’ಹೀರೊ" ರಹಿತ ಹೀರೊಗಳ ಕನ್ನಡ ಸಿನಿಮಾ ’ನವಗ್ರಹ’

’ಹೀರೊ" ರಹಿತ ಹೀರೊಗಳ ಕನ್ನಡ ಸಿನಿಮಾ ’ನವಗ್ರಹ’

ಬರಹ

ನಮ್ಮ ಸ್ಯಾಂಡಲ್ ವುಡ್ ಕನ್ನಡ ಚಿತ್ರರಂಗ.ಬಾಲಿವುಡ್ ಗೆ ಸಮನಾಗಿ ಬೆಳೆಯ ಬೇಕೆಂದರೆ ಏನು ಮಾಡಬೇಕು...?

೧. ಅವರ ಸಮವಾಗಿ ಯೋಚನೆ ಮಾಡಬೇಕು.
ಅಥವಾ
೨. ಅವರ ಯೋಚನೆಗಳನ್ನು ನಮ್ಮ ಪ್ರಾದೇಶಿಕತೆಗೆ ತಕ್ಕಂತೆ ಪರಿ’ವರ್ತಿಸಿ’ ನಮ್ಮ ಸಿನಿಮಾಗಳನ್ನು ಮಾಡಬೇಕು.(ಇದು ಕನ್ನಡ ಚಿತ್ರರಂಗವನ್ನು ಬಾಲಿವುಡ್ಗೆ ಸಮನಾಗಿ ತರಬೇಕೆಂದು ಯೋಚಿಸುವವರಿಗೆ ಮಾತ್ರ.)

ಸರಿ ಸಮನಾಗುವ ಅವಶ್ಯಕತೆ ಇದೆಯೇ ಇಲ್ಲವೆ ಎಂದು ಯೋಚಿಸುವಷ್ಟು ಸಮಯ ಇವರಲ್ಲಿಲ್ಲ ಬಿಡಿ.ಯಾಕೆಂದರೆ ಅಷ್ಟು ಯೋಚಿಸುವಷ್ಟರಲ್ಲಿ.ಇನ್ನೊಂದೆರೆಡು ಸಿನಿಮಾಗಳನ್ನು ನೋಡಿ ಅಲ್ಲಿಯ ಯೋಚನೆಗಳನ್ನು ಇಲ್ಲಿಗೆ ಹೇಗೆ ಪರಿವರ್ತಿಸಬಹುದಲ್ಲ ಎಂದು ಯೋಚಿಸುವುದರಲ್ಲಿ ಮಗ್ನರಾಗಿರುತ್ತಾರೆ.

ಕನ್ನಡದ ಮನರಂಜನಾ ಸಿನಿಮಾಗಳಲ್ಲಿ (ನನ್ನ ತಿಳುವಳಿಕೆಗೆ ತಿಳಿದ ಮಟ್ಟಿಗೆ) ಮೊಟ್ಟ ಮೊದಲ ’ಹೀರೊ’ ರಹಿತ ಕನ್ನಡ ಸಿನಿಮಾ ಒಂದು ಬಂದಿದೆ. ಅದು ತೂಗುದೀಪ ಪ್ರೊಡಕ್ಷನ್ ರವರ "ನವಗ್ರಹ". ಆರಡಿ ಎತ್ತರದ ಅಜಾನುಬಾಹು ದರ್ಶನ್ ಸೇರಿ ಕನ್ನಡದ ಏಳು ಜನ ಖ್ಯಾತ ನಟರ ಏಳು ಜನ ಪುತ್ರರಿದ್ದು ಈ ಸಿನಿಮಾದಲ್ಲಿ ’ಹೀರೊ’ಗಳಿಲ್ವೆ ಎಂದು ಆಶ್ಚರ್ಯ ಚಕಿತ,ಖಚಿತರಾಗಿ ಕೇಳಿದರೂ, ಉತ್ತರ ಹೌದು .

