬೀಳಿಸಿದ ಇನ್ನೊಬ್ಬ ಸೋವಿಯಟ್ ಮಹಾನ್ ನಾಯಕ, ’ಮಿಖೇಲ್ ಗರ್ಬಚೋವ್’ ಇಲ್ಲಿಗೆ ಬಂದು ಭಾಷಣಮಾಡಿದ್ದರು ! ಇವೆಲ್ಲ ಚಾರಿತ್ರ್ಯಿಕ ಸತ್ಯಗಳು, ಹಾಗೂ ಅವುಗಳ ಪುನರ್ಸ್ಥಾಪನೆಯ ಸನ್ನಿವೇಷಗಳು, ನಮ್ಮನ್ನು ಹೊಡೆದೆಬ್ಬಿಸಿ, ನಮ್ಮ ಮುಂದಿನ ಯುವ-ಜನಾಂಗಕ್ಕೆ ದಾರಿತೋರುವ ಕೈಮರಗಳಂತಿವೆ.