ಯಾಕೆಂದರೆ ತೀರ ಇತ್ತೀಚಿನವರೆಗೂ ನಮ್ಮ ಭಾರತೀಯ ಚಿತ್ರಗಳಲ್ಲಿ ಕಾಣುತ್ತಿದ್ದ ನಾಯಕ ಪ್ರದಾನಾದಾರಿತವಾಗಿ ತಯಾರಗುತ್ತಿದ್ದ ಸಿನಿಮಾಗಳಲ್ಲಿ(ಪಾಶ್ಚಿಮಾತ್ಯ ಚಿತ್ರಗಳ ಪ್ರಬಾವ ಹಿಂದಿ ಸಿನಿಮಾಗಳಲ್ಲಿ ’ನುಗ್ಗುವ’ವರೆಗೂ) ’ಹೀರೊ’ ಯಾವಾಗಲೂ ’ಹೀರೊ’ ಆಗಿಯೇ ಇರುತ್ತಿದ್ದ, ’ಒಳ್ಳೆಯ’ವನಾಗಿಯೇ ಇರುತ್ತಿದ್ದ. ’ಒಳ್ಳೆಯ’ನೆಂದರೆ ಹತ್ತು ಜನರಿಂದ ಒಪ್ಪಲ್ಪಡುತ್ತಿರುವವನು, ಅಥವಾ ಹತ್ತು ಜನರು ಒಪ್ಪುವಂತ ಕೆಲಸಗಳನ್ನು ಮಾಡುವವನು.(’ಹತ್ತು’ ಜನರೆಂದರೆ ಹತ್ತೇ ಜನರಲ್ಲ, ಹತ್ತು ಜನ ಉಪಯೋಗಿಸುತ್ತಾರಾದ್ದರಿಂದ ನಾನು ಇಲ್ಲಿ ಬಳಸಿದ್ದೇನೆ)

ಉದಾ; ’ ರಂಗ್ ದೇ ಬಸಂತ” ಸಿನಿಮಾದಲ್ಲಿ ದೇಶದ ಗ್ರುಹಮಂತ್ರಿಯನ್ನು ಕೊಲ್ಲುವ ಯುವಕರನ್ನು ಮಾದ್ಯಮದವರಿಂದ ಹಿಡಿದು ಯುವ ಜನತೆಯೆಲ್ಲಾ ಅವರನ್ನು ’ಹೀರೊ’ಗಳನ್ನಾಗಿಸುತ್ತಾರೆ(ಸಿನಿಮಾದಲ್ಲಿ). ಅಥವಾ ಅವರು ಕೊಲ್ಲುವುದನ್ನ ಸಮರ್ಥಿಸಿ ಕೊಂಡು ಅವರನ್ನು ಕಥೆಯ ’ಹೀರೊ’ಗಳನ್ನಾಗಿಸುವುದಕ್ಕೆಂದೇ ಕಥೆಯಲ್ಲಿ ಅವರಿಗೆ ಅನಿವಾರ್ಯ ಪರಿಸ್ಥಿತಿಗಳನ್ನು ಸ್ರುಷ್ಟಿಸುತ್ತಾರೆ.

ಇಂತಹ ಕಥೆಗಳು ನಮ್ಮ ಕನ್ನಡದಲ್ಲಿ ಸಾಕಷ್ಟು ಬಂದಿವೆ.

ಆದರೆ ಈ ಸಿನಿಮಾದಲ್ಲಿ ’ಆ’ ರೀತಿ ಯ ’ಕಥೆ’ಇಲ್ಲ. ಕಥೆಯಲ್ಲಿ ಪ್ರದಾನ ಪಾತ್ರಧಾರಿ ದರ್ಶನ್, ಪ್ರದಾನ ಪಾತ್ರದಾರಿಯಾಗಿಯೂ ಸಹ, ಕೊನೆಯಲ್ಲಿ ಮಾಮೂಲಿ ಇನ್ನಿತರ ಸಿನಿಮಾಗಳಲ್ಲಿರುವಂತ ’ಹೀರೊ’ ಆಗದೆ ಹಳೆಯ ’ಖಳ’ನ ಮಗ ಹೊಸ ರೀತಿಯ ಖಳ’ನಾಯಕ’ನಾಗುತ್ತಾನೆ.ಇದರಲ್ಲಿ ಇನ್ನಿತರ ಆರು ’ಖಳ’ಪುತ್ರರು ಇದ್ದರೂ ಸಹ ಅವ್ರು ಪರಿಸ್ಥಿತಿಗಳ ಅನಿವಾರ್ಯದಿಂದ ಖಳನ ಜೊತೆಗೂಡುವ ಕಳ್ಳರು ಮಾತ್ರ ಆಗಿರುತ್ತಾರೆ.

ಹಾಗಾಗಿ ಈ ಸಿನಿಮಾದಲ್ಲಿ ನಮ್ಮ ಸಾಮಾನ್ಯ ಸಿನಿಮಾಗಳಲ್ಲಿ ಕಾಣುವ ಒಳ್ಳೆಯವನೆನಿಸಿಕೊಳ್ಳುವ ’ಹೀರೊ" ಇಲ್ಲಿ ’ಮಾಯ’.

ಈ ಸಿನಿಮಾ ಹಿಂದಿ ಸಿನಿಮಾಗಳ ಕಥೆಗಳ ಸಂಗಮ, ಅಥವಾ ಕಥಾಂಶಗಳ ಸಂಗಮ. ಆದರೆ ಪಕ್ಕಾ ಕರ್ನಾಟಕ ಸಿನಿಮಾ. ಯಾಕೆಂದರೆ ಮೈಸೂರು ಅಂಬಾರಿ ಕರ್ನಾಟಕದವರಿಗೆ ಮಾತ್ರ ಸ್ವಂತ.ಅದನ್ನು ಕಾಪಾಡಬೇಕೆಂದರೂ ಕರ್ನಾಟಕದವ್ರೆ ಬೇಕೂ,ಕದಿಯಬೇಕೆಂದರೂ ಕರ್ನಾಟಕದವ್ರೆ ಬೇಕು ಅಥವ ಅವರಿಂದ ಮಾತ್ರ ಸಾದ್ಯ.

ಮನುಷ್ಯನಲ್ಲಿ ದುರಾಸೆ ಮೂಡಬೇಕೆಂದರೆ ಅದಕ್ಕೆ ದೈವ ಪ್ರೇರೆಣೆಯೆ ಕಾರಣ,ಕದಿಯಲ್ಪಟ್ಟ ಅಂಬಾರಿ ಖಂಡಿತ ವಾಪಸ್ಸು ಸಿಗುತ್ತದೆ.ಕಾರಣ ಅದನ್ನು ತಾಯಿ ಚಾಮುಂಡೇಶ್ವರಿ ಕಾಪಾಡ್ತ ಇರೋದು. ಇಂತಹ ಲಾಜಿಕ್ಕಿನ ವಿಬಿನ್ನ ಸಿನಿಮಾ ಮಾಡೋದು ಅಷ್ಟು ಸುಲಬವಲ್ಲ. ಆದರೆ ನಿರ್ದೇಶಕರು ಮಾಡಿದ್ದಾರೆ. ಮಾಡಿ ಗೆದ್ದಿದ್ದಾರೆ.

ಬೇರೆ ಭಾಷೆಗಳನ್ನು ’ಕಡಿಮೆ’ ನೋಡುವ ಯಾರನ್ನು ಬೇಕಾದರು ಕೊನೆಯವರೆಗೂ ಕುತೂಹಲ ಹಿಡಿದಿಡುವಲ್ಲಿ ಸಿನಿಮಾ ಯಷಸ್ವಿಯಾಗಿದೆ. ಈಗಿನ ಕಾಲದಲ್ಲಿ ಅಂತಹವರು ಯಾರೆಂದು ಮಾತ್ರ ಕೇಳಬೇಡಿ, ಅದು ಚಿದಂಬರ ರಹಸ್ಯ.

ಈ ಸಿನಿಮಾದ ವಿಶೇಷತೆ ಏನೆಂದರೆ ತಮ್ಮದೇನಿರ್ಮಾಣದ ಸಿನಿಮಾದಲ್ಲಿ ಕೆಲವೊಂದು ಪಂಚಿಂಗ್ ಡೈಲಾಗ್ ಗಳ ನಡುವೆ (ಅದು ದರ್ಶನ್ ರ ಖ್ಯಾತಿಗೆ ಅನಿವಾರ್ಯ ಕೂಡ) ತಮ್ಮನ್ನೆ ಲ್ಲೂ ವೈಭವೀಕರಿಸಿಕೊಳ್ಳದೆ, ’ಸಪ್ತ’ ನಟರಿಗೂ ನಟನೆಗೆ ’ಸಮ’ ಅವಕಾಶ ನೀಡಿರುವದರಲ್ಲಿ ನಿರ್ದೇಶಕರ ಪರಿಶ್ರಮ ಮೆಚ್ಚುವಂತಹುದು.ತಮ್ಮ ಎರೆಡನೇ ಸಿನಿಮಾದಲ್ಲಿ ಇಂತಹ ವಿಭಿನ್ನ ಹಾಗು ಕನ್ನಡದಲ್ಲಿ ಮೊದಲ ಪ್ರಯತ್ನ ವೆನ್ನಬಹುದಾದ ಕಥೆಗೆ ಕೈ ಹಾಕಿದ ನಿರ್ದೇಶಕರಿಂದ ಮುಂದೆ ತಮ್ಮ ಸ್ವಂತ ಕಥೆ, ಕಥಾಂಶಗಳ ಸಿನಿಮಾಗಳನ್ನು ಖಂಡಿತ ನಿರೀಕ್ಷಿಸಬಹುದು.